ಬೆಂಗಳೂರು: ಸ್ತಬ್ಧಚಿತ್ರ ವಿವಾದ(Tableaue Controversy)ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಸಚಿವರಾದ ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ನಾಯಕರು ತರಹೇವಾರಿ ಹೇಳಿಕೆಗಳ ಮೂಲಕ ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಸಾಬೀತುಪಡಿಸುತ್ತಿದ್ದಾರೆ’ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

‘ಕೇರಳದ ನಾರಾಯಣ ಗುರು(Narayana Guru Tableau) ಸ್ತಬ್ಧಚಿತ್ರ ನಿರಾಕರಣೆಗೆ ಅಲಿಖಿತ ಪೂರ್ವನಿದರ್ಶನ ಕಾರಣ ಎಂದು ಹೇಳಿರುವ ಸಚಿವ ಪ್ರಹ್ಲಾದ ಜೋಷಿಯವರು ‘ಹೇಳಿಕೆ ನೀಡುವ ಮೊದಲು ದೃಡಪಡಿಸಿಕೊಳ್ಳಬೇಕಿತ್ತು ಎಂದು ನನಗೆ ಪುಕ್ಕಟೆ ಸಲಹೆ ನೀಡಿದ್ದಾರೆ. ದಯವಿಟ್ಟು ಅವರು ಈ ಅಲಿಖಿತ ಪೂರ್ವನಿದರ್ಶನ ಏನು ಎನ್ನುವುದನ್ನು ಸ್ಪಷ್ಟಪಡಿಬೇಕು. 3 ವರ್ಷಗಳಿಗೊಮ್ಮೆ ಮಾತ್ರ ಸ್ತಬ್ಧಚಿತ್ರಕ್ಕೆ ರಾಜ್ಯಗಳಿಗೆ ಅವಕಾಶ ಎನ್ನುತ್ತಾರೆ ರಾಜ್ಯದ ಇಬ್ಬರು ಸಚಿವರು, ಅಲಿಖಿತ ಪೂರ್ವನಿದರ್ಶನ ಇದೆ ಎನ್ನುತ್ತಾರೆ ಕೇಂದ್ರ ಸಚಿವರು, ಕೇರಳ ಸರ್ಕಾರವೇ ನಾರಾಯಣಗುರು ವಿರೋಧಿ ಎನ್ನುತ್ತಾರೆ ಬಿಜೆಪಿ ವಕ್ತಾರರು. ಇದರಲ್ಲಿ ಯಾವುದು ನಿಜ ಎನ್ನುವುದನ್ನು ಪ್ರಧಾನಿ ಮೋದಿಯವರೇ ಸ್ಪಷ್ಟಪಡಿಸಬೇಕು’ ಅಂತಾ ಹೇಳಿದ್ದಾರೆ.


Weekend Curfew: ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ವಿರುದ್ಧ ಬಿಜೆಪಿಯಲ್ಲೇ ಮೂಡಿದೆಯೇ ಅಸಮಾಧಾನ!


‘ಗಣರಾಜ್ಯೋತ್ಸವ(Republic Day 2022) ಸ್ತಬ್ಧಚಿತ್ರಕ್ಕೆ 3 ವರ್ಷಗಳಿಗೊಮ್ಮೆ ಮಾತ್ರ ರಾಜ್ಯಗಳಿಗೆ ಅವಕಾಶ ಎಂದಾದರೆ ನಮ್ಮ ಕರ್ನಾಟಕಕ್ಕೆ ಸತತ 13ನೇ ಬಾರಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಹೇಗೆ ನೀಡಲಾಯಿತು? ಎನ್ನುವುದನ್ನು ಸಚಿವರಾದ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ತಿಳಿಸಬೇಕು.


ಇಂತಹ ಹಸಿ ಸುಳ್ಳುಗಳು ಸಚಿವರಿಗೆ ಶೋಭೆ ತರುವುದಿಲ್ಲ. ಕೇರಳ ಸರ್ಕಾರ ಪ್ರಸ್ತುತ ಪಡಿಸಿದ್ದ ಜಟಾಯು ಸ್ತಬ್ಧಚಿತ್ರಕ್ಕೆ ಒಪ್ಪಿಗೆ ನೀಡದೆ, ಅದರ ಮುಂದೆ ಶಂಕರಾಚಾರ್ಯರ ಪ್ರತಿಕೃತಿಯನ್ನು ಕೂರಿಸುವಂತೆ ಕೇಂದ್ರ ಸರ್ಕಾರ(BJP Government) ಒತ್ತಡ ಹೇರಲು ಕಾರಣ ಏನು? ಕೇರಳ ಸರ್ಕಾರ ಸೂಚಿಸಿದ ನಾರಾಯಣ ಗುರುಗಳ ಪ್ರತಿಕೃತಿಯನ್ನು ನಿರಾಕರಿಸಲು ಕಾರಣ ಏನು? ಕೇಂದ್ರ ಬಿಜೆಪಿ ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು’ ಅಂತಾ ಆಗ್ರಹಿಸಿದ್ದಾರೆ.


ಬೈಕ್ ಮಾರಾಟಗಾರರೇ ಎಚ್ಚರ! ಸ್ಕೂಟರ್ ಜತೆ 1 ಲಕ್ಷ ಹಣವನ್ನೂ ಹೊತ್ತೊಯ್ದ ಚಾಲಾಕಿ ಚೋರ


‘ಕೇರಳ ರಾಜ್ಯದಲ್ಲಿ ಇಲ್ಲಿಯ ವರೆಗೆ ಬಿಜೆಪಿ(BJP)ಗೆ ನೆಲೆ ಊರಲು ಸಾಧ್ಯವಾಗದಿರುವುದು ಮತ್ತು ನಾರಾಯಣ ಗುರುಗಳ ಅನುಯಾಯಿಗಳೇ ಬಹುಸಂಖ್ಯೆಯಲ್ಲಿರುವ ಆ ರಾಜ್ಯದ ಜನ ಸತತವಾಗಿ ಬಿಜೆಪಿಯನ್ನು ತಿರಸ್ಕರಿಸುತ್ತಾ ಬಂದಿರುವುದು ನಾರಾಯಣ ಗುರುಗಳ ಬಗ್ಗೆ ಬಿಜೆಪಿಯ ಪೂರ್ವಾಗ್ರಹಕ್ಕೆ ಕಾರಣ ಇರಬಹುದೇ? ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಇಲ್ಲವೇ ಚಿದಂಬರನ್ ಅವರ ಬಗ್ಗೆ ಸೈದ್ಧಾಂತಿಕ ಇಲ್ಲವೇ ಬೇರೆ ಕಾರಣಗಳ ವಿರೋಧವಿದ್ದರೆ ಬಿಜೆಪಿ ಧೈರ್ಯದಿಂದ ಅದನ್ನು ವ್ಯಕ್ತಪಡಿಸಬೇಕು. ಇದರ ಬದಲಿಗೆ ತನ್ನ ಸೈದ್ಧಾಂತಿಕ ವಿರೋಧವನ್ನು ಬಚ್ಚಿಟ್ಟುಕೊಂಡು ತಾಂತ್ರಿಕ ಕಾರಣ ನೀಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು’ ಅಂತಾ ಸಿದ್ದರಾಮಯ್ಯ ಗುಡುಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.