ಧಾರವಾಡ: ಈ ವರ್ಷ ರಾಜ್ಯ ಮತ್ತು ಕೇಂದ್ರ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಮಣ್ಣಿನ ಗೊಂಬೆಗಳು ಭವಿಷ್ಯ(Doll Prediction) ನುಡಿದಿವೆ. ಧಾರವಾಡ ಜಿಲ್ಲೆಯ ಹನುಮನಕೊಪ್ಪ ಗ್ರಾಮದ ಗೊಂಬೆಗಳು ಪ್ರತಿವರ್ಷ ಯುಗಾದಿ ಹಬ್ಬದಂದು ಭವಿಷ್ಯ ನುಡಿಯುತ್ತವೆ. ಅದೇ ರೀತಿ ಈಗ ರಾಜಕೀಯ ಭವಿಷ್ಯವನ್ನು ತಿಳಿಸಿವೆ.
ಹನುಮನಕೊಪ್ಪ(Hanumanakoppa)ದ ಮಣ್ಣಿನ ಗೊಂಬೆಗಳು ರಾಜಕೀಯ ಭವಿಷ್ಯವನ್ನು ನಿಖರವಾಗಿ ಹೇಳುತ್ತವೆ. ಪ್ರತಿ ಯುಗಾದಿಗೆ ಇಲ್ಲಿ ಗೊಂಬೆ ಭವಿಷ್ಯ ನಡೆಯುತ್ತದೆ. ಕಳೆದ ವರ್ಷ ಬೊಂಬೆಗಳು ಸಿಎಂ ಬದಲಾವಣೆ ಮುನ್ಸೂಚಣೆ ನೀಡಿದ್ದವು. ಅದರಂತೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಬಸವರಾಜ್ ಬೊಮ್ಮಾಯಿ(Basavaraj Bommai)ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಇದನ್ನೂ ಓದಿ: Halal vs Jhatka Row: ಹಿಂದೂ ಸಂಘಟನೆಗಳ ವಿರುದ್ಧ ಗುಡುಗಿದ ನಟ ಚೇತನ್ ಅಹಿಂಸಾ
ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆಯ ಮಾತುಗಳು ಕೇಳಿಬಂದಿದ್ದವು. ಆದರೆ ಈ ಸಲ ರಾಜ್ಯ ಮತ್ತು ಕೇಂದ್ರ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲವೆಂದು ಗೊಂಬೆಗಳ ಭವಿಷ್ಯದಿಂದ ತಿಳಿದುಬಂದಿದೆ. ರಾಜಕೀಯ ಭವಿಷ್ಯ ನಿರ್ಧರಿಸುವ ಗೊಂಬೆಗಳಿಗೆ ಯಾವುದೇ ರೀತಿ ಧಕ್ಕೆಯಾಗಿಲ್ಲ. ಯುಗಾದಿ ಅಮವಾಸ್ಯೆ(Ugadi Amavasya) ರಾತ್ರಿ ಗ್ರಾಮಸ್ಥರು ಗೊಂಬೆ ಮಾಡಿಟ್ಟು ಬರುತ್ತಾರೆ. ಇಂದು ಬೆಳಗಿನ ಜಾವ ಗೊಂಬೆಗಳನ್ನು ನೋಡಿ ಭವಿಷ್ಯ ನಿರ್ಧಾರ ಮಾಡಲಾಗಿದೆ.
ಮಳೆ ಬೆಳೆ ಬಗ್ಗೆಯೂ ಗೊಂಬೆಗಳು ಭವಿಷ್ಯ(Doll Political Prediction) ನುಡಿದಿವೆ. ಈ ಬಾರಿ ಅನ್ನ ಆಹಾರಕ್ಕೆ ತೊಂದರೆ ಆಗುವುದಿಲ್ಲವಂತೆ. ಆದರೆ ಉಳುಮೆ ಮಾಡುವಾಗ ರೈತರಿಗೆ ಪೆಟ್ಟುಗಳು ಆಗುವ ಸಾಧ್ಯತೆ ಇದೆ. ರೈತರಿಗೆ ಜಮೀನಿನಲ್ಲಿ ಪೆಟ್ಟಾಗಬಹುದೆಂಬ ಭವಿಷ್ಯವನ್ನು ಗೊಂಬೆಗಳು ನುಡಿದಿವೆ.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ.ಗಳ ಅನುದಾನ:- ಸಿಎಂ ಬಸವರಾಜ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.