Cauvery Water Dispute: 10 ಸಾವಿರ ಕ್ಯೂಸೆಕ್ಸ್ ಒಳಹರಿವು ಇದೆ ಎಂದು ಏಕೆ ಹೇಳ್ಬೇಕಿತ್ತು?- ಬೊಮ್ಮಾಯಿ
Cauvery Water Sharing Dispute: CWRC ಮತ್ತೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಹೇಳಿದ್ದು, ಅವರದು ಏನೇ ಆದೇಶ ಬಂದರೂ ರಾಜ್ಯ ಸರ್ಕಾರ ಒಪ್ಪಬಾರದು. ತಕ್ಷಣ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಬೇಕೆಂದು ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: KRS ಡ್ಯಾಂನಲ್ಲಿ 10 ಸಾವಿರ ಕ್ಯೂಸೆಕ್ಸ್ ಒಳಹರಿವು ಹೆಚ್ಚಾಗಿದೆ ಅಂತಾ ಏಕೆ ಹೇಳಬೇಕಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ಈ ಬಗ್ಗೆ ಏನೇ ಆದೇಶ ಬಂದ್ರೂ ಒಪ್ಪದೆ ನಾಳೆಯೇ ಸುಪ್ರೀಂಕೋರ್ಟಿಗೆ ಹೋಗಬೇಕು. ಆದೇಶ ಬರುವ ಮೊದಲೇ 10 ಸಾವಿರ ಕ್ಯೂಸೆಕ್ಸ್ ಒಳಹರಿವು ಹೆಚ್ಚಾಗಿದೆ ಅಂತಾ CWRC ಮುಂದೆ ಹೇಳುವ ಅವಶ್ಯಕತೆ ಏನಿತ್ತು? ಅಂತಾ ಪ್ರಶ್ನಿಸಿದೆ.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ಬಿಡುಗಡೆ ವಿರೋಧಿಸಿ ಬೆಂಗಳೂರು ಬಂದ್
ಇದರ ಪರಿಣಾಮ ಏನಾಗಲಿದೆ, ಏನೇ ಆಗಲಿ CWMA ಆಜ್ಞೆ ವೈಜ್ಞಾನಿಕವಾಗಿಲ್ಲ, ಇದರ ಬಗ್ಗೆ ಗ್ರೌಂಡ್ ರಿಪೋರ್ಟ್ ಇಲ್ಲ. ನಾವು ಸುಪ್ರೀಂಕೋರ್ಟ್ ಮುಂದೆ ಹೋಗಬೇಕು. ನಮ್ಮ ಈ ಪರಿಸ್ಥಿತಿ ನಿಭಾಯಿಸಲು ಕಾನೂನು ರಣನೀತಿ ಡಿಫೆನ್ಸೀವ್ ಆಗಿದೆ. ನಮ್ಮ ವಕೀಲರಲ್ಲಿ ಅಸಮರ್ಥತೆ ಇಲ್ಲ, ರಾಜ್ಯದ ನಾಯಕರ ನಿರ್ಲಕ್ಷ್ಯವಿದೆ. ಈ ರೀತಿ ನಿರ್ಲಕ್ಷ್ಯ ಹೇಳಿಕೆಯನ್ನು ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಗಂಭೀರವಾಗಿ ತೆಗೆದುಕೊಂಡ್ರೆ ಮಾತ್ರ ಎದುರಿಸಬಹುದು ಅಂತಾ ಹೇಳಿದ್ದಾರೆ.
ನಮ್ಮ ಪರಿಸ್ಥಿತಿ ಏನಿದೆ ಅಂತಾ ತಿಳಿಸಬೇಕಿದೆ. ನಮಗೆ ಕುಡಿಯುವ ನೀರಿಲ್ಲ ಅಂತಾ ಹೇಳಬೇಕು. CWRC ಸಭೆ ನಡೆಯುವಾಗ 10 ಸಾವಿರ ಕ್ಯೂಸೆಕ್ಸ್ ಒಳಹರಿವು ಇದೆ ಅಂತಾ ಹೇಳುವ ಔಚಿತ್ಯ ಏನಿತ್ತು..? ಅವರಿಗೆ ಆದೇಶ ಮಾಡುವಾಗ ಇದು ಪರಿಣಾಮ ಬೀರಲಿದೆ. ಇದರ ಪರಿಣಾಮ ಬೇರೆ ರೀತಿ ಎದುರಾಗಲಿದೆ. ಈಗ ನಮಗಿರುವ ದಾರಿ ಒಂದೇ, ಬೀದಿಗಿಳಿದು ಪ್ರತಿಭಟನೆ ಮಾಡುವುದು ಅಂತಾ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಮುಂದುವರೆದ ಅನ್ನದಾತರ ಆಕ್ರೋಶ
ಜನರ ಆಕ್ರೋಶ CWRC, ಸುಪ್ರೀಂಕೋರ್ಟ್ ಗಮನಕ್ಕೂ ಬರಲಿ. ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ಸ್ ನೀರು ಬಿಟ್ರೆ 5 TMC ನೀರಾಗಲಿದೆ. ಬಿಳಿಗುಂಡ್ಲುಗೂ ಬಿಡಬೇಕು. ಕೆಆರ್‌ಎಸ್‍ಗೂ ಬಿಡಬೇಕು. 2 ಸಾವಿರ ಕ್ಯೂಸೆಕ್ಸ್ ಹೆಚ್ಚು ನೀರು ಬಿಟ್ಟಾಗ ಮಾತ್ರ ಪೂರ್ಣ ಆಗಲಿದೆ. ಅವರು ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ವಕೀಲರ ಬದಲಾವಣೆ ಮಾಡುವುದು ಅವರಿಗೆ ಬಿಟ್ಟಿದ್ದು ಅಂತಾ ಅವರು ಹೇಳಿದ್ದಾರೆ.
ಈ ಹಿಂದೆ ನೋಡಿದ್ರೆ ಹಾಗೆ ಅನ್ನಿಸ್ತಿದೆ. ಸೇಲ್ಸ್ ವ್ಯವಹಾರ ನೋಡಿದ್ರೆ, ಡಿಸ್ಕೌಂಟ್ ಅಂತಾ ಹಾಕಿ ಮಾರ್ತಾರೆ. ಹಾಗೆಯೇ ಇದು ಆಗಿದೆ. ಕಾವೇರಿ ಜೊತೆಗೆ ನಾವು ಕೃಷ್ಣೆ ಹೋರಾಟವನ್ನೂ ಮಾಡಬೇಕು. ಅದಕ್ಕೆ ನಾವು ಬದ್ಧರಾಗಿದ್ದೇವೆ ಅಂತಾ ಬೊಮ್ಮಾಯಿ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.