/kannada/photo-gallery/health-benefits-of-bananas-eating-a-banana-every-day-will-give-you-so-many-amazing-benefits-244461 Health Benefits of Bananas: ಪ್ರತಿದಿನ ಒಂದು ಬಾಳೆಹಣ್ಣು ತಿಂದ್ರೆ ನೀವು ಇಷ್ಟೊಂದು ಅದ್ಭುತ ಪ್ರಯೋಜನ ಪಡೆಯುತ್ತೀರಿ Health Benefits of Bananas: ಪ್ರತಿದಿನ ಒಂದು ಬಾಳೆಹಣ್ಣು ತಿಂದ್ರೆ ನೀವು ಇಷ್ಟೊಂದು ಅದ್ಭುತ ಪ್ರಯೋಜನ ಪಡೆಯುತ್ತೀರಿ 244461

ಹಾವೇರಿ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ಊರಿಗೆ ಹೊಕ್ಕ ನೀರು, ರೈತರ ಬೆಳೆಮೇಲೂ ಪರಿಣಾಮ ಬೀರಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಸೃಷ್ಟಿಸಿದ. ಫಸಲಿಗೆ ಬಂದ ಜಮೀನುಗಳಲ್ಲಿ ನೀರು ನಿಂತು ಜಿಲ್ಲೆಯ ರೈತ ಕಂಗಾಲಾಗಿದ್ದಾನೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಇಡೀ ರಾಜ್ಯವೇ ಕಂಗಾಲಾಗಿದೆ, ಇತ್ತ ಹೊಲಗದ್ದೆಗಳಲ್ಲಿ ಬೆಳೆದ ಬೆಳೆ ರೈತನ ಕೈಗೆ ಸಿಗದೆ ಮಳೆಯ ಪಾಲಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರೀಕೊಪ್ಪದಲ್ಲಿ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ರಾಶಿ ಮಾಡಲು ಕೂಡಿ ಹಾಕಿದ್ದ ಶೆಂಗಾ, ಮತ್ತು ಚೆಂಡು ಹೂ ಬೆಳೆಯಲು ತೋಟ ಮಾಡಿಕೊಂಡಿದ್ದ  ಹೊಲಕ್ಕೆ ಹಾಕಿದ ಬೀಜಗಳು, ಮಳೆ ನೀರಿನ ತೇವಾಂಶಕ್ಕೆ ಸಂಪೂರ್ಣ ನಾಶವಾಗಿವೆ. ಸುಮಾರು 15 ಎಕರೆಗೂ ಅಧಿಕ ಪ್ರಮಾಣದಲ್ಲಿನ ಬೆಳೆ ನಾಶವಾಗಿದ್ದು, ರೈತ  ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಇನ್ನೂ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕೋಡಬಾಳ,ಬಸಾಪೂರ, ಹಳೆರಿತ್ತಿ ಗ್ರಾಮಗಳಲ್ಲಿ ರಸ್ತೆಗಳು ಕಿತ್ತು ಹೋಗಿವೆ. ಹೊಲ ಗದ್ದೆಗಳಲ್ಲಿ ನೀರು ನಿಂತು ರೈತರನ್ನು ಮಳೆ ಹೈರಾಣಾಗಿ ಮಾಡಿದೆ.No description available.

ಇದನ್ನೂ ಓದಿ : ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ಕೆಜಿಎಫ್ 2 'ಯಶ'ಸ್ವಿಯಾನ

ಜೊತೆಗೆ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನಾದ್ಯಂತ ಅಕಾಲಿಕ ಮಳೆ ಹೊಡೆತಕ್ಕೆ ಒಣಗಿಸಲು ಹಾಕಿದ್ದ ಮೆಕ್ಕೆಜೋಳದ ರಾಶಿ ಸಂಪೂರ್ಣ ಹಾನಿಯಾಗಿದೆ. ಮಳೆ ಬಿಟ್ಟು ಬಿಡದೆ ಮಳೆಯ ರಭಸದಿಂದ ಮೆಕ್ಕೆಜೋಳ ತೆಲಿ ಹೂಗಿವೆ. ಈ ಹಿನ್ನೆಲೆಯಲ್ಲಿ ಸರಕಾರ ಗಮನಹರಿಸಿ ರೈತರಿಗೆ ಸೂಕ್ತವಾದ ಪರಿಹಾರ ಒದಗಿಸಬೇಕೆಂದು ರೈತರು ಆಗ್ರಹ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ಹಾವೇರಿ ಮತ್ತು ಕಳ್ಳಿಹಾಳ ಮದ್ಯೆ ಇರುವ ಪ್ರಮುಖ ಸೇತುವೆ ಹಳ್ಳದ  ಹಳ್ಳದ ನೀರಿಗೆ ಮುಳುಗಡೆಯಾಗಿ, ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು, ಅದೇ ರಸ್ತೆಯಲ್ಲಿ ಪ್ರತಿನಿತ್ಯ ಸಂಚಾರ ಮಾಡುತ್ತಿದ್ದ ಜನಕ್ಕೆ, ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜನರು ಓಡಾಡಲು ಪರದಾಡುವಂತ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ : ನಟಿ ಚೇತನಾ ರಾಜ್ ಸಾವು ಪ್ರಕರಣ: ಶೆಟ್ಟೀಸ್ ಆಸ್ಪತ್ರೆಗೆ ಬೀಗ ಜಡಿದ ಆರೋಗ್ಯ ಇಲಾಖೆ

ಹಳ್ಳ ಕೊಳ್ಳಗಳು, ಹೊಲಗದ್ದೆಗಳಿಗೆ ಹೊಕ್ಕ ನೀರು,ಜಲಾವೃತಗೊಂಡ ಮನೆಗಳು, ಒಂದು ಕಡೆಯಾದ್ರೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮದ್ಯೆ ವಿದ್ಯುತ್ ಕಂಬಗಳು, ಭಾರಿ ಗಾತ್ರದ ಮರಗಳು ನೆಲಕ್ಕುರುಳುತ್ತಿವೆ. ಹಾವೇರಿ ಜಿಲ್ಲೆಯ ಮಾಸನಕಟ್ಟಿ ಬಳಿ ಮಳೆಯಿಂದ ನೆನೆದು ನೆಲಕ್ಕಪ್ಪಳಿಸಿದ ಭಾರಿ ಗಾತ್ರದ ಮರವೊಂದು, ಚಲಿಸುವ ಬಸ್ ಮುಂದೆಯೇ ರಸ್ತೆ ಮದ್ಯದಲ್ಲಿ ಉರುಳಿದೆ. ಕೂದಲೆಳೆಯಲ್ಲಿ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಇದರಿಂದ ಹಾನಗಲ್ ನಿಂದ ಬಂಕಾಪುರಕ್ಕೆ ತೆರಳುತ್ತಿದ್ದ ಬಸ್ ಅನಾಹುತದಿಂದ ಪಾರಾಗಿದೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯದೇ ಸೇಪ್ ಆಗಿದೆ. ಈ ರೀತಿ ಮುಂಗಾರಿಗೂ ಮೊದಲೇ ಶುರುವಾದ ಮಳೆ ಜನಜೀವನದ ಮೇಲೆ ಇಷ್ಟೋಂದು ಪರಿಣಾಮ ಬೀರಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Section: 
English Title: 
heavy rains affected to Haveri people
News Source: 
Home Title: 

ಮಳೆ ಅವಾಂತರಕ್ಕೆ ಕಂಗಾಲಾದ ಯಾಲಕ್ಕಿ ಕಂಪಿನ ನಗರಿ ಜನರು

ಮಳೆ ಅವಾಂತರಕ್ಕೆ ಕಂಗಾಲಾದ ಯಾಲಕ್ಕಿ ಕಂಪಿನ ನಗರಿ ಜನರು
Yes
Is Blog?: 
No
Tags: 
Facebook Instant Article: 
Yes
Highlights: 

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ಊರಿಗೆ ಹೊಕ್ಕ ನೀರು, ರೈತರ ಬೆಳೆಮೇಲೂ ಪರಿಣಾಮ ಬೀರಿದೆ.

ಹಾವೇರಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಸೃಷ್ಟಿಸಿದ. ಫಸಲಿಗೆ ಬಂದ ಜಮೀನುಗಳಲ್ಲಿ ನೀರು ನಿಂತು ಜಿಲ್ಲೆಯ ರೈತ ಕಂಗಾಲಾಗಿದ್ದಾನೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

Mobile Title: 
ಮಳೆ ಅವಾಂತರಕ್ಕೆ ಕಂಗಾಲಾದ ಯಾಲಕ್ಕಿ ಕಂಪಿನ ನಗರಿ ಜನರು
Zee Kannada News Desk
Publish Later: 
No
Publish At: 
Friday, May 20, 2022 - 17:53
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
2
Is Breaking News: 
No