ಕಾರವಾರ: ಬಸ್ ನಿಲ್ದಾಣದಲ್ಲಿ ಇಬ್ಬರೂ ಮಹಿಳೆಯರು ಬಡಿದಾಡಿಕೊಂಡ ಘಟನೆ ನಡೆದಿದ್ದು, ಈ ಇಬ್ಬರ ಮಹಿಳೆಯರ ಫೈಟಿಂಗ್ ನೋಡಲು ಬಸ್ ನಿಲ್ದಾಣದ ಸುತ್ತಮುತ್ತ ಇದ್ದವರು ಕೆಲಸ ಬಿಟ್ಟು ಓಡಿ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಸ್ ನಿಲ್ದಾಣದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಪಿಎಲ್‌ ಕಾರ್ಡ್‌ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದ್ದೇನು?


ಈ ಮಹಿಳೆಯರಿಬ್ಬರು ಅಕ್ಕ ತಂಗಿಯರು ಎಂದು ಹೇಳಲಾಗುತ್ತಿದ್ದು, ಇಬ್ಬರ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ಬಸ್ಸಿನ ನಿರ್ವಾಹಕೀಯ ಮೇಲೆಯೇ ಒಬ್ಬಾಕೆ ಮಹಿಳೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.ಈ ಸನ್ನಿವೇಶವನ್ನು ನೋಡಲು ತಮ್ಮ ತಮ್ಮ ಕೆಲಸವನ್ನು ಬಿಟ್ಟು ಜನ ಬಸ್ ನಿಲ್ದಾಣದಕ್ಕೆ ಓಡೋಡಿ ಬಂದರು.ಮಹಿಳೆಯರು ಯಾವ ಕಾರಣಕ್ಕಾಗಿ ಜಗಳ ಆಡುತ್ತಿದ್ದಾರೆ ಎಂಬ ಕಾರಣವನ್ನು ತಿಳಿಯದೆ ಮೂಕ ಪ್ರೇಕ್ಷಕರಾಗಿ ಮನರಂಜನೆ ಅನುಭವಿಸಿದರು.


ಇದನ್ನೂ ಓದಿ: ಕೊಡಗಿನಲ್ಲಿ ವನ್ಯ ಜೀವಿ ಉತ್ಪನ್ನಗಳ ಬಳಕೆ ಇದೆ : ಶಾಸಕ ಎ.ಎಸ್‌. ಪೊನ್ನಣ್ಣ


ಅಕ್ಕ-ತಂಗಿಯರು ಪೈಟಿಂಗ್ ಮಾಡುತ್ತಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.ಇವರ ಜಗಳ ನೋಡಲು ಜನರು ಹೆಚ್ಚಾಗಿ ಸೇರುತ್ತಿದ್ದಂತೆ ಆ ಮಹಿಳೆಯರು ಬಸ್ ನಿಲ್ದಾಣದಿಂದ ಕಾಲ್ಕಿತ್ತಿದ್ದಾರೆ.ಕೊನೆಗೂ ಬಸ್ ನಿಲ್ದಾಣದಲ್ಲಿ ಅಕ್ಕ- ತಂಗಿಯರ ಫೈಟಿಂಗ್ ಗೆ ಕಾರಣ ಮಾತ್ರ ಯಾರಿಗೂ ತಿಳಿಯದಂತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.