ಗದಗ : ಮುಸ್ಲಿಂ ಯುವಕರನ್ನು ಮನೆ ಹೊಕ್ಕು ಹೊಡೆಯಬೇಕು ಎಂದು ಮಾಜಿ ಪರಿಷತ್ ಸದಸ್ಯ ಹಾಗೂ ಎಸ್ಎಸ್ ಕೆ ಸಮಾಜದ ರಾಜ್ಯಾಧ್ಯಕ್ಷ ನಾರಾಯಣಸಾ ಬಾಂಡಗೆ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಸಾ ಬಾಂಡಗೆ, ರಾಜ್ಯದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರ ಟಾರ್ಗೆಟ್ ಮಾಡ್ತಾರೆ ಎಂದು ಮುಸ್ಲಿಮರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 


ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ಹೊತ್ತಿ ಉರಿದ ಬಿಎಂಟಿಸಿ ಬಸ್​: ಬೆಂಕಿ ನಂದಿಸಿದ ಅಗ್ನಿಶಾಮಕ ದಳ


ಒತ್ತಾಯ ಪೂರ್ವಕವಾಗಿ ಮುಸ್ಲಿಂ ಯುವಕರು ಹಿಂದೂ ಯುವತಿಯರ ಕರೆದುಕೊಂಡು ಹೋಗುತ್ತಿದ್ದಾರೆ. ಈಗ ಹುಬ್ಬಳ್ಳಿ, ಗದಗ ನಗರದಲ್ಲಿ ಇತ್ತೀಚೆಗೆ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ಲವ್ ಜಿಹಾದ್ ಮೂಲಕ ಮೋಸ ಮಾಡಿದ್ದಾರೆ. ಹಿಂದೂ ಸಮಾಜದ ಮುಗ್ದ ಯುವತಿಯರನ್ನು ಮೋಸ ಮಾಡಿ ಮುಸ್ಲಿಂ ಯುವಕರು ತೊಂದರೆ ಮಾಡುತ್ತಿದ್ದಾರೆ. ರಾಷ್ಟ್ರ ಮೊದಲು ನಂತರ ನಾವೆಲ್ಲಾ. ಹಿಂದೂ ಸಮಾಜದಲ್ಲಿ ಗೊಂದಲ ಎಬ್ಬಿಸುವುದು ಮುಸ್ಲಿಮರ ಹಿಡನ್ ಅಜೆಂಡಾವಾಗಿದೆ. ಮುಸ್ಲಿಂ ಯುವಕರನ್ನು ಮನೆ ಹೊಕ್ಕು ಹೊಡೆಯಬೇಕು ಎಂದರು.


ಮುಸ್ಲಿಂ ರಾಷ್ಟ್ರ ಮಾಡುವ ಉದ್ದೇಶಿಂದ ಮೌಲ್ವಿಗಳು ಮಸೀದಿಗಳಲ್ಲಿ ಭೋಧನೆ‌ ಮಾಡ್ತಾರೆ. ಆದ್ರೆ, ನಮ್ಮ ಹಿಂದೂ ಮಠಾಧೀಶ ಸ್ವಾಮಿಗಳು ಯಾಕೆ ಮಾತನಾಡುತ್ತಿಲ್ಲ ಅಂತ ಮಠಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 


ದುರ್ದೈವದ ಸಂಗತಿ ಅಂದ್ರೆ ಕೆಲ ಮಠಾಧೀಶರು ಮಠದಲ್ಲಿ ನಮಾಜು ಮಾಡಲು ಅವಕಾಶ ಕೊಡುತ್ತಿದ್ದಾರೆ. ಹಾಗಿದ್ದರೆ, ಮಸೀದಿಯಲ್ಲಿ ಲಿಂಗ ಪೂಜೆ ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಈ ಬಗ್ಗೆ ನಮ್ಮ ಅನೇಕ ಮಠಾಧೀಶರು ಏನೂ ಮಾತಾಡೋದಿಲ್ಲ. ಎಲ್ಲಾ ಪಕ್ಷಗಳು ಬದಕಬೇಕು ಎಂದರೆ ಮೊದಲು ರಾಷ್ಟ್ರ ಬೇಕು, ಸಮಾಜಕ್ಕೆ ಆಗುತ್ತಿರುವುದು ದೊಡ್ಡ ಅನ್ಯಾಯ ಇದಾಗಿದೆ ಎಂದರು. 


ಇದನ್ನೂ ಓದಿ : Gang Rape : ಬೆಚ್ಚಿಬಿದ್ದ ಸಿಲಿಕಾನ್‌ ಸಿಟಿ : 16 ವರ್ಷದ ಬಾಲಕಿ ಮೇಲೆ 8 ಜನರಿಂದ ಗ್ಯಾಂಗ್‌ರೇಪ್


ಮುಸ್ಲಿಂರನ್ನು ಹದ್ದು ಬಸ್ತಿನಲ್ಲಿ ಇಡಬೇಕು‌, ದೇಶದಲ್ಲಿ  ಮುಸ್ಲಿಂ ವರ್ತನೆ ಅತಿಯಾಗಿದೆ. ಇದು ದೇಶಕ್ಕೆ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಎರಡು ಮಕ್ಕಳು ಹಡೆಯುವ ಹಿಂದುಗಳು ಟ್ಯಾಕ್ಸ್ ಕಟ್ಟಬೇಕು. ಮುಸ್ಲಿಂರು ಹತ್ತು ಮಕ್ಕಳು ಹಡೆದು ಸರ್ಕಾರದ ಸೌಲಭ್ಯ ಪಡೆಯುವುದು ಯಾವ ನ್ಯಾಯ. ಸರ್ಕಾರದ ಅನುದಾನದಲ್ಲಿ ಮುಸ್ಲಿಂ ಧರ್ಮ ಪ್ರಚಾರ ಮಾಡುತ್ತಿರಿ. ಈ ವಿಷಯವಾಗಿ ಮುಖ್ಯಮಂತ್ರಿಗೂ ಗಮನಕ್ಕೆ ತರುತ್ತೇನೆ. ಮುಸ್ಲಿಂರು ಎಂದಿಗೂ ನಮ್ಮರೂ ಆಗಲ್ಲ ಅವರನ್ನು ನಂಬಬೇಡಿ. ಕೆಲ ರಾಜಕಾರಣಿಗಳು ಮತ್ತು ಪಕ್ಷಗಳು ಮುಸ್ಲಿಂರಿಗೆ ಹುಟ್ಟಿದವರಂಗೆ ಆಡುತ್ತಾರೆ. ಹಿಂದೂ ಯುವಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಈ ರೀತಿ ಹಿಂದೂ ಯುವತಿಯರು ಅನ್ಯಾಯ ಮಾಡುವವರಿಗೆ ಬದುಕು ಬಿಡಬೇಡಿ. ಲವ್ ಜಿಹಾದ್ ಗೂ ಲವ್ ಮ್ಯಾರೇಜ್ ಗೂ ಸಾಕಷ್ಟು ವ್ಯತ್ಯಾಸವಿದೆ. ಹಿಂದು ಸಮಾಜದ ಕುರಿತು ಜನಜಾಗೃತಿ ಮೂಡಿಸಬೇಕಿದೆ. ಮಠಾಧೀಶರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸೋಗಲಾಡಿ ಹಿಂದುತ್ವ ಬಿಡಬೇಕು. ಎಲ್ಲಾರೂ ನಮ್ಮವರಾಗಲ್ಲ ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.