‘ನಾನು ಕೇಸರಿ ಟವಲ್ ಹಾಕಿ ಬರುತ್ತೇನೆ, ಬನ್ನಿ ಬಡವರನ್ನು ರಕ್ಷಿಸೋಣ’
ಶೇರುಗಳ ಮಾರಾಟದಂತೆ ದಿನದಿಂದ ದಿನಕ್ಕೆ 10, 20 ಪೈಸೆಯಷ್ಟು ತೈಲದರ ಏರಿಸಲಾಗುತ್ತಿದೆ. ಬನ್ರಪ್ಪ, ವಿಶ್ವ ಹಿಂದೂ ಪರಿಷತ್ನವ್ರೇ ಇದಕ್ಕೆ ಏನಾದ್ರೂ ಮಾಡಿ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ, ಬನ್ರಪ್ಪ ಬಡವರನ್ನು ರಕ್ಷಿಸಿ… ಕೇಸರಿ ಟವಲ್ ಹಾಕಿಕೊಂಡು ಬನ್ರಪ್ಪ… ನಾನು ಬರ್ತಿನಿ… ಎಂದು ಭಜರಂಗದಳಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಸೋಮವಾರ ಮಾತನಾಡಿರುವ ಅವರು, ‘ಕೋಮು ಸಾಮರಸ್ಯ ಕದಡುವ ವಿಚಾರಗಳನ್ನು ಇಲ್ಲಿಗೆ ನಿಲ್ಲಿಸಿ. ಇನ್ನು ಸ್ವಲ್ಪ ದಿನಕ್ಕೆ ಡಿಸೇಲ್(Diesel Price) ಸೆಂಚ್ಯೂರಿ ಹೊಡೆಯುತ್ತೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಜನರನ್ನು ನಿರ್ಗತಿಕರನ್ನಾಗಿ ಮಾಡ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾಲು ಸಹ ಇದೆ ಎಂದು ಕಿಡಿಕಾರಿದರು.
ಗ್ಯಾಸ್ ಸಿಲಿಂಡರ್ ಅಲಂಕಾರ ಮಾಡಿಕೊಂಡು ಹೋಗ್ತಿರಾ? ದೇಶದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ. 2 ರಾಷ್ಟ್ರೀಯ ಪಕ್ಷಗಳು 150ರ ರೋಡ್ ಮ್ಯಾಪ್ ಪ್ಲ್ಯಾನ್ ಮಾಡಿಕೊಂಡು ಹೊರಟ್ಟಿದ್ದಾರೆ. ಮನೆ ಮನೆಗೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ(BJP)ಯ ಬಿ ಟೀಮ್ ಅಂತಾ ಸಾರಿದ್ರಿ… ಏನು ದೊಡ್ಡ ಸಾಧನೆ ಮಾಡಿದ್ದೀರಾ ಸಿದ್ದರಾಮಯ್ಯನವರೇ? ಹಿಜಾಬ್ ಹೆಸರು ಹೇಳ್ಬೇಡಿ ಹಿಂದೂ ಓಟ್ ಹೋಗುತ್ತೆ ಅಂತಾ ನಿಮ್ಮ ಅಧ್ಯಕ್ಷರೇ ಹೇಳಿದ್ದಾರೆ. ಹಿಂದೂ-ಮುಸ್ಲಿಂ ಜನರು ದಡ್ಡರಲ್ಲ. ಗುಜರಿ ಕೆಲಸ ಗೊತ್ತಿಲ್ಲದ ವಿಶ್ವ ಹಿಂದೂ ಪರಿಷತ್‍ನವರು ಬೆಂಕಿ ಹಚ್ಚಲು ಬರ್ತಾರೆ. ಶೇರುಗಳ ಮಾರಾಟದಂತೆ ದಿನದಿಂದ ದಿನಕ್ಕೆ 10, 20 ಪೈಸೆಯಷ್ಟು ತೈಲದರ ಏರಿಸಲಾಗುತ್ತಿದೆ. ಬನ್ರಪ್ಪ ವಿಶ್ವ ಹಿಂದೂ ಪರಿಷತ್(Vishva Hindu Parishad)ನವ್ರೇ ಇದಕ್ಕೆ ಏನಾದ್ರೂ ಮಾಡಿ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಇದನ್ನೂ ಓದಿ: ರಾಜ್ಯ & ಕೇಂದ್ರ ರಾಜಕೀಯದಲ್ಲಿ ಬದಲಾವಣೆ ಇಲ್ಲ: ಭವಿಷ್ಯ ನುಡಿದ ಗೊಂಬೆಗಳು!
ಬಿಜೆಪಿ ವಿರುದ್ಧ ಕೆಂಡಾಮಂಡಲ
ಸಿಎಂ ಬಸವರಾಜ್ ಬೊಮ್ಮಯಿ(Basavaraj Bommai) ಸ್ವತಂತ್ರವಾಗಿ ಸರ್ಕಾರ ನಡೆಸುತ್ತಿಲ್ಲ. ಯಾರದೋ ರಿಮೋಟ್ ಕಂಟ್ರೋಲ್‍ನಿಂದ ನಡೆಯುತ್ತಿದೆ. ಆರ್‍ಎಸ್‍ಎಸ್‍ನವರನ್ನುಮೆಚ್ಚಿಸಲು ಅವರು ಸರ್ಕಾರ ನಡೆಸುತ್ತಿದ್ದಾರೆ ಹೊರತು ಜನರನ್ನು ಮೆಚ್ಚಿಸಲು ಅಲ್ಲವೆಂದು ಟೀಕಿಸಿದರು.
‘ದಿ ಕಾಶ್ಮೀರಿ ಫೈಲ್ಸ್’(The Kashmir Files) ಸಿನಿಮಾಗೆ ಶೇ.100ರಷ್ಟು ತೆರಿಗೆ ವಿನಾಯ್ತಿ ಮಾಡಿದ್ರಿ. ಮಂತ್ರಿಗಳ ಕಚೇರಿಯಲ್ಲಿರುವ ಹಾಗೂ ನಿಮ್ಮ ಕಚೇರಿಯಲ್ಲಿರುವ ಫೈಲ್‍ಗಳ ಟ್ಯಾಕ್ಸ್ ಫ್ರೀ ಮಾಡಿ. ಮೊದಲು ಅದಕ್ಕೆ ರಿಯಾಯಿತಿ ನೀಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಮೋದಿ ಪ್ರಧಾನಿಯಾದ ಮೇಲೆ ಮೇಲೆ ದೇಶದಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲವೆಂದು ಶೋಭಾ ಕರಂದ್ಲಾಜೆ ಹೇಳ್ತಾರೆ. ಇದಕ್ಕಿಂದ ದೊಡ್ಡ ಏಪ್ರಿಲ್ ಫುಲ್ ಯಾವದು ಇಲ್ಲವೆಂದು ಇದೇ ವೇಳೆ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಬೆಂಡೆತ್ತಿದ ಎಚ್.ಡಿ.ಕುಮಾರಸ್ವಾಮಿ
ಹೊರಟ್ಟಿ ಭವಿಷ್ಯ ಹಾಳು ಮಾಡಲ್ಲ!
ಬಸವರಾಜ್ ಹೊರಟ್ಟಿ(Basavaraj Horatti) ಬಿಜೆಪಿ ಸೇರ್ಪಡೆಯಿಂದ ನನಗೇನು ಶಾಕ್ ಆಗಿಲ್ಲ. ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಹಲವಾರು ತಿಂಗಳಿನಿಂದ ಬಿಜೆಪಿ ಜೊತೆ ಚರ್ಚೆ ಮಾಡಿದ್ದಾರೆ. ಕ್ಷೇತ್ರದ ವಿಚಾರವಾಗಿ ನನ್ನ ಬಳಿ ಹೇಳಿಕೊಂಡಿದ್ರು. ಬಿಜೆಪಿ ಹಣದ ವೆಚ್ಚ ತಡೆಯಲು ಕಷ್ಟ ಆಗುತ್ತೆ ಅಂತಾ ಹೇಳಿದ್ರು. ಎರಡೂ ಪಕ್ಷಗಳಿಂದ ಒತ್ತಡ ಇದೆ ಅಂತಾ ಹೇಳಿದ್ರು. ನಿಮ್ಮ ಭವಿಷ್ಯ ನಾನು ಹಾಳು ಮಾಡಲು ಸಿದ್ದವಿಲ್ಲ .ನಿಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸೂಕ್ತ ತಿರ್ಮಾನ ತೆಗೆದುಕೊಳ್ಳಿ ಎಂದು ಹೇಳಿದ್ದೆ. ಜಿಡಿಸ್(JDS)ನಿಂದ ಇನ್ನೊಬ್ಬ ಕೋಣರೆಡ್ಡಿ ಅಥವಾ ಹೊರಟ್ಟಿ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ರೋಷನ್ ಬೇಗ್ ಜೆಡಿಎಸ್‍ಗೆ ಸೇರ್ಪಡೆ ಆಗಲಿದ್ದಾರೆಂದು ಇದೆ ವೇಳೆ ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.