ಜಾನಪದ ಪರಿಸರವಾದಿ ತುಳಸಿ ಗೌಡರಿಗೆ ಪದ್ಮಶ್ರೀ ಪುರಸ್ಕಾರ
ಅರಣ್ಯದ ವಿಶ್ವಕೋಶ ಎಂದೇ ಜನಪ್ರಿಯವಾಗಿರುವ ಕರ್ನಾಟಕದ ತುಳಸಿ ಗೌಡರಿಗೆ ಈ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2020 ರ ಪದ್ಮ ಪ್ರಶಸ್ತಿಗಳನ್ನು ಶನಿವಾರದಂದು ಘೋಷಿಸಲಾಯಿತು.
ಬೆಂಗಳೂರು: ಅರಣ್ಯದ ವಿಶ್ವಕೋಶ ಎಂದೇ ಜನಪ್ರಿಯವಾಗಿರುವ ಕರ್ನಾಟಕದ ತುಳಸಿ ಗೌಡರಿಗೆ ಈ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2020 ರ ಪದ್ಮ ಪ್ರಶಸ್ತಿಗಳನ್ನು ಶನಿವಾರದಂದು ಘೋಷಿಸಲಾಯಿತು.
ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾ ದಿನದಂದು ಭಾರತ ಸರ್ಕಾರ ಪ್ರತಿ ವರ್ಷ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸುತ್ತದೆ.ಸಾಮಾಜಿಕ ಕಾರ್ಯಗಳು, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಔಷಧ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ಮುಂತಾದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ತುಳಸಿ ಗೌಡ ಜಾನಪದ ಪರಿಸರವಾದಿಯಾಗಿದ್ದು, ಕರಾವಳಿ ಕರ್ನಾಟಕದಲ್ಲಿ ನೆಲೆಗೊಂಡಿರುವ ಅಂಕೋಲಾ ತಾಲೂಕಿನಲ್ಲಿ 1,00,000 ಕ್ಕೂ ಹೆಚ್ಚು ಮರಗಳನ್ನು ಅವರು ಒಂಟಿಯಾಗಿ ನೆಟ್ಟಿದ್ದಾರೆ. ಅವರು ಅನಕ್ಷರಸ್ಥರಾಗಿದ್ದರೂ, ಸಸ್ಯಗಳ ಬಗೆಗಿನ ಅವಳ ಜ್ಞಾನಕ್ಕೆ ಸರಿ ಸಾಟಿಯಿಲ್ಲ ಎನ್ನಬಹುದು. ಅವರು ಸರಳ ವ್ಯಕ್ತಿಯಾಗಿದ್ದು, ಹೊನಳ್ಳಿ ಹಳ್ಳಿಯ ಗುಡಿಸಲಿನಲ್ಲಿ ವಾಸಿಸುತ್ತಾಳೆ ಮತ್ತು ಮರಗಳ ಮೇಲಿನ ನಿರಂತರ ಪ್ರೀತಿ ಮತ್ತು ಪರಿಸರದ ಬಗೆಗಿನ ಕಾಳಜಿಗೆ ಹೆಸರುವಾಸಿಯಾಗಿದ್ದಾರೆ.ತುಳಸಿ ಗೌಡ ಈಗ 74 ರ ಸಮೀಪದಲ್ಲಿದ್ದಾರೆ ಮತ್ತು ಅವರ ಸರ್ಕಾರಿ ಕೆಲಸದಿಂದ ನಿವೃತ್ತರಾದರು ಕೂಡ ಅವರು ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ.ಈಗಲೂ ಸಸಿಗಳನ್ನು ನೆಡುವುದನ್ನು ಮುಂದುವರೆಸಿದ್ದಾರೆ ಮತ್ತು ಅವು ನೆಲೆ ನಿಲ್ಲುವವರೆಗೂ ಅವುಗಳನ್ನು ನೋಡಿಕೊಳ್ಳುತ್ತಾರೆ.
ಮೂಲತಃ ಬುಡಕಟ್ಟು ಮಹಿಳೆಯಾಗಿರುವ ತುಳಸಿ ಗೌಡರು, ಹಾಲಕ್ಕಿ ಸಮುದಾಯಕ್ಕೆ ಸೇರಿದ್ದಾರೆ.ಅನಿಯಂತ್ರಿತ ಅಭಿವೃದ್ಧಿಯಿಂದಾಗಿ ತನ್ನ ಹಳ್ಳಿಯಲ್ಲಿ ಅರಣ್ಯನಾಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿನ ಪರಿಸರ ಕೊಡುಗೆಗಳಿಗಾಗಿ ಕರ್ನಾಟಕ ರಾಜ್ಯ ಮತ್ತು ಇತರರು ಈ ಹಿಂದೆ ಹಲವಾರು ಬಾರಿ ಸನ್ಮಾನಿಸಿದ್ದಾರೆ. ಅವರು ರಾಜ್ಯದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.