ಬೆಂಗಳೂರು: ಕೈಗಾರಿಕೋದ್ಯಮ, ಶಿಕ್ಷಣ ರಂಗಗಳ ಸಹಭಾಗಿತ್ವಕ್ಕೆ ಸಚಿವರ ಮಟ್ಟದ ಉನ್ನತ ಸಮಿತಿ ರಚಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅವರು ರಾಮಯ್ಯ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಏರ್ಪಡಿಸಿದ್ದ 'ಎಕ್ಸೀಡ್' (ಎಕ್ಸಿಕ್ಯುಟಿವ್ ಎಜುಕೇಶನ್ ಪ್ರೋಗ್ರಾಮ್) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.


ಇದನ್ನೂ ಓದಿ: ಬೆಂಗಳೂರಿನಲ್ಲಿ ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಸಾವು..!


“ರಾಜ್ಯದಲ್ಲಿ ಕೈಗಾರಿಕೋದ್ಯಮ ಮತ್ತು ಶಿಕ್ಷಣ ರಂಗಗಳ ಸಹಭಾಗಿತ್ವಕ್ಕೆ ಸಚಿವರ ಮಟ್ಟದ ಉನ್ನತ ಸಮಿತಿ ರಚಿಸಲಾಗುವುದು. ಇದರಲ್ಲಿ ತಮ್ಮೊಂದಿಗೆ ಉನ್ನತ ಶಿಕ್ಷಣ, ಐ.ಟಿ-ಬಿ.ಟಿ, ವೈದ್ಯಕೀಯ ಶಿಕ್ಷಣ, ಸಣ್ಣ ಕೈಗಾರಿಕೆ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವರುಗಳು ಇರಲಿದ್ದಾರೆ” ಎಂದು ಅವರು ಹೇಳಿದರು.


ಇದನ್ನೂ ಓದಿ: ದೌರ್ಜನ್ಯಕ್ಕೊಳಪಟ್ಟವರಿಗೆ ನ್ಯಾಯ ದೊರಕಿಸಿಕೊಡಲು ನಮ್ಮ ಸರ್ಕಾರ ಬದ್ಧ"-ಸಿಎಂ ಸಿದ್ದರಾಮಯ್ಯ


“ಕೈಗಾರಿಕೆ ಮತ್ತು ಶಿಕ್ಷಣರಂಗ ಜತೆಜತೆಯಾಗಿ ಹೆಜ್ಜೆ ಇಟ್ಟರೆ ಅದು ಅದ್ಭುತ ಯಶಸ್ಸನ್ನು ತಂದುಕೊಡಲಿದೆ. ತಮಗೆ ಯಾವ ರೀತಿಯ ಕೌಶಲ್ಯ ಇರುವವರು ಬೇಕು ಎನ್ನುವುದನ್ನು ಉದ್ಯಮಿಗಳು ತಿಳಿಸಿದರೆ ಅದಕ್ಕೆ ಪೂರಕವಾಗಿ ಶೈಕ್ಷಣಿಕ ವಲಯ ಕೆಲಸ ಮಾಡಲಿದೆ.” ಎಂದು ಭರವಸೆ ನೀಡಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿ ಶ್ರೀ ಎಂ ಆರ್ ಆನಂದರಾಮ್, ಶ್ರೀ ಸತೀಶ್ ರಾಮಯ್ಯ, ಉದ್ಯಮಿ ಶ್ರೀ ಮದನ್ ಪದಕಿ, ಶ್ರೀಮತಿ ಅರುಂಧತಿ ರಾವ್, ಟಿವಿಎಸ್ ಮೋಟಾರ್ಸ್  ಉಪಾಧ್ಯಕ್ಷರಾದ ಶ್ರೀ ಎಸ್ ದೇವರಾಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.