BBMP ಲಾರಿ ಹರಿದು ಬಾಲಕಿ ಸಾವು: 2 ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದ ಭೈರತಿ ಸುರೇಶ್

ಈ ದುರ್ಘಟನೆಗೆ ಯಾರ ನಿರ್ಲಕ್ಷ್ಯವಾಗಿದೆಯೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಭೈರತಿ ಸುರೇಶ್ ಹೇಳಿದ್ದಾರೆ.

Written by - Zee Kannada News Desk | Last Updated : Mar 21, 2022, 09:22 PM IST
  • ಹೆಬ್ಬಾಳದ ಫ್ಲೈ ಓವರ್ ಬಳಿ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಬಾಲಕಿ ಸಾವು
  • ಮೃತ ಅಕ್ಷಯ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಘೋಷಿಸಿದ ಶಾಸಕ ಭೈರತಿ ಸುರೇಶ್
  • ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಶಾಸಕರು
BBMP ಲಾರಿ ಹರಿದು ಬಾಲಕಿ ಸಾವು: 2 ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದ ಭೈರತಿ ಸುರೇಶ್  title=
2 ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದ ಶಾಸಕ

ಬೆಂಗಳೂರು: ಹೆಬ್ಬಾಳದ ಫ್ಲೈ ಓವರ್(Hebbal Flyover) ಬಳಿ ಡಿವೈಡರ್ ದಾಟುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ(BBMP Trash Lorry) ಡಿಕ್ಕಿ ಹೊಡೆದು ಸಾವನ್ನಪ್ಪಿದ ಅಕ್ಷಯ ಕುಟುಂಬಕ್ಕೆ ಶಾಸಕ ಭೈರತಿ ಸುರೇಶ್(Byrathi Suresh) ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ನಡೆದಿರುವ ಘಟನೆಯಿಂದ ನನಗೂ ಬೇಸರವಾಗಿದೆ. ರಸ್ತೆ ದಾಟುವಾಗ ಅಪಘಾತ(Hebbal Flyover Accident)ವಾಗಿ ಮಗು ಸಾವನ್ನಪ್ಪಿದೆ. ಜೀವ ಅಮೂಲ್ಯವಾದದ್ದು, ಬೆಲೆ ಕಟ್ಟಲಾಗುವುದಿಲ್ಲ. ಈ ದುರ್ಘಟನೆಗೆ ಯಾರ ನಿರ್ಲಕ್ಷ್ಯವಾಗಿದೆಯೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಕಮೀಷನರ್ ಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿSSLC Exam:ಮಾರ್ಚ್ 28 ರಿಂದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಆರಂಭ

ಮಗು ಜೀವ ಮತ್ತೆ ವಾಪಸ್ ತರಲು ಸಾಧ್ಯವಿಲ್ಲ. ನನ್ನ ಸ್ವಂತ ಹಣದಿಂದ ಮಗುವಿನ ತಂದೆಗೆ 2 ಲಕ್ಷ ರೂ. ಚೆಕ್ ಕೊಡ್ತಿದ್ದೀನಿ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ(BBMP)ಗೂ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಘಟನೆ ಸಂಬಂಧ ನಿರ್ಲಕ್ಷ್ಯ ವಹಿಸಿದ ಅಧಿಕಾರಿಯನ್ನು ಅಮಾನತು ಮಾಡಲಾಗುತ್ತದೆ. ಅಮಾನತು ಬಗ್ಗೆ ಬಿಬಿಎಂಪಿ ಕಮೀಷನರ್ ಹೇಳಿದ್ದಾರೆ. ಅದರಂತೆ ಕ್ರಮ ಕೈಗೊಳ್ಳುತ್ತೇವೆಂದು ಭೈರತಿ ಸುರೇಶ್(Byrathi Suresh) ಹೇಳಿದ್ದಾರೆ.

ಅಪಘಾತ ಆಗಿದ್ದು ಹೇಗೆ..?

ಹೆಬ್ಬಾಳದ ಫ್ಲೈಓವರ್(Hebbal Flyover)ಬಳಿ ಅಂಡರ್ ಪಾಸ್‍ನಲ್ಲಿ ನೀರು ತುಂಬಿದ್ದ ಪರಿಣಾಮ ಪಾದಚಾರಿಗಳು ರಸ್ತೆ ಮೇಲೆ ಓಡಾಡುತ್ತಾ ರಸ್ತೆ ದಾಟುತ್ತಿದ್ದರು. ಮಧ್ಯಾಹ್ನ ಬಸ್ ಇಳಿದ ಬಾಲಕಿ ಅಂಡರ್ ಪಾಸ್‍ನಲ್ಲಿ ನೀರು ತುಂಬಿರುವುದನ್ನು ನೋಡಿ, ಡಿವೈಡರ್ ದಾಟಿ ರಸ್ತೆ ಕ್ರಾಸ್ ಮಾಡುತ್ತಿದ್ದಳು. ಕೆಲ ವಿದ್ಯಾರ್ಥಿಗಳು ಸಹ ಡಿವೈಡರ್ ಜಂಪ್ ಮಾಡಿ ರಸ್ತೆ ದಾಟುತ್ತಿದ್ದರು. ಈ ವೇಳೆ ಕಾರು ವೇಗವಾಗಿ ಬರುತ್ತಿದ್ದ ಬಿಬಿಎಂಪಿ ಕಸದ ಲಾರಿ(BBMP Trash Lorry) ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ಸಾವನ್ನಪ್ಪಿದ್ದು, 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:  ‘ಅನ್ನಭಾಗ್ಯ’ ಯೋಜನೆ: ಸಿದ್ದರಾಮಯ್ಯ ವಿರುದ್ಧ ಅರವಿಂದ್ ಬೆಲ್ಲದ್ ಟೀಕಾಪ್ರಹಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News