ತುಮಕೂರು: ಸಪೋಟ ಹಣ್ಣಿನ ಮರಕ್ಕೆ ಕಟ್ಟಿದ ತಂತಿಗೆ ಸಿಲುಕಿ ಗಾಯಗೊಂಡಿದ್ದ ಕರಡಿಯನ್ನು ಅರಣ್ಯಾಧಿಕಾರಿಗಳು ಅರವಳಿಕೆ ನೀಡಿ ರಕ್ಷಿಸಿದ  ಘಟನೆ ತುಮಕೂರು ಜಿಲ್ಲೆಯ ಕುಣಿಗಲ್  ತಾಲೂಕಿನ  ಕಾಡಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಹಲವು ಗ್ರಾಮಗಳು ಬೆಟ್ಟ, ಗುಡ್ಡ, ದಟ್ಟವಾದ ಅರಣ್ಯವಿರುತ್ತದೆ. ಈ ಪ್ರದೇಶದಲ್ಲಿ ಚಿರತೆ ಹಾಗೂ ಕರಡಿಗಳ ಉಪಟಳ ಹೆಚ್ಚಾಗಿದೆ, ಡಿ 13 ರಂದು ಎಲೆಕಡಕಲು ಗ್ರಾಮದ ಯುವ ರೈತ ರಾಜು ಕರಡಿ ದಾಳಿಗೆ ಮೃತಪಟ್ಟಿದ್ದರು. ಇದರಿಂದ ಜನರಲ್ಲಿ ಭಯದ ಆತಂಕ ಇನ್ನೂ ದೂರವಾಗಿಲ್ಲ. 


ಇದನ್ನೂ ಓದಿ- ಪ್ರತಿ ಸರ್ಕಾರಿ ಕಾಲೇಜಿನಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಾಪನೆಗೆ ಆದೇಶ


ಈ ನಡುವೆ ಕಾಡಬೋರನಹಳ್ಳಿ ಗ್ರಾಮದ ರಾಜಣ್ಣ ಅವರ ಜಮೀನಿನಲ್ಲಿ ಸಪೋಟ ಸೇರಿದಂತೆ ವಿವಿಧ ಹಣ್ಣಿನ ಮರಗಳು ಬೆಳೆದಿವೆ. ಬೆಳೆ ನಾಶವನ್ನು ತಪ್ಪಿಸುವ ಸಲುವಾಗಿ ಮರಕ್ಕೆ ತಂತಿಯನ್ನು ಕಟ್ಟಲಾಗಿತ್ತು, ಈ ವೇಳೆ ಆಹಾರಕ್ಕಾಗಿ ಅರಸಿ ಬಂದ ಕರಡಿ ಮರ ಹತ್ತುವ ವೇಳೆ ಮರಕ್ಕೆ ಕಟ್ಟಿದ್ದ ತಂತಿಗೆ ಸಿಕ್ಕಿ ಹಾಕಿಕೊಂಡು ಕೆಳಕ್ಕೆ ಇಳಿಯಲಾಗದೇ ಜೋತು ಬಿದ್ದಿತು. ಇದನ್ನ ಕಂಡ ಗ್ರಾಮಸ್ಥರು  ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. 


ಇದನ್ನೂ ಓದಿ- ಕ್ಯಾಪ್ಟನ್ ರಾಕೇಶ್ ಟಿ ಆರ್ ರವರಿಗೆ ಶೌರ್ಯ ಚಕ್ರ ಪ್ರಶಸ್ತಿ


ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ವಲಯ   ಅರಣ್ಯಾಧಿಕಾರಿ ಮಹಮದ್ ಮನ್ಸೂರ್, ಬನ್ನೇರುಘಟ್ಟ ವನ್ಯ ಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಉಮಾಶಂಕರ್ ಕರಡಿಗೆ ಅರವಳಿಕೆ ನೀಡಿ ಅದನ್ನು ರಕ್ಷಿಸಿ, ಆರೋಗ್ಯ ತಪಾಸಣೆ ಮಾಡಿ ಸೂಕ್ತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.