ನಾಳೆ ದೆಹಲಿಯಲ್ಲಿ Farmers ನಡೆಸುವ ಟ್ರ್ಯಾಕ್ಟರ್ ಪರೇಡ್‌ನಲ್ಲಿ ಏನೇನಿರಲಿದೆ?

ಈ ಪ್ರತಿಭಟನಾತ್ಮಕ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ರೈತ ಸಂಘಟನೆಗಳು ಭಾಗವಹಿಸುತ್ತಿದ್ದು ಎಲ್ಲಾ ಸಂಘಟನೆಗಳಿಗೂ ಭಿನ್ನ ಭಿನ್ನವಾದ ಸ್ತಬ್ಧಚಿತ್ರಗಳನ್ನು ರೂಪಿಸುವಂತೆ ಸೂಚಿಸಲಾಗಿದೆ. ದೇಶದೆಲ್ಲೆಡೆಯಿಂದ ಸುಮಾರು ಒಂದು ಲಕ್ಷ ಟ್ರ್ಯಾಕ್ಟರ್-ಟ್ರಾಲಿಗಳು ಭಾಗವಹಿಸಲಿವೆ.

Written by - Yashaswini V | Last Updated : Jan 25, 2021, 07:35 AM IST
  • ಪ್ರತಿಯೊಂದು ಟ್ರ್ಯಾಕ್ಟರ್ ಟ್ರಾಲಿಗಳ ಮೇಲೂ ಹಾರಾಡಲಿದೆ ತ್ರಿವರ್ಣ ಧ್ವಜ
  • ಪರೇಡ್‌ ಉದ್ದಕ್ಕೂ ಜಾನಪದ ಹಾಗೂ ದೇಶಭಕ್ತಿ ಗೀತಿಗಳ ಗಾಯನ ಮತ್ತು ಸಂಗೀತ
  • ಸ್ತಬ್ಧಚಿತ್ರಗಳಲ್ಲಿ ಅನಾವರಣಗೊಳ್ಳಲಿದೆ ರೈತರ ಬದುಕು ಮತ್ತು ಬವಣೆ
ನಾಳೆ ದೆಹಲಿಯಲ್ಲಿ Farmers ನಡೆಸುವ ಟ್ರ್ಯಾಕ್ಟರ್ ಪರೇಡ್‌ನಲ್ಲಿ ಏನೇನಿರಲಿದೆ? title=
Farmers' Tractor Parade

ನವದೆಹಲಿ : ರೈತ ಸಮುದಾಯಕ್ಕೆ ಮುಳುವಾಗಿ ಪರಿಣಮಿಸುವ ಮೂರು ಕೃಷಿ ಕಾನೂನುಗಳನ್ನು (Agriculture Laws) ಹಿಂಪಡೆಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರೈತರು ಗಣರಾಜ್ಯೋತ್ಸವದ ದಿನ (Republic Day) ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್‌ ನಡೆಸುತ್ತಿದ್ದಾರೆ. ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದಲ್ಲಿ (Rajpath) ಏನೇನು ನಡೆಯುತ್ತೆ? ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತೆ. ಜೊತೆಗೆ ಈ ಬಾರಿಯ ಟ್ರ್ಯಾಕ್ಟರ್ ಪರೇಡ್‌ನಲ್ಲಿ ಏನಿರುತ್ತೆ ಎಂಬುದುನ್ನೂ ತಿಳಿಯಿರಿ.

ರೈತರು ತಮ್ಮ ಪಾಲಿಗೆ ಮರಣಶಾಸನವಾಗಿರುವ ಮೂರು ಕೃಷಿ ಕಾನೂನುಗಳನ್ನು (Agriculture Laws) ಹಿಂಪಡೆಯುವಂತೆ ದೆಹಲಿಯ ಗಡಿಗಳಲ್ಲಿ ಕಳೆದ ನವೆಂಬರ್ 26ರಿಂದ (ನಾಳೆಗೆ 2 ತಿಂಗಳು) ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೆಯುವ ಚಳಿ, ಕೇಂದ್ರ ಸರ್ಕಾರದ ಒತ್ತಡ, ಅಪಪ್ರಚಾರ ಯಾವುದಕ್ಕೂ ಜಗ್ಗದೆ, ಬಗ್ಗದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಕಾನೂನುಗಳನ್ನು ಹಿಂಪಡೆಯಲು ಸುತಾರಾಂ ಸಿದ್ದರಿಲ್ಲ. ಹಾಗಾಗಿ ರೈತರು ಕೇಂದ್ರ ಸರ್ಕಾರ ಅಧಿಕೃತವಾಗಿ ರಾಜಪಥದಲ್ಲಿ ಗಣರಾಜ್ಯೋತ್ಸವ ಆಚರಿಸುವ ದಿನ ತಾವು ಕೂಡ ಪ್ರತಿಭಟನಾತ್ಮಕವಾಗಿ ದೆಹಲಿಯಲ್ಲಿ 'ಕೃಷಿಕರ ಸಂಗಾತಿ' ಟ್ರ್ಯಾಕ್ಟರ್ ಪರೇಡ್‌ (Tractor Parade) ನಡೆಸುವುದಾಗಿ ಘೋಷಿಸಿದ್ದಾರೆ.

ಕೇಂದ್ರ ಸರ್ಕಾರದ ಅಧಿಕೃತ ಪರೇಡ್‌ನಲ್ಲಿ ಭಾರತೀಯ ಸೇನೆಯ (Indian Army) ಸಾಮರ್ಥ್ಯ, ದೇಶದ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿಗಳ ಅನಾವರಣಗೊಳ್ಳಿದೆ. ಇದೇ ರೀತಿ ರೈತರು ತಮ್ಮ ಟ್ರ್ಯಾಕ್ಟರ್ ಪರೇಡ್‌ನಲ್ಲಿ 'ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ಹೇಗೆ ರೈತ ಸಮುದಾಯಕ್ಕೆ ಮಾರಕವಾಗಲಿವೆ?' ಎಂದು ಬಿಂಬಿಸುವ ಮತ್ತು ಕೃಷಿ ಕಾಯ್ದೆ ವಿರುದ್ಧದ ಚಳವಳಿಯ ಇತಿಹಾಸ ಹೇಳುವ ಸ್ತಬ್ದಚಿತ್ರಗಳು ಇರಲಿವೆ.

ಇದನ್ನೂ ಓದಿ - Farmers Protest: ಕೇಂದ್ರ ಮತ್ತು ರೈತರ ನಡುವಿನ '10ನೇ ಸುತ್ತಿನೆ ಮಾತುಕತೆ ಮತ್ತೆ ವಿಫಲ..!

ಇದಲ್ಲದೆ, ಕೃಷಿಕರ ಜೀವನ, ಗ್ರಾಮೀಣ ಭಾಗದ ಬವಣೆ, ಹೈನುಗಾರಿಕೆ, ದೇಶದ ವಿವಿಧ ಭಾಗಗಳಲ್ಲಿ ಇರುವ ಭಿನ್ನ ಭಿನ್ನ ಕೃಷಿ ಪದ್ಧತಿಗಳೆಲ್ಲವನ್ನೂ ಪ್ರಸ್ತುತ ಪಡಿಸಲಾಗುತ್ತಿದೆ. ಈ ಪ್ರತಿಭಟನಾತ್ಮಕ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ರೈತ ಸಂಘಟನೆಗಳು ಭಾಗವಹಿಸುತ್ತಿದ್ದು ಎಲ್ಲಾ ಸಂಘಟನೆಗಳಿಗೂ ಭಿನ್ನ ಭಿನ್ನವಾದ ಸ್ತಬ್ಧಚಿತ್ರಗಳನ್ನು ರೂಪಿಸುವಂತೆ ಸೂಚಿಸಲಾಗಿದೆ.

ಒಂದು ಲಕ್ಷ ಟ್ರ್ಯಾಕ್ಟರ್-ಟ್ರಾಲಿಗಳು :
ಈ ಪ್ರತಿಭಟನಾತ್ಮಕ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ದೇಶದೆಲ್ಲೆಡೆಯಿಂದ ಸುಮಾರು ಒಂದು ಲಕ್ಷ ಟ್ರ್ಯಾಕ್ಟರ್-ಟ್ರಾಲಿಗಳು ಭಾಗವಹಿಸಲಿವೆ. ಪ್ರತಿಯೊಂದು ಟ್ರ್ಯಾಕ್ಟರ್ ಗಳು ಕೂಡ ತ್ರಿವರ್ಣ ಧ್ವಜವನ್ನು (Three Colour Flog) ಹೊಂದಿರಲಿವೆ. ಈ ಪೈಕಿ ಶೇಕಡಾ 30ರಷ್ಟು ಟ್ರ್ಯಾಕ್ಟರ್ ಗಳು ದೇಶದ ರೈತರ ಚಳವಳಿಯ ಇತಿಹಾಸವನ್ನು ಸಾರಿ ಹೇಳಲಿವೆ. ಕೃಷಿಯಲ್ಲಿ ಮತ್ತು ರೈತ ಚಳವಳಿಯಲ್ಲಿ ಮಹಿಳಾ ರೈತರ (Farmers) ಪಾತ್ರದ ಬಗ್ಗೆ ಸ್ತಬ್ದಚಿತ್ರಗಳಿರಲಿವೆ.

ಇದನ್ನೂ ಓದಿ - Republic Day: ಟ್ರಾಕ್ಟರ್ ರ್ಯಾಲಿಗೆ ಮಾರ್ಗ ಸಿದ್ಧಪಡಿಸಿದ ದೆಹಲಿ ಪೋಲಿಸ್

ಕೃಷಿಯನ್ನೇ ನಂಬಿ ಜೀವನ ಸಾಗಿಸಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಟ್ರ್ಯಾಕ್ಟರ್ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ವಿದರ್ಭದ (Vidarbha)ದಿಂದ ರೈತರ ಮಕ್ಕಳು ಬರುವ ಸಾಧ್ಯತೆ ಇದೆ. ಅವರು ಮಳೆಯಾಶ್ರಿತ ಕೃಷಿಯ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡದಂತಹ ರಾಜ್ಯಗಳ ಸ್ತಬ್ಧಚಿತ್ರಗಳಲ್ಲಿ ಕಣಿವೆ ಪ್ರದೇಶದ ಕೃಷಿ ಪದ್ಧತಿಯ ಅನಾವರಣವಾಗಲಿದೆ. ಪಂಜಾಬ್ ಹಾಗೂ ಹರಿಯಾಣದ ರೈತರು ಹಸಿರು ಕ್ರಾಂತಿ (Green Revolution) ಬಗ್ಗೆ, ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಬಗ್ಗೆ ಸ್ತಬ್ಧಚಿತ್ರಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇದಲ್ಲದೆ ಟ್ರ್ಯಾಕ್ಟರ್ ಪರೇಡ್‌ ಉದ್ದಕ್ಕೂ ವಿವಿಧ ಬಗೆಯ ಜಾನಪದ ಹಾಗೂ ದೇಶಭಕ್ತಿ ಗೀತಿಗಳ ಗಾಯನ ಮತ್ತು ಸಂಗೀತ ಇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News