ಬೆಂಗಳೂರು: ದೆಹಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್  ಜಾಥಾಗೆ (tractor parade) ಬೆಂಗಳೂರಿನಲ್ಲೂ ಬೆಂಬಲ ವ್ಯಕ್ತವಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ಮತ್ತು ಇತರ ರೈತ ನಾಯಕರ ನೇತೃತ್ವದಲ್ಲಿ ನಾಳೆ (ಮಂಗಳವಾರ) ಬೆಂಗಳೂರಿನಲ್ಲಿ ಟ್ಯಾಕ್ಟರ್ ಪರೇಡ್ ನಡೆಯುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ರಾಜ್ಯ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್  ಹೇಳಿಕೆ ಪ್ರಕಾರ ರಾಜ್ಯದ ವಿವಿಧೆಡೆಯಿಂದ 10ಸಾವಿರ ಟ್ರ್ಯಾಕ್ಟರ್ ಗಳು ಬೆಂಗಳೂರಿನಲ್ಲಿ (Bengaluru) ನಡೆಯುವ ಕಿಸಾನ್ ಟ್ರ್ಯಾಕ್ಟರ್ ಪರೇಡ್ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುತ್ತಿವೆ. ಸುಮಾರು 25 ಸಾವಿರ ರೈತರು (Farmers) ರಾಜ್ಯದ ಮೂಲೆ ಮೂಲೆಗಳಿಂದಲೂ ಬೆಂಗಳೂರಿಗೆ ಬರುತ್ತಿದ್ದಾರೆ.  ನೆಲಮಂಗಲ ನೈಸ್ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ (Freedom Park) ತನಕ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ. 
ರಾಮನಗರ ಕಡೆಯಿಂದ ಬರುವ ರೈತರು ಮತ್ತು ವಾಹನಗಳು ಬಿಡದಿ ಬಳಿ ಜಮಾವಣೆ ಗೊಳ್ಳಲಿವೆ. ತುಮಕೂರು ಕಡೆಯಿಂದ ಬರುವ ರೈತರು ಮತ್ತು ವಾಹನಗಳು ನೈಸ್ ಜಂಕ್ಷನ್ (Nice Junction) ಬಳಿ ಜಮಾವಣೆ ಗೊಳ್ಳಲಿದ್ದಾರೆ. ಹಲವು ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು  ರೈತ ಪರೇಡ್ ಗೆ ಬೆಂಬಲ ವ್ಯಕ್ತ ಪಡಿಸಿವೆ. ಈ ರೈತರ ಟ್ರ್ಯಾಕ್ಟರ್ ಪರೇಡ್ ಗೆ ಪ್ರತಿಪಕ್ಷಗಳೂ ಬೆಂಬಲಿಸುವ ಸಾಧ್ಯತೆಗಳಿವೆ.


ಇದನ್ನೂ ಓದಿ : ನಾಳೆ ದೆಹಲಿಯಲ್ಲಿ Farmers ನಡೆಸುವ ಟ್ರ್ಯಾಕ್ಟರ್ ಪರೇಡ್‌ನಲ್ಲಿ ಏನೇನಿರಲಿದೆ?


‘ರೈತ ಟ್ರ್ಯಾಕ್ಟರ್ ಪರೇಡ್ ತಡೆದರೆ ಪರಿಸ್ಥಿತಿ ವಿಕೋಪಕ್ಕೆ’
ರೈತರ ಟ್ರ್ಯಾಕ್ಟರ್ ಪರೇಡ್ ಗೆ ಪೊಲೀಸರು ಇನ್ನೂ ಅನುಮತಿ ನೀಡಿಲ್ಲ.ಅನುಮತಿ ಸಿಗುತ್ತೋ ಇಲ್ಲವೆ ಎಂಬ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟತೆ ಇಲ್ಲ.  ಈ ನಡುವೆ ಮಾತನಾಡಿರುವ  ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ರೈತರ ಟ್ರ್ಯಾಕ್ಟರ್ ಪರೇಡನ್ನು (tractor parade) ಸರಕಾರ ತಡೆದಿದ್ದೇ ಆದರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.  ರೈತರು ಶಾಂತಿಯುತವಾಗಿ ಪ್ರತಿಭಟನೆ (Protest) ನಡೆಸಲಿದ್ದಾರೆ. ರಾಜ್ಯದ ನಾಲ್ಕೂ ದಿಕ್ಕುಗಳಿಂದಲೂ ರೈತರು ಬೆಂಗಳೂರಿಗೆ ಆಗಮಿಸಲಿದ್ದಾರೆ. ರೈತರ ಶಾಂತಿಯುತ ಹೋರಾಟಕ್ಕೆ ಸರ್ಕಾರ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ


ನಾಳೆ ಸಾಧ್ಯವಾದಷ್ಟು ಮನೆಯೊಳಗೆ ಇರಿ.
ನಾಳೆ ಬೆಂಗಳೂರು ಸಂಚಾರ ಅಸ್ತವ್ಯಸ್ತ ಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ, ಟ್ರೈನ್ ಹಿಡಿಯುವವರು, ಏರ್ ಪೋರ್ಟ್ ಗೆ (Airport) ಹೋಗುವವರು ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಒಂದು ವೇಳೆ ರೈತರು ಟ್ರ್ಯಾಕ್ಟರ್ ಮೂಲಕ ಹೆದ್ದಾರಿ ಬಂದ್ ಮಾಡಿಬಿಟ್ಟರೆ ಟ್ರಾಫಿಕ್ (Traffic) ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುವುದು ಖಚಿತ. ಮೆಜಿಸ್ಟಿಕ್, ಪ್ರೀಡಂ ಪಾರ್ಕ್, ರೇಸ್ ಕೋರ್ಸ್ ರಸ್ತೆ, ಜಿಪಿಒ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.


ಇದನ್ನೂ ಓದಿ : 'ರೈತರ ಪ್ರತಿಭಟನೆಯನ್ನು 5 ನಿಮಿಷದಲ್ಲಿ ಕೊನೆಗೊಳಿಸಬಹುದು'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.