ಬೆಂಗಳೂರು : ಡಾ. ಕೆ. ಸುಧಾಕರ್ MBBS ಏನು ಓದಿದ್ದಾನೋ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಸುಧಾಕರ್ ರಾಜಕೀಯ ಪುನರ್ ಜನ್ಮ ಕೊಟ್ಟಿದ್ದು ಕಾಂಗ್ರೆಸ್, ಅಧಿಕಾರ ಮತ್ತು  ದುಡ್ಡಿಗಾಗಿ ಹೋಗಿ ಈಗ ಈ ರೀತಿ ಎಲ್ಲಾ ಮಾತಾಡಿದ್ರೆ ಜನ ಕ್ಷಮಿಸೋದಿಲ್ಲ ಎಂದರು.


COMMERCIAL BREAK
SCROLL TO CONTINUE READING

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಗಳಲ್ಲಿ ಎಸಿಬಿ ಇನ್ನೂ ಅಸ್ತಿತ್ವದಲ್ಲಿದೆ. ಬಿಜೆಪಿ ಎಸಿಬಿ ರದ್ದು ಮಾಡಿಲ್ಲ, ಕೋರ್ಟ್ ರದ್ದು ಮಾಡಿದ್ದು. ಬಿಜೆಪಿ ಅವರು ಮೂರೂವರೆ ವರ್ಷ ಯಾಕೆ ಎಸಿಬಿ ರದ್ದು ಮಾಡದೇ ಸುಮ್ಮನೆ ಇದ್ದರು? ನಾವು ಲೋಕಾಯುಕ್ತ ರದ್ದು ಮಾಡಿರಲಿಲ್ಲ. ಎಸಿಬಿ ರಚನೆ ಮಾಡಿದ್ವಿ ಅಷ್ಟೆ, ಎಂದು ಸಮರ್ಥನೆ ನೀಡಿದರು.


ಇದನ್ನೂ ಓದಿ- ಧಾರವಾಡಕ್ಕೆ ಮತ್ತೊಂದು ವಿವಿ


ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಿದ್ದು ಕಿಡಿ :
ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬ ಹೇಳಿಕೆಗೆ ಕೆಂಡ ಕಾರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 40% ಕಮೀಷನ್ ಆರೋಪ ನಮ್ಮ ಸರ್ಕಾರದ ಮೇಲೆ ಮಾಡಿದ್ರಾ ಗುತ್ತಿಗೆದಾರರು? ನಮ್ಮ ಸರ್ಕಾರದ ಮೇಲೆ ಪತ್ರ ಬರೆದಿದ್ದರಾ..?.ಯಾವ ಆಧಾರದಲ್ಲಿ ಇವ್ರು ಹೀಗೆ ಹೇಳ್ತಿದ್ದಾರೆ ಗೊತ್ತಿಲ್ಲ, ಎಂದರು.


ಸುಧಾಕರ್ ಹಗರಣ ಅಂತ ಹೇಳಿದ್ದಾರೆ, ಅದು ಹಗರಣ ಅಲ್ಲ.. ಎಜಿ ರಿಪೋರ್ಟ್ ನಲ್ಲಿ ವ್ಯತ್ಯಾಸ ಇದೆ. ಯಾವ್ ಯಾವ್ ಇಲಾಖೆಯಲ್ಲಿ ವ್ಯತ್ಯಾಸ ಇದೆ ಅಂತ‌ ನನಗೆ ಗೊತ್ತಿಲ್ಲ, ಎಂದರು.


ಇದನ್ನೂ ಓದಿ- ಸಂಸದೆ ಸುಮಲತಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಜಗಳ..!


ಸುಧಾಕರ್ ನಮ್ಮ ಜೊತೆ ಇದ್ದವನು, ಆಗ ಯಾಕೆ ಏನು ಹೇಳಲಿಲ್ಲಈಗ ಹೇಳಿದ್ರೆ ಹೇಗೆ... ಅದಕ್ಕೆ ಕಿಮ್ಮತ್ತು ಇದೆಯಾ? ಆಯ್ತು ನಾವು ಭ್ರಷ್ಟಾಚಾರ ಮಾಡಿದ್ರೆ ವಿಪಕ್ಷದಲ್ಲಿ ಬಿಜೆಪಿ ಇತ್ತು ಯಾಕೆ ರೈಸ್ ಮಾಡಿಲ್ಲ. ನಾವು 40%, ಕೋವಿಡ್ ಹಗರಣ ಅಂತ ಹೇಳಿದಾಗ ಅದನ್ನ ಮುಚ್ಚಿಕೊಳ್ಳಲು ಹೀಗೆ ಮಾಡ್ತಿದ್ದಾರೆ. ಬೊಮ್ಮಾಯಿ ವಿಪಕ್ಷದಲ್ಲಿ ಇದ್ದಾಗ ಯಾಕೆ ಮಾತಾಡಲಿಲ್ಲ? ಬಿಜೆಪಿ ನಮ್ಮ ಯಾತ್ರೆಯಿಂದ ಪ್ಯಾನಿಕ್ ಆಗ್ತಿದ್ದಾರೆ. ಸೋಲುವ ಭಯದಲ್ಲಿ ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದಾರೆ. ನೀವು ವಿಪಕ್ಷ ಇದ್ದಾಗ ಬಾಯಿಗೆ ಕಡುಬು ಇಟ್ಟು ಕೊಂಡಿದ್ರಾ? ಆಯ್ತು ಅಕ್ರಮ ಆಗಿದೆ ಒಂದು ಕೆಲಸ ಮಾಡಿ, ನಮ್ಮದು ನಿಮ್ಮದು ಸೇರಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ. ಯಾರೇ ತಪ್ಪು ‌ಮಾಡಿದ್ರು ಶಿಕ್ಷೆ ಆಗಲಿ ಎಂದು ಅಗ್ರಹ ಮಾಡುವ ಜೊತೆಗೆ ಸವಾಲು ಹಾಕಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.