ಬೆಂಗಳೂರು : ತಾಜ್ ವೆಸ್ಟೆಂಡ್‌ನಲ್ಲಿ ರಾಸಲೀಲೆ ಮಾಡಲು ನಾನು ಹೋಗುತ್ತಿರಲಿಲ್ಲ. ಸರ್ಕಾರಿ ಬಂಗಲೆ ಇರಲಿಲ್ಲ. ಹಾಗಾಗಿ ಸ್ವಲ್ಪ ಸಮಯ ವಿಶ್ರಾಂತಿ ಮಾಡಲು ಹೋಗುತ್ತಿದ್ದೆ. ನಾನು ಎಲ್ಲೇ ಹೋದರೂ ನನ್ನ ಪಿಎ ಜತೆಯಲ್ಲೇ ಇರುತ್ತಿದ್ದರು. ಈಗಲೂ ಇರುತ್ತಾರೆ. ಆಗ ನನ್ನ ಸಂಪುಟ ಸಹೋದ್ಯೋಗಿ ಆಗಿದ್ದ ಸಾ.ರಾ.ಮಹೇಶ್ ಅವರೂ ಇರುತ್ತಿದ್ದರು. ಇನ್ನು ಅನೇಕ ಸ್ನೇಹಿತರು ಇರುತ್ತಿದ್ದರು. ನನ್ನದು ತೆರೆದ ಪುಸ್ತಕ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.


COMMERCIAL BREAK
SCROLL TO CONTINUE READING

ತಮ್ಮ ವಿರುದ್ಧ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್(CP Yogeshwar) ಮಾಡಿರುವ ಅಸಭ್ಯ, ಕೀಳುಮಟ್ಟದ ಟೀಕೆಗಳಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನನ್ನ ಜೀವನ ತೆರೆದ ಪುಸ್ತಕ. ನನಗೆ ಯಾರ ಸರ್ಟಿಫಿಕೇಟ್ ಬೇಕಿಲ್ಲ ಎಂದು ಪ್ರಹಾರ ನಡೆಸಿದರು.


ಇದನ್ನೂ ಓದಿ : HD Kumaraswamy : 'ತಾಜ್ ವೆಸ್ಟೆಂಡ್‌ನಲ್ಲಿ ರಾಸಲೀಲೆ ಮಾಡಲು ನಾನು ಹೋಗುತ್ತಿರಲಿಲ್ಲ'


ವಿಧಾನಸೌಧದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿಗಳು, " ನನ್ನ ಬಗ್ಗೆ ಟೀಕೆ ಮಾಡಿರುವ ವ್ಯಕ್ತಿಯ ಹೇಳಿಕೆ, ಆತ ಬಳಿಸಿರುವ ಪದಪುಂಜಗಳು ಆತನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆತನ ಮಾತುಗಳೇ ಆತನ ಸಂಸ್ಕಾರ ಎಂಥದ್ದು ಎಂದು ತೋರಿಸುತ್ತದೆ" ಎಂದರು.


ಈ ವ್ಯಕ್ತಿಯನ್ನು ನೋಡಿ ನಾನು ಕಲಿಯಬೇಕಿತ್ತಾ? ನನ್ನ ಬಗ್ಗೆ ಮಾತನಾಡುವ ಈತ ಗುಡಿಸಲಲ್ಲಿ ಇದ್ದರಾ? ಇಲ್ಲೇ ಯುಬಿ ಸಿಟಿ(UB City) ಪಕ್ಕದಲ್ಲೇ ಇದ್ದರಲ್ಲ. ಅಲ್ಲೇನು ಅವರು ಮಜಾ ಮಾಡುತ್ತಿದ್ದರಾ? ನನ್ನ ಜೀವನದಲ್ಲಿ ಕದ್ದು ಮುಚ್ಚಿ ಯಾವುದೂ ಇಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.


ಚನ್ನಪಟ್ಟಣದಲ್ಲಿ ಆ ವ್ಯಕ್ತಿಯ ಕಥೆ ಮುಗಿದ ಅಧ್ಯಾಯ. ಚನ್ನಪಟ್ಟಣದಲ್ಲಿ ಕೆಲಸವೇ ಅಗಿಲ್ಲ ಅಂತ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ನಿಜಕ್ಕೂ ಅಲ್ಲಿಗೆ ಬಂದು ನೋಡಲಿ. ಬಸ್ ನಿಲ್ದಾಣದ ಕರ್ಮಕಾಂಡ ಏನೂ ಎಂಬುದು ಎಲ್ಲರಿಗೂ ಗೊತ್ತಿದೆ. ಖಾಸಗಿ ಬಸ್ ನಿಲ್ದಾಣಕ್ಕೆ 30 ಕೋಟಿ ರೂ. ಯೋಜನೆ ಮಾಡಿ ಎಸ್ಟಿಮೇಟ್ ಮಾಡಿದ್ದಾರೆ. ಅವನ್ಯಾರೋ ಕಂಟ್ರಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದಾರೆ. ಅಲ್ಲಿ ಹೋಗಿ ನೋಡಿ ತಗಡು ಹೊಡೆಸಿ ಇಟ್ಟಿದ್ದಾರೆ. ಅಲ್ಲಿ ದುಡ್ಡು ಹೊಡೆಯೋಕೆ ನಾನು ಹಣ ಕೊಡಿಸಬೇಕಾ? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 


ಚನ್ನಪಟ್ಟಣ(Channapatna)ದ ಅಂಬೇಡ್ಕರ್ ಭವನದ ಕಥೆ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲಿ ಗುಂಡಿ ಬಿದ್ದು ನೀರು ನಿಂತಿದೆ. ಅದನ್ನು ನಾನು ಸ್ವಚ್ಛ್ ಮಾಡಿಸುತ್ತಿದ್ದೇನೆ. ನಾನೇನು ಕಣ್ಣೀರು ಹಾಕಿಕೊಂಡು ಹೋಗಿಲ್ಲ ಎಂದ ಅವರು, ನಾನು ಚನ್ನಪಟ್ಟಣಕ್ಕೆ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದೇನೆ. ಮೂವತ್ತು ವರ್ಷಗಳಲ್ಲಿ ಆಗದ ಪ್ರಗತಿ ನನ್ನ ಕಾಲದಲ್ಲಿ ಆಗಿದೆ. ಇಡೀ ರಾಜ್ಯಕ್ಕೆ ನಾನು ಸಿಎಂ ಆಗಿದ್ದೆ. ರಾಜ್ಯದ ಜನಕ್ಕೆ ನನ್ನ ಕೈಲಾದ ಸೇವೆ ಮಾಡಿದ್ದೇನೆ. ಈತ ನನಗೆ ಸರ್ಟಿಫಿಕೇಟ್ ಕೊಡೋದು ಬೇಕಿಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.


ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಮುಳುಗಿಸುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರ: ಕಾಂಗ್ರೆಸ್ ಆಕ್ರೋಶ


ಮೆಗಾಸಿಟಿ ಅಂತ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನು ಬೀದಿಪಾಲು ಮಾಡಿದ ಈ ವ್ಯಕ್ತಿ(CP Yogeshwar), ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ್ದು ಗೊತ್ತಿದೆ. ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ್ದು ತಿಳಿದಿದೆ. ಇಂಥ ವ್ಯಕ್ತಿ ನನ್ನ ವಿರುದ್ಧ ಆರೋಪ ಮಾಡುತ್ತಾರೆಯೇ? ಎಂದು ಕುಮಾರಸ್ವಾಮಿ ಪ್ರಹಾರ ನಡೆಸಿದರು.


ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ, ಚನ್ನಪಟ್ಟಣದಲ್ಲೇ ಚರ್ಚೆ ಮಾಡೋಣ. ದಲಿತರ ಜಮೀನು ಹೊಡೆದಿದ್ದೇನಂತೆ. ಬಂದು ತೋರಿಸಲಿ. ಮೆಗಾಸಿಟಿ ಯೋಜನೆ ಮಾಡಿ ಲೂಟಿ ಹೊಡೆದು ಜನರನ್ನು  ಬೀದಿಪಾಲು ಮಾಡಿದ ನೀತಿಗೆಟ್ಟ ವ್ಯಕ್ತಿ, ' ಸೈನಿಕ ' ಅಂತ ಸಿನಿಮಾ ಮಾಡಲು ಬೇರೆ ಹೋಗಿದ್ದ. ಇಂದಿಗೂ ಹಣ ಕೊಟ್ಟವರು ಬೀದಿಪಾಲಾಗಿದ್ದಾರೆ ಎಂದು ಯೋಗೇಶ್ವರ್ ವಿರುದ್ಧ ಆರೋಪ ಮಾಡಿದ್ದಾರೆ.


ಚನ್ನಪಟ್ಟಣದ ಜತೆಗೆ ನಮ್ಮ ಸಂಬಂಧ ಬಹಳ ಹಳೆಯದು. ಈ ವ್ಯಕ್ತಿ ಚಡ್ಡಿ ಹಾಕಿದ್ದನೋ ಇಲ್ಲವೋ ಗೊತ್ತಿಲ್ಲ. ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣದ ಜತೆ ಬಾಂಧವ್ಯ ಇತ್ತು. ಮುಕ್ತ ಚರ್ಚೆಗೆ ಬರಲಿ. ಉತ್ತರ ನೀಡುತ್ತೇನೆ ಎಂದು ಅವರು ಸವಾಲು ಹಾಕಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.