ಬಿಬಿಎಂಪಿಯಲ್ಲಿ ಅಗ್ನಿ ಅವಘಡ: ಹಿರಿಯ ಅಧಿಕಾರಿಗಳಿಗೆ ಪೊಲೀಸ್ ನೋಟಿಸ್
Bengaluru Crime News: ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಬಿಬಿಎಂಪಿ ಲ್ಯಾಬ್ ನಲ್ಲಿ ಅಗ್ನಿ ಅವಘಢ ಸಂಭವಿಸಿತ್ತು ಅನ್ನೋದು ಪ್ರಾಥಮಿಕ ತನಿಖೆ ವೇಳೆಯೇ ಗೊತ್ತಾಗಿದೆ,
ಬಿಬಿಎಂಪಿ ಲ್ಯಾಬ್ ನಲ್ಲಿ ಬೆಂಕಿ ಹೊತ್ತಿದ್ದ ಕೇಸ್ ಸಂಬಂಧ ಹಲಸೂರ್ ಗೇಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಿಬ್ಬಂದಿ ಲೆವೆಲ್ ವಿಚಾರಣೆ ಮುಗಿಸಿರುವ ಪೊಲೀಸರು ಈಗ ಹಿರಿಯ ಅಧಿಕಾರಿಗಳ ಕಡೆ ಮುಖ ಮಾಡಿದ್ದಾರೆ. ಫಸ್ಟ್ ಸ್ಟೆಪ್ ನಲ್ಲಿ ದೂರು ಕೊಟ್ಟಿದ್ದ ಚೀಫ್ ಎಂಜಿನಿಯರ್ ಗೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ.
ಇದನ್ನೂ ಓದಿ: ಹೊಲಗೇರಿ ಪದ ಬಳಕೆ: ನಟ ಉಪೇಂದ್ರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು
ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಬಿಬಿಎಂಪಿ ಲ್ಯಾಬ್ ನಲ್ಲಿ ಅಗ್ನಿ ಅವಘಢ ಸಂಭವಿಸಿತ್ತು ಅನ್ನೋದು ಪ್ರಾಥಮಿಕ ತನಿಖೆ ವೇಳೆಯೇ ಗೊತ್ತಾಗಿದೆ, ಮೂವರು ಬಿಬಿಎಂಪಿ ಸಿಬ್ಬಂದಿಯನ್ನ ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಅಧಿಕಾರಿಗಳ ನಿರ್ಲಕ್ಷ್ಯ ಕ್ಲಿಯರ್ ಅನ್ನೋದು ಗೊತ್ತಾಗಿತ್ತು. ಘಟನೆ ತೀವ್ರತೆಯಿಂದ ಒಂಬತ್ತು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿಧಾನಕ್ಕೆ ಚೇತರಿಸಿಕೊಳ್ತಿದ್ರೆ ಇತ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸಿಬ್ಬಂದಿಯನ್ನ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದ ಹಲಸೂರು ಗೇಟ್ ಪೊಲೀಸರು ಈಗ ಹಿರಿಯ ಅಧಿಕಾರಿಗಳಿಗೆ ನೊಟೀಸ್ ನೀಡ್ತಿದ್ದಾರೆ. ಎಂಜಿನಿಯರ್ ಲೆವೆಲ್ ಅಧಿಕಾರಿಗಳು ಮಾಡ್ಬೇಕಿದ್ದ ಕ್ವಾಲಿಟಿ ಟೆಸ್ಟ್ ಅನ್ನು ಡಿ ಗ್ರೂಪ್ ನೌಕರ ಮಾಡಿದ್ದ ಪರಿಣಾಮ ಇಷ್ಟು ದೊಡ್ಡ ಅವಾಂತರ ಅನ್ನೋದು ಈಗಾಗ್ಲೇ ಪ್ರೂವ್ ಆಗಿದೆ.
ಆದರೆ ಇದರ ಹಿಂದೆ ದೊಡ್ಡ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಇದೆ ಅನ್ನೋದು ಸದ್ಯಕ್ಕಿರೋ ಅನುಮಾನ. ಯಾಕಂದ್ರೆ ಪ್ರತಿ ಬಾರಿಯೂ ಡಿ ಗ್ರೂಪ್ ನೌಕರ ಸುರೇಶ್ ವಸ್ತುಗಳ ಕ್ವಾಲಿಟಿ ಚೆಕ್ ಮಾಡ್ತಿದ್ದ. ಅಧಿಕಾರಿಗಳು ಆತನಿಗೆ ಕೊಟ್ಟು ಟೆಸ್ಟ್ ಮಾಡಿಸ್ತಿದ್ರು ಅನ್ನೋದು ಸದ್ಯ ಗೊತ್ತಾಗಿರೋ ವಿಷ್ಯ. ಅಲ್ಲಿರೋ ಅಧಿಕಾರಿಗಳೇನೋ ಈ ರೀತಿ ಕಳ್ಳಾಟ ಆಡಿದ್ದಾರೆ. ಆದ್ರೆ ಮೇಲಾಧಿಕಾರಿಗಳಿಗೆ ಈ ಬಗ್ಗೆ ಗಮನವೇ ಇರ್ಲಿಲ್ವಾ ಅನ್ನೋದು ಸದ್ಯಕ್ಕಿರೋ ಪ್ರಶ್ನೆ. ಚೀಫ್ ಎಂಜಿನಿಯರ್ ಸೇರಿ ಹಿರಿಯ ಅಧಿಕಾರಿಗಳು ಆಗಾಗ ಲ್ಯಾಬ್ ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸ್ಬೇಕು. ಜೊತೆಗೆ ಸಂಬಂಧಿಸಿದ ಡಿಪಾರ್ಟ್ಮೆಂಟ್ ನಲ್ಲಿ ಏನೇನ್ ನಡೀತಿದೆ ಅನ್ನೋದ್ರ ಬಗ್ಗೆ ಮಾಹಿತಿ ಇರ್ಬೇಕು. ಆದ್ರೆ ಒಂದು ಲ್ಯಾಬ್ ನಲ್ಲಿ ಓರ್ವ ಡಿ ಗ್ರೂಪ್ ನೌಕರನಿಂದ ಇಷ್ಟು ದೊಡ್ಡ ಅವಘಢ ನಡೆದಿರೋವರೆಗೂ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿರಲಿಲ್ವಾ ಅನ್ನೋ ಮಾತುಗಳು ಕೇಳಿ ಬರ್ತಿದೆ.
ಇದನ್ನೂ ಓದಿ: ನವರಂಗಿ ನಾರಾಯಣ, ಕಳ್ಳರ ರಕ್ಷಣೆಯಲ್ಲಿ ಡಾಕ್ಟರೇಟ್: ಅಶ್ವಥ್ ನಾರಾಯಣ್‌ಗೆ ಡಿಸಿಎಂ ತಿರುಗೇಟು
ಇಲ್ಲಿ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಮೇಲ್ನೋಟಕ್ಕೆ ಕಂಡು ಬರ್ತಿದ್ದು, ದೂರು ನೀಡಿ ಆಂತರಿಕ ತನಿಖೆ ಮಾಡ್ತಿರೋ ಬಿಬಿಎಂಪಿ ಚೀಫ್ ಎಂಜಿನಿಯರ್ ಪ್ರಹ್ಲಾದ್ ಗೂ ಪೊಲೀಸರು ನೊಟೀಸ್ ನೀಡಿ ನಾಳೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಸದ್ಯ ಚೀಫ್ ಎಂಜಿನಿಯರ್ ಗೆ ನೊಟೀಸ್ ನೀಡಿರೋ ಪೊಲೀಸರು ಮೂವರು ಸಿಬ್ಬಂದಿ ನೀಡಿರೋ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಲಿದ್ದಾರೆ. ಮುಂದಿನ ಹಂತದಲ್ಲಿ ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ಗೂ ನೊಟೀಸ್ ನೀಡೋ ಸಾಧ್ಯತೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ