ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಹಂತಕ ಧರ್ಮರಾಜ್ ಚಡಚಣಿ ಹಾಗೂ ಪಿಎಸ್ಐ ಗೋಪಾಲ್ ನಡುವೆ ಗುಂಡಿನ ದಾಳಿ ನಡೆದಿದೆ. 


COMMERCIAL BREAK
SCROLL TO CONTINUE READING

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೊಂಕನಗಾಂವ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಧರ್ಮರಾಜ್ ಮೇಲೆ ಗುಂಡು ಹಾರಿಸುವ ಉದ್ದೇಶವಿರಲಿಲ್ಲ, ಧರ್ಮರಾಜ್ ಫೈರಿಂಗ್ ಮಾಡಿದ್ದರಿಂದ ಪ್ರಾಣ ರಕ್ಷಣೆಗಾಗಿ ಪಿಎಸ್ಐ ಪ್ರತಿದಾಳಿ ನಡೆಸಿದ್ದಾರೆ ಎಂದು ವಿಜಯಪುರ ಎಸ್ಪಿ ಕುಲದೀಪ್ ಸ್ಪಷ್ಟನೆ ನೀಡಿದ್ದಾರೆ. 


ವಿಧಾನಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ಧರ್ಮರಾಜನ ಮೇಲೆ ಹಲವು ಪ್ರಕರಣಗಳಿದ್ದವು, ಧರ್ಮರಾಜನ ಬಂಧನಕ್ಕೆ ಪೊಲೀಸರು ಹೋಗಿದ್ದರು. ಆ ವೇಳೆ ಪಿಎಸ್ಐ ಗೋಪಾಲ್ ಮೇಲೂ ಧರ್ಮರಾಜ ಚಡಚಣ ಶೂಟ್ ಮಾಡಿದ್ದಾನೆ. ಪಿಎಸ್ಐ ಗೋಪಾಲ್ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮರಕ್ಷಣೆಗೆ ಪಿಎಸ್ಐ ಗೋಪಾಲ್ ಧರ್ಮರಾಜ್ನನ್ನು ಎನ್ ಕೌಂಟರ್ ಮಾಡಿದ್ದಾರೆ. ಅಕ್ರಮ ಪಿಸ್ತೂಲು ಮಾರಾಟ ದಂಧೆ ವಿಚಾರದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಅಕ್ರಮ ಪಿಸ್ತೂಲು ಮಾರಾಟ ದಂಧೆಯಲ್ಲಿ ಧರ್ಮರಾಜನ ಪಾತ್ರದ ಬಗ್ಗೆ ಪೂರ್ಣ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ.