ಬೆಂಗಳೂರು: ನೀವೆನಾದರೂ ನಿಮ್ಮ ವಾಹನವನ್ನು ಸೆಕೆಂಡ್ ಹ್ಯಾಂಡ್ ಗೆ ಮಾರಲು ಬಯಸಿದ್ದರೆ ತುಂಬಾ ಎಚ್ಚರವಾಗಿರಿ. ಸ್ವಲ್ಪ ಯಾಮಾರಿದರೂ ನಿಮ್ಮ ಗಾಡಿ ಮಂಗಮಾಯವಾಗಬಹುದು.
ಇಲ್ಲೊಬ್ಬ ಚಾಲಾಕಿ ಕಳ್ಳ ಸ್ಕೂಟರ್ (Scooter) ಜತೆ ಹಣವನ್ನೂ ಕದ್ದು ಪರಾರಿಯಾಗಿದ್ದಾನೆ. ಬೈಕ್ ಖರೀದಿ ಸೋಗಿನಲ್ಲಿ ತಾನು ಹೇಳಿದ ಜಾಗಕ್ಕೆ ಕರೆಯಿಸಿಕೊಂಡ ಖದೀಮ, ಟೆಸ್ಟ್ ಡ್ರೈವ್ (Test Drive) ನೆಪದಲ್ಲಿ ಸ್ಕೂಟರ್ ಕದ್ದು ಎಸ್ಕೇಪ್ ಆಗಿದ್ದಾನೆ.
ಅಸಲಿಗೆ ಆಗಿದ್ದೇನು?
ಹೊಂಡಾ ಡಿಯೊ (Honda Dio) ಮಾರಾಟ ಮಾಡುವುದಾಗಿ ಬೆಂಗಳೂರಿನ ಪೀಣ್ಯದ ವಿಜಿನಾಪುರದ ಮಧು ಎಂಬುವವರು ಒಎಲ್ಎಕ್ಸ್ (OLX) ನಲ್ಲಿ ಪೋಸ್ಟ್ ಹಾಕಿದ್ದರು. ಚಿಕ್ಕಪ್ಪನಿಂದ ಪಡೆದಿದ್ದ 1.50 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಮಧು ತಮ್ಮ ಹೊಂಡಾ ಡಿಯೊ ಸ್ಕೂಟರ್ ಅನ್ನು ಮಾರಾಟ ಮಾಡಲು ತಯಾರಾಗಿದ್ದರು.
ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಜ.14ರಂದು ಮಧುಗೆ ಕರೆ ಮಾಡಿದ್ದಾರೆ. ತಾನು ಈ ಸ್ಕೂಟರ್ ಖರೀದಿಸುವುದಾಗಿ ಹೇಳಿದ್ದಾರೆ. ಬೆಂಗಳೂರಿನ ನಾಗಸಂದ್ರಕ್ಕೆ ಕರೆಸಿಕೊಂಡಿದ್ದಾರೆ. ಅವರು ಹೇಳಿದಂತೆ ಮ್ಮಧು ತಮ್ಮ ಬೈಕ್ (Bike) ಸಮೇತ ನಾಗಸಂದ್ರಕ್ಕೆ, ಆ ವ್ಯಕ್ತಿ ಹೇಳಿದ ಜಾಗಕ್ಕೆ ತೆರಳಿದ್ದಾರೆ.
ಆಗ ಆರೋಪಿ ಸ್ಕೂಟರ್ ಟೆಸ್ಟ್ ಡ್ರೈವ್ ನೋಡುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪಿಕೊಂಡ ಮಧು, ತಮ್ಮ ಸ್ಕೂಟರ್ ಕೀ ನೀಡಿ ಟೆಸ್ಟ್ ಡ್ರೈವ್ ನೋಡಿ ಎಂದಿದ್ದಾರೆ. ಇದೇ ಸಮಯ ಬಳಸಿಕೊಂಡ ಕಿಲಾಡಿ ಕಳ್ಳ, ಹೊಂಡಾ ಡಿಯೊ ಸ್ಕೂಟರ್ ಜೊತೆ ಡಿಕ್ಕಿಯಲ್ಲಿದ್ದ 1 ಲಕ್ಷ ಹಣದ ಸಮೇತ ಎಸ್ಕೇಪ್ ಆಗಿದ್ದಾನೆ. ಇದರಿಂದ ಇತ್ತ ಹಣವನ್ನೂ ಕಳೆದುಕೊಂಡು, ಸ್ಕೂಟರ್ ಸಹ ಇಲ್ಲದೆ ಮಧು ಕಂಗಾಲಾಗಿದ್ದಾರೆ.
ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಪೆಡ್ಲರ್ ಗಳ ಮೂಲಕ ಗಾಂಜಾ ತರಿಸಿ ಮಾರಾಟಕ್ಕೆ ಯತ್ನ: ಸಿಎಂ ಮನೆ ಭದ್ರತೆಯಲ್ಲಿದ್ದ ಇಬ್ಬರು ಪೊಲೀಸರ ಬಂಧನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.