ಕ್ಯಾಪ್ಟನ್ ರಾಕೇಶ್ ಟಿ ಆರ್ ರವರಿಗೆ ಶೌರ್ಯ ಚಕ್ರ ಪ್ರಶಸ್ತಿ

ಭಯೋತ್ಪಾದಕರು ನಾಗರಿಕರು ಇರುವ ಸ್ಥಳಗಳಿಗೆ ತೆರಳಿ ದುಷ್ಕೃತ್ಯ ಎಸಗಬಹುದಾದುದನ್ನು ಮನಗಂಡ ನಂತರ ನೇರವಾಗಿ ತನ್ನ ಪ್ರಾಣದ ಹಂಗನ್ನು ತೊರೆದು ಅತ್ಯಂತ ನಿಖರವಾದ ಗುಂಡಿನ ದಾಳಿಯಿಂದ ೨ ಭಯೋತ್ಪಾದಕರನ್ನು ನೆಲಕ್ಕುರುಳಿಸಿದ್ದು ರಾಕೇಶ್ ರವರ ಸಾಹಸಕ್ಕೆ ಸಾಕ್ಷಿ.

Written by - Zee Kannada News Desk | Last Updated : Jan 26, 2023, 04:53 PM IST
  • ರಾಕೇಶ್ ಟಿ ಆರ್ ರವರಿಗೆ ಶೌರ್ಯ ಚಕ್ರ ಪ್ರಶಸ್ತಿ
  • ಭಯೋತ್ಪಾದಕರನ್ನು ನೆಲಕ್ಕುರುಳಿಸಿದ್ದು ರಾಕೇಶ್ ರವರ ಸಾಹಸಕ್ಕೆ ಸಾಕ್ಷಿ.
  • ರಾಕೇಶ್ ಟಿ ಆರ್ 9 ಪ್ಯಾರಾ ಟ್ರೂಪ್ ಕಮಾಂಡರ್ ಆಗಿದ್ದರು
ಕ್ಯಾಪ್ಟನ್ ರಾಕೇಶ್ ಟಿ ಆರ್ ರವರಿಗೆ ಶೌರ್ಯ ಚಕ್ರ ಪ್ರಶಸ್ತಿ title=

ಬೆಂಗಳೂರು : ಅಪರಿಮಿತ ಧೈರ್ಯ, ಸಮಯಪ್ರಜ್ಞೆಯಿಂದ ಫಿದಾಯಿನ್ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ, ದೊಡ್ಡ ಅನಾಹುತವನ್ನು ತಪ್ಪಿಸಿರುವ ಕ್ಯಾಪ್ಟನ್ ಶ್ರೀ ರಾಕೇಶ್ ಟಿ ಆರ್ ರವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಎಪ್ರಿಲ್ 24, 2022 ರಂದು ಜಮ್ಮು ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ   ಪ್ರಧಾನಿ ನರೇಂದ್ರ ಮೋದಿ  ಭಾಗವಹಿಸುವವರಿದ್ದರು.  ಈ ಸಭೆಯನ್ನು ಗುರಿಯಾಗಿ ಇಟ್ಟುಕೊಂಡು ಫಿದಾಯಿನ್ ಅಟ್ಯಾಕ್ ನಡೆಸಿ, ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಸಂಚು ರೂಪಿಸಿದ್ದರು. ಭಯೋತ್ಪಾದಕರ ಸಂಚಿನ ಮುನ್ಸೂಚನೆ ಪಡೆದಿದ್ದ  9 ಪ್ಯಾರಾ ಟ್ರೂಪ್ ಕಮಾಂಡರ್ ರಾಕೇಶ್ ಟಿ ಆರ್ ನೇತೃತ್ವದ ಅಲರ್ಟ್ ತಂಡ ಜಮ್ಮು ಪ್ರದೇಶದಾದ್ಯಂತ ಸರ್ಚ್ ಕಾರ್ಯ ನಡೆಸುತ್ತಿತ್ತು. 

ಇದನ್ನೂ ಓದಿ :ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟು ಮೀಸಲಾತಿ ಪಾಲನೆ ಕಡ್ಡಾಯ

ಇದೇ ಸಮಯದಲ್ಲಿ ಭಯೋತ್ಪಾದಕರು ರಕ್ಷಣಾ ಪಡೆಗಳ ಕಾನ್ವಾಯ್ ಮೇಲೆ ದಾಳಿ ನಡೆಸಿದ ಸುದ್ದಿ ತಿಳಿದು, ತಕ್ಷಣವೇ ಭಯೋತ್ಪಾದಕರನ್ನು ಸಂಪೂರ್ಣ ಸುತ್ತುವರೆದ ಕಮಾಂಡರ್ ರಾಕೇಶ್ ನೇತೃತ್ವದ ತಂಡವು ಭಯೋತ್ಪಾದಕರು ಹೊರ ಹೋಗಲು ಸಾಧ್ಯವಾಗದಂತೆ ತಡೆಹಿಡಿದ್ದರು.  

ಭಯೋತ್ಪಾದಕರು ನಾಗರಿಕರು ಇರುವ ಸ್ಥಳಗಳಿಗೆ ತೆರಳಿ ದುಷ್ಕೃತ್ಯ ಎಸಗಬಹುದಾದುದನ್ನು ಮನಗಂಡ ನಂತರ ತನ್ನ ಪ್ರಾಣದ ಹಂಗನ್ನು ತೊರೆದು ಅತ್ಯಂತ ನಿಖರವಾದ ಗುಂಡಿನ ದಾಳಿಯಿಂದ ಭಯೋತ್ಪಾದಕರನ್ನು ನೆಲಕ್ಕುರುಳಿಸಿದ್ದು ರಾಕೇಶ್ ಸಾಹಸಕ್ಕೆ ಸಾಕ್ಷಿ.

ಇದನ್ನೂ ಓದಿ : Chitradurga : ಮದುವೆ ಮುಹೂರ್ತದಲ್ಲಿ ಅಕ್ಷತೆ ಜೊತೆ ಅರಳಿದ ಸಂವಿಧಾನ! 

ಈ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಶ್ರೀ ರಾಕೇಶ್ ಟಿ ಆರ್ ರವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News