ಹುಬ್ಬಳ್ಳಿ : ಬಿಜೆಪಿ ಅನೇಕ ನಾಯಕರು‌‌ ಪಕ್ಷ ಸೇರುವಂತೆ ಒತ್ತಾಯಿಸಿದ್ರು. ಪಕ್ಷೇತರ ಚುನಾವಣೆ ಎದುರಿಸಬೇಕು ಅಂತ ಕೆಲವರು ಹೇಳಿದ್ರು. ಎಲ್ಲ ನಮ್ಮ ಮತದಾರ ಒಪ್ಪಿಗೆ ಪಡೆದು ಬಿಜೆಪಿಗೆ ಸೇರಿ ದ್ದೇನೆ ಎಂದು ವಿಧಾನ‌ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಸಭಾಪತಿಯಾಗಿ, ಶಾಸಕನಾಗಿ ಮುಂದುವರೆಯಬಹುದಿತ್ತು. ನಾನು ಈ ವರೆಗೆ ನೈತಿಕತೆ ಇಟ್ಟುಕೊಂಡು ಬಂದವ. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲಬಾರಿಗೆ ಸಭಾಪತಿಯೋರ್ವ ರಾಜೀನಾಮೆ ನೀಡಿದ್ದಾನೆ. ಹಲವು ಪಕ್ಷಗಳಲ್ಲಿ ಕೆಲಸ ಮಾಡಿದ್ದೇನೆ. ರಾಮಕೃಷ್ಣ ಹೆಗಡೆ ಸಾಯುವವರೆಗೂ ಅವರ ಜತೆಗೆ ಇದ್ದೆ. ಹಲವು ರಾಜಕೀಯ ಮುಖಂಡರೊಂದಿಗೆ ಒಳ್ಳೆ ಒಡನಾಟ ಹೊಂದಿದ್ದೇನೆ. ಎಲ್ಲೇ ಇದ್ದರೂ ಕಳಂಕರಹಿತನಾಗಿ ಇರ್ತೆನೆ ಎಂದರು.


ಇದನ್ನೂ ಓದಿ : ಮಳೆ ಅವಾಂತರಕ್ಕೆ ಕಂಗಾಲಾದ ಯಾಲಕ್ಕಿ ಕಂಪಿನ ನಗರಿ ಜನರು


ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಎಲ್ಲರ ಮಾರ್ಗದರ್ಶನ ಪಡೆದು ಪಕ್ಷ ಸಂಘಟನೆ ಮಾಡುವೆ. ಬಹಳ ಆತ್ಮೀಯತೆಯಿಂದ ಬಿಜೆಪಿಗರು ನನ್ನನ್ನು ಬರಮಾಡಿಕೊಂಡಿದ್ದಾರೆ. 23, 24ರಂದು ಕುಟುಂಬ ಸಮೇತ ನಾಮಪತ್ರ ಸಲ್ಲಿಸುತ್ತೇನೆ. ಬಿಜೆಪಿ ಮುಖಂಡರ ಜತೆ ಸಾರ್ವಜನಿಕರ ಜತೆ ಸೇರಿ ನಾಮಪತ್ರ ಸಲ್ಲಿಸುತ್ತೇನೆ. ಬದಲಾವಣೆ ಜಗದ ನಿಯಮ. ನಮ್ಮ ಮತದಾರರ ಭಾವನೆಗಳಿಗೆ ತಕ್ಕನಾಗಿ ನಡೆದುಕೊಂಡಿದ್ದೇನೆ. ಜೆಡಿಎಸ್ ಬಿಡಲು ನಿರ್ದಿಷ್ಟ ಕಾರಣ ಇಲ್ಲ. ಬಿಜೆಪಿಯಿಂದ ಸ್ಫರ್ಧೆ ಮಾಡಬೇಕು ಅಂತ ಒತ್ತಾಯ ಇತ್ತು. ಪಕ್ಷಕ್ಕಿಂತ ಶಿಕ್ಷಕರ ಜತೆ ವೈಯಕ್ತಿಕ ಸಂಬಂಧ ಚನ್ನಾಗಿದೆ,‌ ಅವರು ನನ್ನ ಕೈ ಬಿಡಲ್ಲ. ಜೆಡಿಎಸ್ ನನ್ನನ್ನ ಬೆಳೆಸಿದೆ, ಆ ಬಗ್ಗೆ ಟೀಕೆ ಮಾಡೋದಿಲ್ಲ ಎಂದು ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.