ಮಲ್ಪೆ (ಉಡುಪಿ):  ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ಮಿಸಲಾಗಿದ್ದ ತೇಲುವ ಸೇತುವೆ (ಫ್ಲೋಟಿಂಗ್‌ ಬ್ರಿಡ್ಜ್‌) ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಕೆಟ್ಟು ಹೋಗಿದೆ. ಉದ್ಘಾಟನೆಯಾಗಿ ಕೇವಲ 24 ಗಂಟೆಯಾಗುವಷ್ಟರಲ್ಲಿ ಸೇತುವೆ ಈ ದುಸ್ಥಿತಿ ತಲುಪಿದೆ. ಸದ್ಯ ರಾಜ್ಯದಲ್ಲಿ ಅಸಾನಿ ಚಂಡಮಾರುತರ ಅಬ್ಬರ ಕಂಡುಬರುತ್ತಿದ್ದು, ಇದರ ಪರಿಣಾಮವಾಗಿ ಸೇತುವೆ ನಾಶವಾಗಿದೆ. ಪ್ರವಾಸಿಗರಿಗೆ ಪ್ರವೇಶವನ್ನು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ:PNB Interest Rates: ಹೋಂ ಲೋನ್ ಸೇರಿದಂತೆ ಇತರಸಾಲಗಳ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್


ಉಡುಪಿ ಈಗಾಗಲೇ ಪ್ರವಾಸಿಗರ ನೆಚ್ಚಿನ ತಾಣ ಎಂದನಿಸಿದೆ. ಈಗಾಗಲೇ ಇಲ್ಲಿ ಸೀ ವಾಕ್‌ನ್ನು ಸಹ ನಿರ್ಮಾಣ ಮಾಡಲಾಗಿದ್ದು, ಇದರ ಜೊತೆ ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ನಿರ್ಮಾಣಗೊಂಡ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಅಸಾನಿ ಚಂಡಮಾರುಡತದ ಅಬ್ಬರಕ್ಕೆ ಸಿಲುಕಿದ ಸೇತುವೆ ಸಂಪೂರ್ಣ ಕೆಟ್ಟುಹೋಗಿದೆ. 


ತೇಲುವ ಸೇತುವೆಗೆ ಅಳವಡಿಸಿರುವ ಬ್ಲಾಕ್‌ಗಳು ಕಿತ್ತುಕೊಂಡು ಬಂದಿದ್ದು, ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ನಿರ್ವಹಣೆಯ ಉದ್ದೇಶದಿಂದ ತೇಲುವ ಸೇತುವೆಗೆ ಪ್ರವಾಸಿಗರ ಪ್ರವೇಶವನ್ನು ಬಂದ್‌ ಮಾಡಲಾಗಿದೆ ಎಂದು ಅಲ್ಲಿನ ನಿರ್ವಾಹಕರು ತಿಳಿಸಿದ್ದಾರೆ. 


ಇದನ್ನು ಓದಿ: ಚಿರತೆ ಜೊತೆ ಪೊಲೀಸರ ಕಾಳಗ: ಎದೆ ಝಲ್‌ ಎನ್ನುವಂತಿದೆ ದೃಶ್ಯ


ಕೇರಳದ ಬೇಪೋರ್‌ ಬೀಚ್‌ನಲ್ಲಿ ಮಾತ್ರ ತೇಲುವೆ ಸೇತುವೆ ಇದೆ. ಈ ಬಳಿಕ ನಿರ್ಮಾಣಗೊಂಡಿದ್ದು ಕರ್ನಾಟಕದ ಮಲ್ಪೆ ಬೀಚ್‌ನಲ್ಲಿ. ದೇಶದಲ್ಲಿಯೇ ಎರಡನೇ ಬಾರಿಗೆ ನಿರ್ಮಾಣಗೊಂಡಿದ್ದ ತೇಲುವ ಸೇತುವೆ ಇದೀಗ ಅಲೆಯ ರಭಸಕ್ಕೆ ಸಿಲುಕಿ ಹಾಳಾಗಿದೆ. ಸದ್ಯ ಈ ಘಟನೆಗೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.