ಬೀದರ್ : ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಬಹುಮತ ಸಿಗಲಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.  


COMMERCIAL BREAK
SCROLL TO CONTINUE READING

ನಗರದ ಖಾಸಗಿ ಹೊಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ಪಂಚ ರತ್ನ ಕಾರ್ಯಕ್ರಮ ಹಾಗೂ ಜಲಧಾರೆ ಮೂಲಕ ರಾಜ್ಯದಲ್ಲಿ ಜನರ‌ನಾಡಿ ಮಿಡಿತ ಅರ್ಥ ಮಾಡಿಕೊಂಡಿದ್ದೆನೆ. ರಾಜ್ಯದ ಪ್ರಮುಖ ಮುಖ್ಯ ನದಿಗಳು, ಉಪ ನದಿಗಳ ಜೋಡಣೆಗಾಗಿ ಕನಿಷ್ಠ 3 ರಿಂದ 4 ಕೋಟಿ ಲಕ್ಷ ರುಪಾಯಿ ಅಗತ್ಯವಿದೆ. ಅದಕ್ಕೆ ಸಮರ್ಥ ಸರ್ಕಾರ ಬೇಕಾಗಿದೆ. ಹಿಂದೆ ಬಿಜೆಪಿ ಸರ್ಕಾರ ಇತ್ತಿಚೇಗೆ ಕಾಂಗ್ರೆಸ್ ಜೋತೆಗೆ ಮೈತ್ರಿ ಸರ್ಕಾರದಲ್ಲಿ ಈ ಕೆಲಸ ಮಾಡಲಿಕ್ಕಾಗಿಲ್ಲ ಎಂದು ಹೇಳಿದರು. 


ಇದನ್ನೂ ಓದಿ : ಅಸಮರ್ಥ ‘ಡಬಲ್ ಎಂಜಿನ್ ಸರ್ಕಾರ’ ಡಬಲ್ ಗೇಮ್ ಆಡುತ್ತಿದೆ: ಎಚ್‌ಡಿಕೆ ಆಕ್ರೋಶ


ಇನ್ನು ಮುಂದುವರೆದು ಮಾತನಾಡಿದ ಅವರು, ಪ್ರವೀಣ ಹತ್ಯೆ ಪ್ರಕರಣ ಎನ್ ಐಎ ಗೆ ಕೊಟ್ಟಿರುವುದಕ್ಕಿಂತ ರಾಜ್ಯದ ಪೊಲೀಸರ ಸಮರ್ಥವಾಗಿ ತನಿಖೆ ಮಾಡಬಹುದಿತ್ತು. ಈ ಹಿಂದಿನ ಪ್ರಕರಣಗಳು ಎನ್ ಐಎ ಗೆ ಕೊಟ್ಟಿರುವುದು ಏನಾಯ್ತು? ಎಂದು ಪ್ರಶ್ನಿಸಿದರು. ಪೊಲೀಸರಿಗೆ ಎನಕೌಂಟರ್ ಮಾಡು ಅಂದ್ರೆ ಯಾರು ಮಾಡೋಲ್ಲ. ಆಡಳಿತದಲ್ಲಿ ಬೀಗಿ ತರೋದಕ್ಕೆ ಏನು ಮಾಡಬೇಕು ಅದನ್ನ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.


ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ವಾಪಸ್ಸ ಪಡೆದಿದ್ದರೆ. ಹೊಸ ಯುವಕರು ಪಕ್ಷಕ್ಕೆ ಬರಲಿಕ್ಕೆ ಲೈನ್ ಹಚ್ಚಿದ್ದಾರೆ ಎಂದು ಈಶ್ವರಪ್ಪ ಹೇಳ್ತಾರಲ್ಲ. ರಾಜ್ಯದ ಯುವಕರು ಈಗಲಾದ್ರು ಜಾಗೃತರಾಗಿ ಕಾರ್ಯಕರ್ತರನ್ನು ಗುಲಾಮರಾಗಿಸ್ತಿದೆಯಾ ಬಿಜೆಪಿ ಅನ್ನೊದನ್ನ ಎಂದರು. 


ರಾಜ್ಯದ ಪ್ರಸಕ್ತ ಪರಿಸ್ಥಿತಿ ಕುರಿತು ತಮಿಳನಾಡಿನಲ್ಲಿ ಆದಿವಾಸಿಗಳ ಮೇಲೆ ನಡೆದ ಹಲ್ಲೆಗಳ ಆಧಾರಿತ ಜೈ ಭೀಮ್ ಚಿತ್ರದಂತೆ ಕಾಣ್ತಿದೆ. ಎಲ್ಲರೂ ಒಂದ ಸಾರಿ ಚಿತ್ರ ನೋಡಿ ಎಂದು ಹೇಳಿದರು.


ಇದನ್ನೂ ಓದಿ : ಮಂಗಳೂರಿನಲ್ಲಿ ಇಂದು ಶಾಂತಿ ಸಭೆ: ನಗರದಲ್ಲಿ ಸೆಕ್ಷನ್ 144 ವಿಸ್ತರಣೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.