ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಂಡ ವಿಫಲಾಧ್ಯಕ್ಷ: ಬಿಜೆಪಿ ಟೀಕೆ

ಪಕ್ಷದ ಅಧ್ಯಕ್ಷ ಸ್ಥಾನ ಪಡೆಯುವಂತೆ ನಾನು ಸೇರಿದಂತೆ ಹಲವು ನಾಯಕರು ಸೋನಿಯಾ ಗಾಂಧಿಯವರ ಕೈ-ಕಾಲು ಹಿಡಿದುಕೊಂಡು ಭಿಕ್ಷೆ ಬೇಡಿಕೊಂಡಿದ್ದೇವು ಎಂಬ ಡಿಕೆಶಿ ಹೇಳಿಕೆಗೆ ಬಿಜೆಪಿ ಟಾಂಗ್ ನೀಡಿದೆ.

Written by - Zee Kannada News Desk | Last Updated : Mar 14, 2022, 01:52 PM IST
  • ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸುವ ನಮ್ಮ ಸಂಕಲ್ಪಕ್ಕೆ ಡಿಕೆಶಿ ಧ್ವನಿಯಾಗಿದ್ದಾರೆ
  • ಡಿ.ಕೆ.ಶಿವಕುಮಾರ್ ಅವರು ಮತ್ತೊಮ್ಮೆ ಗುಲಾಮಗಿರಿಯ ಪರಾಕಾಷ್ಠೆ ತೋರಿದ್ದಾರೆ
  • ಸೋಲಿನ‌ ಮೇಲೆ ಸೋಲು ಕಾಣುತ್ತಿರುವ ಕಾಂಗ್ರೆಸ್ ಈಗ ನಿರೋದ್ಯೋಗಿಗಳ ಸಂಗಮವಾಗಿದೆ
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಂಡ ವಿಫಲಾಧ್ಯಕ್ಷ: ಬಿಜೆಪಿ ಟೀಕೆ title=
ಡಿಕೆಶಿ ವಿರುದ್ಧ ಕಿಡಿಕಾರಿದ ಬಿಜೆಪಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಕಾಂಗ್ರೆಸ್ ಕಂಡ ವಿಫಲಾಧ್ಯಕ್ಷ ಎಂದು ಬಿಜೆಪಿ ಟೀಕಿಸಿದೆ. #CongressMuktBharat ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಪಕ್ಷದ ಅಧ್ಯಕ್ಷ ಸ್ಥಾನ ಪಡೆಯುವಂತೆ ನಾನು ಸೇರಿದಂತೆ ಹಲವು ನಾಯಕರು ಸೋನಿಯಾ ಗಾಂಧಿ(Sonia Gandhi)ಯವರ ಕೈ-ಕಾಲು ಹಿಡಿದುಕೊಂಡು ಭಿಕ್ಷೆ ಬೇಡಿಕೊಂಡಿದ್ದೇವು ಎಂಬ ಡಿಕೆಶಿ ಹೇಳಿಕೆಗೆ ಬಿಜೆಪಿ ಟಾಂಗ್ ನೀಡಿದೆ.

ಇದನ್ನೂ ಓದಿ: ಈಗಲ್‌ ಟನ್‌ ವಿವಾದ: ಟೀಕಾಕಾರರ ವಿರುದ್ಧ ಹೆಚ್‌ಡಿಕೆ ತೀವ್ರ ವಾಗ್ದಾಳಿ

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳು. ದೇಶವನ್ನು ಕಾಂಗ್ರೆಸ್ ಮುಕ್ತ(Congress Mukt Bharat)ವಾಗಿಸುವ ನಮ್ಮ ಸಂಕಲ್ಪಕ್ಕೆ ನೀವು ಧ್ವನಿಯಾಗಿದ್ದೀರಿ. ಅಂತೂ ಮತ್ತೊಮ್ಮೆ ಗುಲಾಮಗಿರಿಯ ಪರಾಕಾಷ್ಠೆ ತೋರಿದ್ದೀರಿ’ ಅಂತಾ ಕುಟುಕಿದೆ. ಮೇಕೆದಾಟು ಮಾದರಿಯಲ್ಲಿ ಉದ್ಯೋಗಕ್ಕಾಗಿ ತಾಲೂಕುಗಳಲ್ಲಿ ಪಾದಯಾತ್ರೆ ಮಾಡುತ್ತೇವೆಂದು ಹೇಳಿದ್ದ ಡಿಕೆಶಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

‘ಸೋಲಿನ‌ ಮೇಲೆ ಸೋಲು ಕಾಣುತ್ತಿರುವ ಕಾಂಗ್ರೆಸ್(Congress) ಪಕ್ಷ ಈಗ ನಿರೋದ್ಯೋಗಿಗಳ ಸಂಗಮವಾಗಿದೆ. ಅಧ್ಯಕ್ಷರಾಗಿ 2 ವರ್ಷ ಕಳೆದರೂ ಪದಾಧಿಕಾರಿಗಳ ಪಟ್ಟಿ ಭರ್ತಿ ಮಾಡಲು ಸಾಧ್ಯವಾಗದವರು ದೇಶದ ನಿರುದ್ಯೋಗದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಮೊದಲು ನಿಮ್ಮ ಕಾರ್ಯಕರ್ತರಿಗೆ ಪಕ್ಷ ಜವಾಬ್ದಾರಿ ಎಂಬ ಉದ್ಯೋಗ ಕಲ್ಪಿಸಿ’ ಅಂತಾ ಬಿಜೆಪಿ ಟೀಕಾಪ್ರಹಾರ ನಡೆಸಿದೆ.

ಇದನ್ನೂ ಓದಿ: '2023 ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ'

‘ಡಿಕೆಶಿ ಅವರು ಕಾಂಗ್ರೆಸ್ ಕಂಡ #ವಿಫಲಾಧ್ಯಕ್ಷ. ಅಧಿಕಾರ ಸ್ವೀಕರಿಸಿ 2 ವರ್ಷ ಕಳೆದರೂ ಪದಾಧಿಕಾರಿಗಳ ನೇಮಕ ಮಾಡಲಾಗದೆ ಅಸಹಾಯಕರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್‌(Karnataka Congress) ಈಗ ಕನಕಪುರ ಕಾಂಗ್ರೆಸ್‌ ಆಗಿ ಪರಿವರ್ತಿತಗೊಂಡಿದೆ’ ಅಂತಾ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News