ಸಪ್ನಾ ಬುಕ್ ಹೌಸ್ ಸಿಇಓ ನಿಜೇಶ್ ಶಾ ವಿರುದ್ದ ಎಫ್ಐಆರ್ ದಾಖಲು .!
ಸಪ್ನಾ ಬುಕ್ ಹೌಸ್ ಸಿಇಓ ನಿಜೇಶ್ ಶಾ ವಿರುದ್ದ ಸುಭಾಷ್ ಎಂಟರ್ಪ್ರೈಸಸ್ ಮಾಲೀಕ ನಾಗೇಶ್ ನೀಡಿರುವ ದೂರಿನನ್ವಯ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು: ಸಪ್ನಾ ಬುಕ್ ಹೌಸ್ ಸಿಇಓ ನಿಜೇಶ್ ಶಾ ವಿರುದ್ದ ಸುಭಾಷ್ ಎಂಟರ್ಪ್ರೈಸಸ್ ಮಾಲೀಕ ನಾಗೇಶ್ ನೀಡಿರುವ ದೂರಿನನ್ವಯ ಎಫ್ಐಆರ್ ದಾಖಲಿಸಲಾಗಿದೆ.
ದಕ್ಷಿಣ ಭಾರತದಲ್ಲಿ ಶಾಲಾ ಮಕ್ಕಳ ಪುಸ್ತಕ ವಿತರಣೆಯಲ್ಲಿ ಪ್ರಖ್ಯಾತಿ ಹೊಂದಿರುವ ಸುಭಾಷ್ ಎಂಟರ್ಪೈಸಸ್ ಈಗ ತಮ್ಮ ಸಿಬ್ಬಂದಿಯಿಂದ ಕಂಪನಿಯ ಗೌಪ್ಯ ಮಾಹಿತಿಯನ್ನು ಪಡೆಯಲಾಗಿದೆ ಎಂದು ದೂರು ದಾಖಲಿಸಿದೆ.
ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ವಿಚಾರ: ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಬಿಜೆಪಿ
ದೂರಿನಲ್ಲಿ ಇ-ಮೇಲ್ ನ ಮೂಲಕ ಸುಭಾಷ್ ಎಂಟರ್ಪೈಸಸ್ ನ ಆರ್ಡರ್ ಹಾಗೂ ಬೆಲೆಗಳನ್ನ ಮೇಲ್ ಮಾಡಿಸಿಕೊಂಡಿರುವುದು ಮತ್ತು ಹಾಗೂ ಇನ್ನಿತರ ಗೌಪ್ಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.ಈಗ ಮಹತ್ವದ ಮಾಹಿತಿಯ ಸೋರಿಕೆಯಿಂದಾಗಿ ತಮ್ಮ ಕಂಪನಿಗೆ ನಷ್ಟವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಮೋದಿ ಮುಂದೆ ತೆಗೆದುಕೊಂಡು ಹೋಗೋಕೆ ಹೆದರಿಕೆ ಯಾಕೆ?
ಮೋಹನ್ ಎನ್ನುವ ವ್ಯಕ್ತಿಯು ಸುಭಾಷ್ ಎಂಟರ್ಪೈಸಸ್ ನಲ್ಲಿ ಅಡ್ಮಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು, ಅವರಿಂದ ಈಗ ಕಂಪನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸೋರಿಕೆಯಾಗಿದೆ ಎಂದು ಸುಭಾಷ್ ಎಂಟರ್ಪ್ರೈಸಸ್ ಮಾಲೀಕ ನಾಗೇಶ್ ಅವರು ದೂರು ನೀಡಿದ್ದಾರೆ.
ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಸುಭಾಷ್ ಎಂಟರ್ಪೈಸಸ್ ಸಿಬ್ಬಂದಿ ಮೋಹನ್, ಸ್ವಪ್ನಾ ಬುಕ್ ಹೌಸ್ ಸಿಇಓ ನಿಜೇಶ್ ಶಾ ಹಾಗೂ ಮಧುಕರ್ ವಿರುದ್ದ ದೂರು ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.