ನವದೆಹಲಿ: Karnataka Hijab Controversy - ಕರ್ನಾಟಕದಲ್ಲಿ  (Karnataka) ಆರಂಭವಾದ ಹಿಜಾಬ್ ವಿವಾದಕ್ಕೆ (Hijab Controversy) ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ (Karnataka High Court) ಈಗಾಗಲೇ ತೀರ್ಪು ಪ್ರಕಟಿಸಿದೆ. ಆ ತೀರ್ಪಿನಲ್ಲಿ, ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ಅಥವಾ ಇತರ ಯಾವುದೇ ಧಾರ್ಮಿಕ ಬಟ್ಟೆಗಳನ್ನು ಧರಿಸುವುದನ್ನು ನ್ಯಾಯಾಲಯವು ಸ್ಪಷ್ಟವಾಗಿ ನಿಷೇಧಿಸಿದೆ. ನ್ಯಾಯಾಲಯದ ಈ ತೀರ್ಪು ಮುಸ್ಲಿಂ ಬುದ್ಧಿಜೀವಿಗಳಿಗೆ ಅಷ್ಟೊಂದು ಹಿಡಿಸಿಲ್ಲ.

COMMERCIAL BREAK
SCROLL TO CONTINUE READING

'ಹಿಜಾಬ್ ಬಗ್ಗೆ ಮೌಲಾನಾ ಮಾತನಾಡಬೇಕು, ನ್ಯಾಯಾಧೀಶರಲ್ಲ'
ಇದೀಗ ದೇಶದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ (SY Qureshi) ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕುರೇಷಿ, 'ಕುರಾನ್‌ನಲ್ಲಿ ಹಿಜಾಬ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು  ಮೌಲಾನಾ ಮಾತನಾಡಬೇಕು, ನ್ಯಾಯಾಧೀಶರಲ್ಲ. ಒಂದು ವೇಳೆ ಮೌಲಾನಾ IPCಯ ನಿರ್ಧಾರಗಳನ್ನು ನೀಡಲು ಪ್ರಾರಂಭಿಸಿದರೆ ಅದು ಸರಿಯೇ?' ಎಂದು ಅವರು ಪ್ರಶ್ನಿಸಿದ್ದಾರೆ.

'ಶಾಲೆಗಳಲ್ಲಿ ಕುಂಕುಮವನ್ನು ಏಕೆ ಅನುಮತಿಸಲಾಗಿದೆ, ಹಿಜಾಬ್ ಏಕೆ ಇಲ್ಲ?'
ಇಷ್ಟಕ್ಕೆ ನಿಲ್ಲದ ಎಸ್ ವೈ ಖುರೇಷಿ ಇಷ್ಟಕ್ಕೇ ‘ಶಾಲೆಗಳಲ್ಲಿ ಹಿಂದೂ ಪೇಟ, ಸಿಂಧೂರಕ್ಕೆ ಅವಕಾಶ ನೀಡುವುದಾದರೆ ಹಿಜಾಬ್ ಗೆ ಸಮಸ್ಯೆ ಏಕೆ?’ ಎಂದು ಪ್ರಶ್ನಿಸಿದರು. ಖುರೇಷಿಯ ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. 

ಖುರೇಷಿಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದ BJP
ಇನ್ನೊಂದೆಡೆ, ಬಿಜೆಪಿಯ ಸಂಸದ ಸಾಮಾಜಿಕ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್, ಖುರೇಷಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಕೇವಲ ವಿದ್ಯಾವಂತರಾಗುವುದರಿಂದ ಏನೂ ಆಗಲ್ಲ, ಟ್ವಿನ್ ಟವರ್‌ನಿಂದ ಆಜಾದ್ ಮೈದಾನದವರೆಗೆ ಮತ್ತು ಗಾಂಧಿ ಮೈದಾನದಿಂದ ಗೋದ್ರಾದವರೆಗೆ ಒಂದೇ ಮನಸ್ಥಿತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಎಸ್‌ವೈ ಖುರೇಷಿ ಸಾಬೀತುಪಡಿಸಿದ್ದಾರೆ' ಎಂದು ಪರಾಶರ್  ಹೇಳಿದ್ದಾರೆ.


ಇದನ್ನೂ ಓದಿ -ಕೇಸರಿ ವಸ್ತ್ರ, ಕುಂಕುಮ, ಪೇಟ ಎಲ್ಲದರ ಮೇಲೂ ಸಿದ್ದರಾಮಯ್ಯಗೆ ದ್ವೇಷ: ಬಿಜೆಪಿ

ನ್ಯಾಯಾಲಯದ ತೀರ್ಪಿನಿಂದ ಒಂದು ವಿಭಾಗ ಅತೃಪ್ತವಾಗಿದೆ
ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮುಸ್ಲಿಂ ಸಮಾಜ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಅಮೀರ್-ಎ-ಶರಿಯತ್ ಕರೆ ಮೇರೆಗೆ ನ್ಯಾಯಾಲಯದ ತೀರ್ಪಿನ ವಿರುದ್ಧ ಮರುದಿನ ಕರ್ನಾಟಕ ರಾಜ್ಯಾದ್ಯಂತ ಬೃಹತ್ ಬಂದ್ ಆಚರಿಸಲಾಗಿತ್ತು. ನ್ಯಾಯಾಲಯದ ವಿರುದ್ಧ ಪ್ರತಿಕ್ರಿಯಿಸಿದ ಮೌಲಾನಾ, ಧರ್ಮದ ವಿಚಾರದಲ್ಲಿ ನ್ಯಾಯಾಲಯಕ್ಕೆ ಮಾತನಾಡುವ ಹಕ್ಕಿಲ್ಲ ಎಂದಿದ್ದರು.


ಇದನ್ನೂ ಓದಿ-Karnataka Hijab Row: ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಎರಡನೇ ಅವಕಾಶ ಇಲ್ಲ, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಶಾಲೆಯಲ್ಲಿ ಹಿಜಾಬ್ ಧರಿಸುವುದು ತಮ್ಮ ಮೂಲಭೂತ ಹಕ್ಕು ಎಂದು ಘೋಷಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರು, ಹೈಕೋರ್ಟ್‌ನಲ್ಲಿ ಕಾನೂನು ಸೋಲಿನ ನಂತರ ಇದೀಗ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ. ಇದನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ. ಮುಂದಿನ ದಿನಗಳಲ್ಲಿ ಈ ಕುರಿತು ವಿಚಾರಣೆ ನಡೆಯಲಿದೆ.

ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.