ಬೆಂಗಳೂರು : ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಒಂದು ಕೋಟಿ ರೂ. ನೆರವು ನೀಡಿ ಕೆಎಸ್​ಆರ್​ಟಿಸಿ ನಿಗಮವು ಮಾತಿಗೆ ತಕ್ಕಂತೆ ನಡೆದುಕೊಂಡಿದೆ. 


COMMERCIAL BREAK
SCROLL TO CONTINUE READING

ಚಿತ್ರದುರ್ಗ ಡಿಪೋ ಚಾಲಕ ಕಂ ನಿರ್ವಾಹಕರಾಗಿದ್ದ ಉಮೇಶ್ ಎಂಬುವವರು ಬಸ್ ಚಾಲನೆ ಮಾಡುವ ವೇಳೆ ಅಪಘಾತ  ಮೃತ್ತಪಟ್ಟಿದ್ದರು. ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮೂಲಕ ಮೃತ ಉಮೇಶ್ ಕುಟುಂಬ ಕರೆಸಿ ಸಾರಿಗೆ ಸಚಿವ ಶ್ರೀರಾಮುಲು ಅವರು 1 ಕೋಟಿ ರೂ. ಚೆಕ್ ವಿತರಣೆ ಮಾಡಿದರು. 


ಇದನ್ನೂ ಓದಿ : Oppose New Year Celebration : ಹೊಸ ವರ್ಷ ಆಚರಣೆ ವಿರೋಧಿಸಿ ರೂಪಾ ಅಯ್ಯರ್, ಬ್ರಹ್ಮಾಂಡ ಗುರೂಜಿಯಿಂದ ಪಾದಯಾತ್ರೆ


ಶಾಂತಿನಗರ ಕೆಎಸ್​ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ನಡೆಸಿ, ಕೆಎಸ್​ಆರ್​ಟಿಸಿ ನಿಗಮದಿಂದ 13 ಲಕ್ಷ ಸೇರಿ, ಒಟ್ಟು ಒಂದು ಕೋಟಿ, 13 ಲಕ್ಷ ರೂ. ಚಕ್ ವಿತರಣೆ ಮಾಡಲಾಯಿತು.


ಕಳೆದ ನವೆಂಬರ್‌ನಲ್ಲಿ ಕೆಎಸ್‌ಆರ್‌ಟಿಸಿ ಕಾರ್ಪೊರೇಷನ್ ತನ್ನ ಉದ್ಯೋಗಿಗಳಿಗೆ ಒಂದು ಕೋಟಿ ರೂಪಾಯಿ ಮೌಲ್ಯದ ಅಪಘಾತ ವಿಮೆ ಯೋಜನೆಯನ್ನು ಪ್ರಾರಂಭಿಸಿತ್ತು. ಅಪಘಾತ ವಿಮಾ ಯೋಜನೆಗೆ ಸಂಬಂಧಿಸಿದಂತೆ ಎಸ್ ಬಿಐ ಜತೆ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ 50 ಲಕ್ಷ ರೂ.ಗಳ 50 ಲಕ್ಷ ರೂ.ಗಳನ್ನು ಒಟ್ಟು 1 ಕೋಟಿ ರೂ.ಗಳ ಅಪಘಾತ ವಿಮೆಯನ್ನು ಸಿಬ್ಬಂದಿಗೆ ನೀಡುವುದಾಗಿ ಘೋಷಿಸಲಾಗಿತ್ತು.


ಕೆಎಸ್‌ಆರ್‌ಟಿಸಿ ನಿಗಮದಿಂದ ಈ ಕಾರ್ಯದಿಂದಾಗಿ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ಅಥವಾ ಅವರ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ದೊರೆಯುವಂತೆ ಮಾಡಲಾಗಿದೆ. ಈ ವಿಮಾ ಯೋಜನೆಗಾಗಿ, ಉದ್ಯೋಗಿಗಳು ತಿಂಗಳಿಗೆ 62.50 ರೂ. ಮತ್ತು ಜಿಎಸ್ಟಿ ಸೇರಿದಂತೆ ಒಟ್ಟು 885 ರೂ. ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸಬೇಕಾಗಿತ್ತು. ಅಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸಮ್ಮುಖದಲ್ಲಿ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದರು.


ಇದನ್ನೂ ಓದಿ : KM Shivalingegowda : 'ನನಗೂ ಹಾಗೂ ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ'


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.