ಶಿವಮೊಗ್ಗ : ವಿರೋಧ ಪಕ್ಷಗಳೇ ಇರಬಾರದು. ಬಿಜೆಪಿ ಹೊರತುಪಡಿಸಿ ಯಾವುದೇ ಸರ್ಕಾರ ಈ ದೇಶದಲ್ಲಿ ಇರಬಾರದು ಎಂಬುದೇ ಬಿಜೆಪಿಯ ಸಿದ್ದಾಂತವಾಗಿದೆ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕುಮಾರಸ್ವಾಮಿ, ಮಹಾರಾಷ್ಟ್ರ ಸರ್ಕಾರ ಪತನ‌ ವಿಚಾರವಾಗಿ ಪ್ರತಿಕ್ರೀಯಿಸಿ ಮಾತನಾಡಿದ್ರು. ಮಹಾರಾಷ್ಟ್ರ ಸರ್ಕಾರದ ಆಪರೇಷನ್ ವಿಚಾರದ ಹಿಂದೆ ಅಮಿತ್ ಶಾ ಇದ್ದಾರೆ. ಅದರಲ್ಲಿ ಯಾವುದಾದರೂ ಸಂಶಯ ಇದೆಯಾ!? ರ್ನಾಟಕದಲ್ಲಿ ಅವತ್ತಿನ ಪರಿಸ್ಥಿತಿ ದುರುಪಯೋಗ ಪಡಿಸಿಕೊಂಡರು. ಕಾಂಗ್ರೆಸ್ ನಾಯಕರ ಸಹಕಾರದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆಯಿತು. ಕರ್ನಾಟಕದಿಂದ ಮುಂಬೈ ಹೋದರು, ಮುಂಬೈನವರು ಮುಂಬೈನಿಂದ ಗುಹವಾಟಿಗೆ ಹೋಗಿದ್ದಾರೆ. ರಾಜ್ಯದಲ್ಲೂ ಕೂಡ ಸರ್ಕಾರ ತೆಗೆಯಬೇಕು ಅಂತಾ ಒಂದೂವರೆ ವರ್ಷದಿಂದ ಪ್ರಯತ್ನ ನಡೆಸಿದ್ದರು, ಅದರಲ್ಲಿ ಯಶಸ್ವಿಯಾದರು. ಶಿವಸೇನೆಯವರು ಗಲಭೆಗೆ ಪ್ರಾರಂಭ ಮಾಡಿದ್ದಾರೆ. ದೇಶದಲ್ಲಿ ಉಪದೇಶ ಮಾಡುವ ಬಿಜೆಪಿ ನಾಯಕರಾಗಲಿ, ಅಂಗಪಕ್ಷದ ನಾಯಕರಾಗಲಿ ಚುನಾಯಿತ ಸರ್ಕಾರ ಅಸ್ಥಿರಗೊಳಿಸಿ ಅವರೇ ಸರ್ಕಾರ ಹಿಡಿಯಬೇಕು ಎಂಬ ತೀರ್ಮಾನ ಇದೆ. ಇದು ಸದ್ಯ ರಾಜ್ಯದಲ್ಲಿ ಆರಂಭವಾಗಿದೆ. ಇಡಿ ದೇಶ ವ್ಯಾಪ್ತಿ ಆವರಿಸುತ್ತಿದೆ. 


ಇದನ್ನೂ ಓದಿ : M Laxman : 'ಜಾರಕಿಹೊಳಿ 819 ಕೋಟಿ ಲೂಟಿ ಮಾಡಿದ್ದಾರೆ, ಇದ್ರಲ್ಲಿ ಶಾ, ಪಡ್ನವೀಸ್, ಬೊಮ್ಮಾಯಿ ಭಾಗಿ'


ರಾಜಸ್ಥಾನ ಜಾರ್ಖಂಡ್ ನಲ್ಲಿ ಸಹ ಇದು ನಡೆಯಲಿದೆ. ವಿರೋಧ ಪಕ್ಷಗಳೇ ಇರಬಾರದು ಎಂಬುದು ಅವರ ಸಿದ್ದಾಂತ. ಬಿಜೆಪಿ ಹೊರತುಪಡಿಸಿ ಯಾವುದೇ ಸರ್ಕಾರ ಈ ದೇಶದಲ್ಲಿ ಇರಬಾರದು. ಕಾಂಗ್ರೆಸ್ ಮುಕ್ತವಾಯಿತು. ಈಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟ್ಟಿದ್ದಾರೆ. ದೇಶದ ಜನ ಅಂತಿಮವಾಗಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೆಚ್ ಡಿ ಕೆ ಹೇಳಿದ್ದಾರೆ.


ಮಹಾರಾಷ್ಟ್ರ ಸರ್ಕಾರ ಪತನದಲ್ಲಿ ನಮ್ಮ ರಾಜ್ಯದ ಬಿಜೆಪಿ ಮುಖಂಡರ ಪಾತ್ರ ಇಲ್ಲ. ಇದರಲ್ಲಿ ನೇರವಾಗಿ ಅಮಿತ್ ಷಾ ಇದ್ದಾರಲ್ವಾ? ಚುನಾಯಿತ ಸರ್ಕಾರಗಳು ಸ್ಪಷ್ಟ ಬಹುಮತ ಇದ್ದರೂ ಉಳಿಯುತ್ತದಾ ಇಲ್ಲವಾ ಎಂಬ ಅನುಮಾನ ಇದೆ. ಬಿಜೆಪಿಯಲ್ಲಿ ಇದ್ದರೆ ಉಳಿಗಾಲ ಇದೆ ಇಲ್ಲದಿದ್ದರೆ ಇಲ್ಲ ಎಂಬ ಬಿಲ್ ಪಾಸ್ ಮಾಡಿಬಿಡಿ. ನನಗೆ ನಂಬಿಕೆ ಇದೆ. ನಮ್ಮ ಮನೆ ದೇವರ ಆಶೀರ್ವಾದ ಇದೆ. ನನಗೆ ಮುಖ್ಯಮಂತ್ರಿ ಸ್ಥಾನ ದೊರಕುತ್ತದೆ ಎಂಬ ವಿಶ್ವಾಸ ಇದೆ. ಬಡವರಿಗೋಸ್ಕರ ನಾನು ಮತ್ತೊಂದು ಬಾರಿ ಅಧಿಕಾರ ಹಿಡಿಯುವ ವಿಶ್ವಾಸ ಇದೆ. ಮುಂಬರುವ ಚುನಾವಣೆಯಲ್ಲಿ ಆಪರೇಷನ್ ಕಮಲವಾಗಲು ಬಿಡುವುದಿಲ್ಲ. ಜೆಡಿಎಸ್ ನಿಂದ ಗೆಲ್ಲುವವರಿಗೆ ಆಪರೇಷನ್ ಕಮಲವಾಗಲು ಬಿಡುವುದಿಲ್ಲ. 


ನಾವೇ ಪೂರ್ಣ ಬಹುಮತ ಸಾಧಿಸಲು ಯೋಜನೆ ತಂತ್ರ ರೂಪಿಸುತ್ತಿದ್ದೆವೆ. ಶಿವಸೇನೆಯಲ್ಲಿ 50 ಜನ ಬಿಟ್ಟು ಹೋಗ್ತಿದ್ದಾರೆ. ಏನು ಆ ಪಕ್ಷ ಮುಳುಗಿ ಹೋಗ್ತಿದೆಯಾ? ಎಂದು ಹೆಚ್ ಡಿ ಕೆ ಪ್ರಶ್ನಿಸಿದರು. 


ಇನ್ನು  ವೈಎಸ್ ವಿ ದತ್ತ ಬಗ್ಗೆ ಪ್ರತಿಕ್ರೀಯಿಸಿದ ಅವರು, ದತ್ತಾದವರಿಗೆ  ಪಕ್ಷ ಎಲ್ಲಾ ಕೊಟ್ಟಿದೆ. ಎಲ್ಲಾ ಪಡೆದುಕೊಂಡು ಹೋಗ್ತಿನಿ ಅಂದ್ರೆ ಅವರೇ ಯೋಚನೆ ಮಾಡಬೇಕು. ನಮ್ಮ ಪಕ್ಷದಲ್ಲಿ ಅವರಿಗೆ ಏನೋ ಅಸಮಾಧಾನವಾಗಿದೆ. ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಆಗಸ್ಟ್ ತಿಂಗಳಿನಿಂದ ಪ್ರತಿದಿನ ಒಂದೊಂದು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಪಂಚರತ್ನ ರಥಯಾತ್ರೆ ಮೂಲಕ ರಾಜ್ಯದ ಜನರ ಗಮನ ಸೆಳೆಯುತ್ತೆವೆ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಲು ನನಗೆ ವೈಯಕ್ತಿಕ ಆಸೆ ಇಲ್ಲ. ಜನ ನನ್ನನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಅಂದ್ರೆ ತೀರ್ಮಾನ ಮಾಡ್ತಾರೆ. ಮೋದಿ ಅವರು ಚಲಿಸಿದ ರಸ್ತೆಯ ಟಾರೇ ಕಿತ್ತು ಹೋಗಿದೆ. ಇನ್ನು ಬೇರೆ ಜನರ ಪರಿಸ್ಥಿತಿ ಏನು? ನರೇಂದ್ರ ಮೋದಿ‌ ಭೇಟಿಗೆ 50 ಕೋಟಿ ರೂ. ಖರ್ಚಾಗಿದೆ. ಅದನ್ನು ಯಾವುದಾದರೂ ಗ್ರಾಮೀಣ ಅಭಿವೃದ್ಧಿಗೆ ಬಳಸಿಕೊಳ್ಳಬಹುದಿತ್ತು. ಆರ್.ಎಸ್.ಎಸ್. ಪ್ರಮುಖರಿಗೆ ಪರ್ಸಂಟೆಜ್ ತಲುಪಿಸಬೇಕು. ಆರ್.ಎಸ್.ಎಸ್. ನಿಂದಲೇ ಹಣ ಸಂಗ್ರಹವಾಗುತ್ತಿದೆ. ರಾಜ್ಯದ ಜನರ ದುಡ್ಡನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹೆಚ್ ಡಿ.ಕೆ ಹೇಳಿದ್ದಾರೆ.


ಇದನ್ನೂ ಓದಿ : ಪರಿಷ್ಕೃತ ಪಠ್ಯಕ್ಕೆ ಸುಳ್ಳಿನ ಸಮರ್ಥನೆ ನಾಚಿಕೆಗೇಡು: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ


ಪಠ್ಯ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರೀಯಿಸಿ ಮಾತನಾಡಿದ ಕುಮಾರಸ್ವಾಮಿಯವರು, ಹಿಂದಿನ ಸರ್ಕಾರದಲ್ಲೇ ಬದಲಾವಣೆ ಮಾಡಿದ್ದಾರೆ ಅಂತಾ. ಹೇಳ್ತಿದ್ದಾರೆ. ಎರಡು ಸರ್ಕಾರದಲ್ಲಿ ಏನೇನು ಬದಲಾವಣೆ ಮಾಡಿದ್ದಾರೆ ಎಂಬುದನ್ನು ಜನತೆ ಮುಂದಿಡಲಿ ಎಂದು ತಿಳಿಸಿದ್ದಾರೆ.


ಇನ್ನು ರಾಷ್ಟ್ರಪತಿ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ ಡಿ ಕೆ, ಎನ್.ಡಿ.ಎ. ಅಭ್ಯರ್ಥಿ ಗೆಲ್ಲಲ್ಲು ಯಾವುದೇ ಸಮಸ್ಯೆ ಇಲ್ಲ.ರಾಷ್ಟ್ರಪತಿ ಅಭ್ಯರ್ಥಿಯೇ ಪೋನ್ ಮಾಡಿ ಬೆಂಬಲಿಸುವಂತೆ ಮನವಿ‌ ಮಾಡಿದ್ದಾರೆ. ನಮ್ಮ‌ ಶಾಸಕರೆಲ್ಲಾ ಕುಳಿತು ಚರ್ಚೆ ಮಾಡಿ ತೀರ್ಮಾನ ‌ಕೈಗೊಳ್ಳುತ್ತೇವೆ. ದೇವೆಗೌಡರಿಗೂ ಅಭ್ಯರ್ಥಿಯಾಗಲು ಕೇಳಿದ್ದರು ಎಂದು ಕುಮಾರಸ್ವಾಮಿ ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.