ಪ್ರಾಥಮಿಕ ಸಭೆಯಾದ ಕಾರಣ ಬಿಎಸ್ವೈಗೆ ಆಹ್ವಾನ ನೀಡಿರಲಿಲ್ಲ: ಸಿಎಂ ಬೊಮ್ಮಾಯಿ..!

ಇಂದು ನಡೆದಿದ್ದು ಪ್ರಾಥಮಿಕ ಸಭೆ, ಅದು ವರ್ಕೌಟ್ ಆದ ಮೇಲೆ ಉನ್ನತ ನಾಯಕರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದಿನ ಸಭೆಗೆ ಆಹ್ವಾನ ಕೊಟ್ಟಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Written by - Zee Kannada News Desk | Last Updated : Jan 20, 2023, 06:53 PM IST
  • ನಾಳೆಯಿಂದ ಬೂತ್ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭ ಮಾಡುತ್ತಿದ್ದೇವೆ
  • ನಾನು ತುಮಕೂರಿನಲ್ಲಿ ಪ್ರಾರಂಭ ಮಾಡುತ್ತಿದ್ದೇವೆ
  • ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಒಂದು ಕಡೆ ಮಾಡುತ್ತಿದ್ದಾರೆ
ಪ್ರಾಥಮಿಕ ಸಭೆಯಾದ ಕಾರಣ ಬಿಎಸ್ವೈಗೆ ಆಹ್ವಾನ ನೀಡಿರಲಿಲ್ಲ: ಸಿಎಂ ಬೊಮ್ಮಾಯಿ..! title=
file photo

ಬೆಂಗಳೂರು: ಇಂದು ನಡೆದಿದ್ದು ಪ್ರಾಥಮಿಕ ಸಭೆ, ಅದು ವರ್ಕೌಟ್ ಆದ ಮೇಲೆ ಉನ್ನತ ನಾಯಕರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದಿನ ಸಭೆಗೆ ಆಹ್ವಾನ ಕೊಟ್ಟಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರಾಮಪಟ್ಟಣ ಸರ್ಕಲ್‌ನಲ್ಲಿ ನವಜಾತ ಶಿಶು ಪತ್ತೆ

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇವತ್ತು ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆಯಾಗಿದೆ, ಮುಂದಿನ ಎರಡು ತಿಂಗಳ ಪಕ್ಷ ಸಂಘಟನೆ, ಚುನಾವಣೆ ಸಿದ್ದತೆಗೆ ಏನೆಲ್ಲ ಮಾಡಬೇಕು ಎಂದು ಚರ್ಚೆ ನಡೆದಿದೆ ನಾಲ್ಕು ದಿಕ್ಕಿನಿಂದ ಯಾತ್ರೆ ಶುರು ಮಾಡುವ ಬಗ್ಗೆ ಚರ್ಚೆ ಆಗಿದೆ, ಜನಸಂಕಲ್ಪ ಯಾತ್ರೆಯನ್ನು ಫೆಬ್ರವರಿ ಅಂತ್ಯದವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲ ಜಿಲ್ಲೆಗಳಿಂದ ಮಾಹಿತಿ ಪಡೆದು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಣಾಳಿಕೆ ಪ್ರಕಟಿಸುವ ಬಗ್ಗೆ ಚರ್ಚೆ ಆಗಿದೆ. ರಾಷ್ಟ್ರೀಯ ನಾಯಕರ ಪ್ರಚಾರದ ಬಗ್ಗೆ ಚರ್ಚೆ ಆಗಿದೆ‌ ಎಂದರು.

ನಾಳೆಯಿಂದ ಬೂತ್ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭ ಮಾಡುತ್ತಿದ್ದೇವೆ, ನಾನು ತುಮಕೂರಿನಲ್ಲಿ ಪ್ರಾರಂಭ ಮಾಡುತ್ತಿದ್ದೇವೆ. ಮತ್ತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿಜಯಪುರದಲ್ಲಿ ಮಾಡುತ್ತಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಒಂದು ಕಡೆ ಮಾಡುತ್ತಿದ್ದಾರೆ ಹೀಗೆ ಜನರ ಸಂಪರ್ಕವನ್ನು ಸಾಧಿಸಲು, ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ತಾಲೂಕು, ಮಂಡಲಗಳಲ್ಲಿ ಸಮ್ಮೇಳನ ಮಾಡುತ್ತೇವೆ. ಎಲ್ಲಾ ಮೋರ್ಚಾಗಳ ಸಮಾವೇಶ ನಡೆಸುತ್ತೇವೆ ಎಂದರು.

ಇದನ್ನೂ ಓದಿ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗದಿಂದ ದಂಡ

ಬಿಜೆಪಿ ಮೊದಲ ಪಟ್ಟಿ ಯಾವಾಗ ಬಿಡುಗಡೆ ಮಾಡಬೇಕು ಎಂದು ಹೈಕಮಾಂಡ್ ನಿರ್ಧರಿಸಲಿದೆ, ಟಿಕೆಟ್ ಹಂಚಿಕೆ ವಿಚಾರವನ್ನು ಕೇಂದ್ರ ಸಂಸದೀಯ ಸಭೆ ನಿರ್ಧಾರ ಮಾಡುತ್ತದೆ ಎಂದರು.ಯಡಿಯೂರಪ್ಪ ಅವರಿಗೆ ಇಂದಿನ ಆಹ್ವಾನ ನೀಡದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಬಹಳ ಒಳ್ಳೆಯ ಪ್ರಶ್ನೆ, ಇದು ಪ್ರಿಲಿಮನರಿ ಸಭೆ, ಅದು ವರ್ಕೌಟ್ ಆದ ಮೇಲೆ ಬಳಿಕ ಎಲ್ಲಾ ಚರ್ಚೆ ಮಾಡಿ ಹಿರಿಯರನ್ನ ಕರೆದು ಅಂತಿಮ ಮಾಡುತ್ತೇವೆ ಹಾಗಾಗಿ ಇಂದು ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾವೇರಿ ಜಿಲ್ಲೆಯಿಂದ ಹಾಲಿ ಬಿಜೆಪಿ ಶಾಸಕ ಕಾಂಗ್ರೆಸ್ ಗೆ ಬರುತ್ತಾರೆ ಅಂತ ಡಿಕೆ ಶಿವಕುಮಾರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ,ಅವರು ಮೊದಲು ಅವರ ಪಕ್ಷದಲ್ಲಿರೋರನ್ನು ಉಳಿಸಿಕೊಳ್ಳಲಿ ಅವರ ಪಕ್ಷದಲ್ಲಿ ಯಾರು ಉಳೀತಾರೆ, ಯಾರು ಹೋಗ್ತಾರೆ ಅಂತ ಗಮನಿಸಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರು ಬರ್ತಾರೆ ಡಿಕೆಶಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಬಿ.ಕೆ ಹರಿಪ್ರಸಾದ್ ಬಿಜೆಪಿಗರನ್ನ ಜೈಲಿಗೆ ಹಾಕಿಸ್ತೀನಿ ಅಂತ ಹೇಳಿಕೆ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ,ನಡೀರಿ ಅವನ ಲೆವೆಲ್ಲಿಗೆ ನಾನ್ಯಾಕೆ ಮಾತನಾಡಲಿ ಅಂತ ಹೇಳಿಕೊಂಡು ಹೊರಟರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News