ಬೆಂಗಳೂರು: ಕೇಸರಿ ವಸ್ತ್ರ, ಕುಂಕುಮ, ಪೇಟ ಎಲ್ಲದರ ಮೇಲೂ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ರಿಗೆ ದ್ವೇಷವಿದೆ ಎಂದು ಬಿಜೆಪಿ ಕಿಡಿಕಾರಿದೆ. #ಹಿಂದೂವಿರೋಧಿಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ಬಳಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
‘ಸಿದ್ದರಾಮಯ್ಯ ಅವರ ಹಿಂದೂ ಪ್ರೀತಿ ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆ. ವೀರಶೈವ-ಲಿಂಗಾಯತರ ನಡುವೆ ಧರ್ಮದ ಬೆಂಕಿ ಹಚ್ಚಿದ್ದು ನೀವಲ್ಲವೇ? ನಿಮ್ಮ ವೋಟ್ ಬ್ಯಾಂಕ್ ರಾಜಕಾರಣ(VoteBank Politics)ದ ಪ್ರತಿಫಲದಿಂದಾಗಿ ಇಂದು ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹಿಂದೂ ವಿರೋಧಿ ನೀತಿ ಹೀಗೇ ಸಾಗಿದರೆ ನಾಮಾವಶೇಷವಾಗುವುದು ಖಚಿತ’ ಎಂದು ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ಅವರ ಹಿಂದೂ ಪ್ರೀತಿ ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆ.
ವೀರಶೈವ-ಲಿಂಗಾಯತರ ನಡುವೆ ಧರ್ಮದ ಬೆಂಕಿ ಹಚ್ಚಿದ್ದು ನೀವಲ್ಲವೇ ?
ನಿಮ್ಮ ವೋಟ್ ಬ್ಯಾಂಕ್ ರಾಜಕಾರಣದ ಪ್ರತಿಫಲದಿಂದಾಗಿ ಇಂದು ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ.
ಹಿಂದೂ ವಿರೋಧಿ ನೀತಿ ಹೀಗೇ ಸಾಗಿದರೆ ನಾಮಾವಶೇಷವಾಗುವುದು ಖಚಿತ.#ಹಿಂದೂವಿರೋಧಿಬುರುಡೆರಾಮಯ್ಯ
— BJP Karnataka (@BJP4Karnataka) March 26, 2022
ಇದನ್ನೂ ಓದಿ: Viral Video ನೋಡಿ: ಕೊಂಡ ಹಾಯುವಾಗ ಕೊಂಡಕ್ಕೆ ಬಿದ್ದ ಅರ್ಚಕ
‘ಸಿದ್ದರಾಮಯ್ಯ(Siddaramaiah)ನವರು ಅನ್ಯ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಅವರನ್ನು ಓಲೈಸಲು ಅವರಂತೆ ಉಡುಗೆ, ತೊಡುಗೆ ತೊಡುತ್ತಾರೆ. ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳನ್ನು ಕಂಡರೆ ಸಿದ್ದರಾಮಯ್ಯನವರಿಗೆ ಅದೇಕೆ ಅಸಹನೆ? ಕೇಸರಿ ವಸ್ತ್ರ, ಕುಂಕುಮ, ಪೇಟ(Karnataka Hijab Row) ಎಲ್ಲದರ ಮೇಲೂ ದ್ವೇಷ. ಹಿಂದೂ ವಿರೋಧಿ ನಿಲುವು ಏಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಸಿದ್ದರಾಮಯ್ಯನವರು ಅನ್ಯ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಅವರನ್ನು ಓಲೈಸಲು ಅವರಂತೆ ಉಡುಗೆ, ತೊಡುಗೆ ತೊಡುತ್ತಾರೆ.
ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳನ್ನು ಕಂಡರೆ ಸಿದ್ದರಾಮಯ್ಯನವರಿಗೆ ಅದೇಕೆ ಅಸಹನೆ?
ಕೇಸರಿ ವಸ್ತ್ರ, ಕುಂಕುಮ, ಪೇಟ ಎಲ್ಲದರ ಮೇಲೂ ದ್ವೇಷ.
ಹಿಂದೂ ವಿರೋಧಿ ನಿಲುವು ಏಕೆ?#ಹಿಂದೂವಿರೋಧಿಬುರುಡೆರಾಮಯ್ಯ
— BJP Karnataka (@BJP4Karnataka) March 26, 2022
‘ಹಿಂದೂಗಳ ಮಾರಣ ಹೋಮ ಮಾಡಿದ ಟಿಪ್ಪುವನ್ನು ವೈಭವಿಕರಿಸಿದ್ದು ಸಿದ್ದರಾಮಯ್ಯ(Siddaramaiah). ನಾನೂ ಹಿಂದೂ ಎನ್ನುವ ಸಿದ್ದರಾಮಯ್ಯನವರಿಗೆ ಟಿಪ್ಪುವನ್ನು ಮೈಸೂರು ಹುಲಿ ಎಂಬಂತೆ ಬಿಂಬಿಸುವಾಗ ಸಹಸ್ರಾರು ಸಂಖ್ಯೆಯಲ್ಲಿ ಮಡಿದ ಹಿಂದೂಗಳ ನೆನಪಾಗಲಿಲ್ಲವೇ? ಮತಾಂಧ ಟಿಪ್ಪುವಿಗೆ ಜಯಂತಿ ಆಚರಿಸಿದ್ದು ಹಿಂದೂಗಳಿಗೆ ಮಾಡಿದ ಅವಮಾನವಲ್ಲವೇ?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.
ಹಿಂದೂಗಳ ಮಾರಣ ಹೋಮ ಮಾಡಿದ ಟಿಪ್ಪುವನ್ನು ವೈಭವಿಕರಿಸಿದ್ದು ಸಿದ್ದರಾಮಯ್ಯ
ನಾನೂ ಹಿಂದೂ ಎನ್ನುವ ಸಿದ್ದರಾಮಯ್ಯನವರಿಗೆ ಟಿಪ್ಪುವನ್ನು ಮೈಸೂರು ಹುಲಿ ಎಂಬಂತೆ ಬಿಂಬಿಸುವಾಗ ಸಹಸ್ರಾರು ಸಂಖ್ಯೆಯಲ್ಲಿ ಮಡಿದ ಹಿಂದೂಗಳ ನೆನಪಾಗಲಿಲ್ಲವೇ?
ಮತಾಂಧ ಟಿಪ್ಪುವಿಗೆ ಜಯಂತಿ ಆಚರಿಸಿದ್ದು ಹಿಂದೂಗಳಿಗೆ ಮಾಡಿದ ಅವಮಾನವಲ್ಲವೇ?#ಹಿಂದೂವಿರೋಧಿಬುರುಡೆರಾಮಯ್ಯ
— BJP Karnataka (@BJP4Karnataka) March 26, 2022
ಇದನ್ನೂ ಓದಿ: ವರ್ಕೌಟ್ ಮಾಡುವಾಗ್ಲೆ ಕುಸಿದು ಬಿದ್ದು ಮಹಿಳೆ ಸಾವು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.