ಕೋಲಾರ: ಅಂದು ದೇವೇಗೌಡರಿಗೆ ಕಾಲಿಗೆ ಬಿದ್ದು, ಪ್ರಧಾನಿ ಹುದ್ದೆ ನೀಡಿದರು. ಮೊನ್ನೆ ನಾನು ಬೇಡ ಅಂದ್ರೂ ನನಗೆ ಸಿಎಂ ಹುದ್ದೆ ನೀಡಿದರು. ನಾವೇನು ಸಿಎಂ ಹುದ್ದೆ ನೀಡಿ ಎಂದು ಅರ್ಜಿ ಹಾಕಿಕೊಂಡು ಹೋಗಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಟಾಂಗ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕುಮಾರಸ್ವಾಮಿ(H D Kumaraswamy), ದೆವೇಗೌಡರು ಪ್ರಧಾನಿ ಹುದ್ದೆಗಾಗಿ ಅರ್ಜಿ ಹಾಕಿ ಹೋಗಿದ್ರಾ? ಬೇಡ ಅಂದರೂ ಇವರೇ ಪ್ರಧಾನಿ ಹುದ್ದೆ ನೀಡಿದರು. ಬಳಿಕ ಪ್ರಧಾನಿ ಹುದ್ದೆಯಿಂದ ದೇವೇಗೌಡರನ್ನು ಕೆಳಗಿಳಿಸಿದ್ದು ಯಾರು? ನಾನು ಬೇಡ ಬೇಡ ಎಂದರೂ ನನ್ನನ್ನು ಸಿಎಂ ಮಾಡಿದರು. ನಾನೇನು ಸಿಎಂ ಹುದ್ದೆಗಾಗಿ ಅರ್ಜಿ ಹಾಕಿ ಇವರ ಮನೆ ಬಾಗಿಲಿಗೆ ಹೋಗಿರಲಿಲ್ಲ ಎಂದು ಕಿಡಿಕಾರಿದರು.


ಪ್ರತಿಭಟನೆಯ ನಡುವೆ ರಾಜ್ಯ ಸರ್ಕಾರದಿಂದ ರೈತರಿಗೆ 'ಶುಭ ಸುದ್ದಿ'


ನಾನಾಗಲಿ, ದೇವೇಗೌಡರಾಗಲಿ ಅಧಿಕಾರದಲ್ಲಿರುವವರನ್ನು ಅಥವಾ ಮುಖ್ಯಮಂತ್ರಿಗಳನ್ನು ಭೇಟಿಯಾಗಬೇಕು ಎಂದರೆ ನೇರವಾಗಿ ಹೋಗಿ ಭೇಟಿ ಮಾಡುತ್ತೇವೆ. ಇವರಂತೆ ಕದ್ದು ಮುಚ್ಚಿ ಮಧ್ಯರಾತ್ರಿಯಲ್ಲಿ ಹೋಗಿ ಭೇಟಿಯಾಗಲ್ಲ. ನಾನು ಬಿಜೆಪಿಯ ಜೊತೆ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಕಮಿಟ್ ಆಗಿ ರಾಜಕೀಯ ಮಾಡುವ ಅನಿವಾರ್ಯತೆ ನನಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಗುಡುಗಿದ್ದಾರೆ.


ಗ್ರಾಮ ಪಂಚಾಯತಿ ಚುನಾವಣೆ ಬಳಿಕ ‘ಹೊಸ ರೇಶನ್‌ ಕಾರ್ಡ್’