ಬೀದರ್ :  ಸರಿ-ತಪ್ಪುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕಿರುವ ಶಿಕ್ಷಕರೇ ಮೊಟ್ಟೆ ಹಣಕ್ಕಾಗಿ ಬಡಿದಾಡಕೊಂಡಿರುವ ಘಟನೆ ಬೀದರ್ ತಾಲೂಕಿನ ಮರ್ಜಾಪೂರ್ ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಶಿಕ್ಷಕರಿಬ್ಬರ ನಡುವೆ ಮೊಟ್ಟೆ ಹಣಕ್ಕಾಗಿ ಬೀದಿ ಕಾಳಗ:
ಹೌದು, ಮಕ್ಕಳಿಗೆ ಪಾಠ ಕಲಿಸಬೇಕಾದ ಶಿಕ್ಷಕರು ಮೊಟ್ಟೆ (Egg) ಹಣಕ್ಕಾಗಿ ಬೀದಿ ಜಗಳ ಮಾಡಿಕೊಂಡಿದ್ದಾರೆ. ಮುರ್ಜಾಪೂರ್ ಗ್ರಾಮದ ಶಿಕ್ಷಕ ಶಾಂತಕುಮಾರ್ ಹಾಗೂ ಅದೇ ಶಾಲೆಯ ಮುಖ್ಯ ಶಿಕ್ಷಕ ಮಡಯ್ಯ ಸ್ವಾಮಿ ಇಬ್ಬರೂ ಮೊಟ್ಟೆ ಹಣಕ್ಕಾಗಿ ಬೀದಿ ಕಾಳಗ ನಡೆಸಿದ್ದಾರೆ.


ಇದನ್ನೂ ಓದಿ- BBMP ಲಾರಿ ಹರಿದು ಬಾಲಕಿ ಸಾವು: 2 ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದ ಭೈರತಿ ಸುರೇಶ್


ಮರ್ಜಾಪೂರ್ ಗ್ರಾಮದ ಶಿಕ್ಷಕ  ಶಾಂತಕುಮಾರ್  ಶಾಲಾ  ಮಕ್ಕಳಿಗಾಗಿ (School Students) ಮೊಟ್ಟೆ ತಂದಿದ್ದಾರೆ. ನಂತರ ಮೊಟ್ಟೆ ಹಣ ನೀಡುವಂತೆ ಮುಖ್ಯ ಗುರುಗಳ ಬಳಿ ಕೇಳಿದ್ದಾರೆ. ಈ ವೇಳೆ ಮೊಟ್ಟೆ ಮುಟ್ಟೊದಿಲ್ಲ ಎಂದು ಮುಖ್ಯ ಶಿಕ್ಷಕ ಮಡಯ್ಯಸ್ವಾಮಿ ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರು ಶಿಕ್ಷಕರ ನಡುವ ವಾಗ್ವಾದ ನಡೆದಿದ್ದು ಇಬ್ಬರೂ ಬಡಿದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಇದನ್ನೂ ಓದಿ- HD Kumaraswamy : ಕಸದ ಲಾರಿಗೆ ಬಾಲಕಿ ಬಲಿ : ಬಿಬಿಎಂಪಿ ವಿರುದ್ಧ ಕಿಡಿಕಾರಿದ ಹೆಚ್'ಡಿಕೆ


ಮಕ್ಕಳಿಗೆ ಶಿಸ್ತಿನ ಪಾಠ ಕಲಿಸಬೇಕಿದ್ದ ಶಿಕ್ಷಕರೇ ಬೀದಿಗಿಳಿದು ಈ ರೀತಿ ಕಚ್ಚಾಡಿಕೊಂಡಿರುವ ದೃಶ್ಯವನ್ನು ಅಲ್ಲಿದ್ದವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಶಿಕ್ಷಕರಿಬ್ಬರ ಜಗಳವನ್ನು ಈ ವಿಡಿಯೋದಲ್ಲಿ ನೋಡಿ....https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.