ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ..
ನಗರದ ಕೋರಮಂಗಲ ಪೊಲೀಸರು ಈಗ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ನಗರದ ಕೋರಮಂಗಲ ಪೊಲೀಸರು ಈಗ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ವಿಶಾಖಪಟ್ಟಣಂನಿಂದ ಗಾಂಜಾ ತಂದು ರಾಜಧಾನಿಯಲ್ಲಿ ಸಪ್ಲೈ ಮಾಡ್ತಿದ್ದ ಸಂದರ್ಭದಲ್ಲಿ ಪೋಲೀಸರ ಕೈಗೆ ಸಿಕ್ಕಿದ್ದಾರೆ ಎನ್ನಲಾಗಿದೆ.ನಗರದ ಕೋರಮಂಗಲ ವ್ಯಾಪ್ತಿಯ ಪೋಲಿಸ್ ಠಾಣೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 40 ಲಕ್ಷ ಮೌಲ್ಯದ 102 ಕೆ.ಜಿ 200 ಗ್ರಾಂ ಗಾಂಜಾ, ಬೈಕ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: Toofan Lyrical Video: 'ಕೆಜಿಎಫ್ 2' ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್
ಬಂಧಿತ ವ್ಯಕ್ತಿಗಳನ್ನು ರಮೇಶ್, ಮಂಜುನಾಥ್, ಅಭಿಲಾಶ್, ಮೂರ್ತಿ,ಶಿವರಾಜ್ ಎಂದು ತಿಳಿದುಬಂದಿದೆ.ಈಗ ಬಂಧಿತರ ವಿರುದ್ಧ ಕೋರಮಂಗಲ, ಹೆಚ್ ಎಸ್ ಆರ್ ಲೇಔಟ್, ಬೇಗೂರು, ಕೋಣನಕುಂಟೆ, ಕೆಆರ್ ಪುರಂ ಠಾಣೆಗಳಲ್ಲಿ ಗಾಂಜಾ, ಕೊಲೆ ಯತ್ನ, ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.