ಸಿಲಿಕಾನ್ ಸಿಟಿಯಲ್ಲಿ ಹೊತ್ತಿ ಉರಿದ ಬಿಎಂಟಿಸಿ ಬಸ್​: ಬೆಂಕಿ ನಂದಿಸಿದ ಅಗ್ನಿಶಾಮಕ ದಳ

ಇತ್ತೀಚಿಗೆ ಸೌತ್ ಎಂಡ್ ಸರ್ಕಲ್ ಮತ್ತು ಮಕ್ಕಳ ಕೂಟದ ಬಳಿ ಎರಡು ಮಿನಿ ಬಸ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬಿಎಂಟಿಸಿ ಅಧಿಕಾರಿಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ದೂರು ನೀಡಿದ್ದರು. 

Written by - Zee Kannada News Desk | Last Updated : Apr 9, 2022, 03:12 PM IST
  • ಬಿಎಂಟಿಸಿ ಬಸ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ
  • ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿ
  • ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ
ಸಿಲಿಕಾನ್ ಸಿಟಿಯಲ್ಲಿ ಹೊತ್ತಿ ಉರಿದ ಬಿಎಂಟಿಸಿ ಬಸ್​:  ಬೆಂಕಿ ನಂದಿಸಿದ ಅಗ್ನಿಶಾಮಕ ದಳ title=
BMTC

ಬೆಂಗಳೂರು: ಶೇಷಾದ್ರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ (BMTC) ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: ಗುಜರಾತ್‌ನಲ್ಲಿ ಓಮಿಕ್ರಾನ್‌ನ ಹೊಸ ತಳಿ XE ಯ ಮೊದಲ ಪ್ರಕರಣ ಪತ್ತೆ

ಇತ್ತೀಚಿಗೆ ಸೌತ್ ಎಂಡ್ ಸರ್ಕಲ್ ಮತ್ತು ಮಕ್ಕಳ ಕೂಟದ ಬಳಿ ಎರಡು ಮಿನಿ ಬಸ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬಿಎಂಟಿಸಿ ಅಧಿಕಾರಿಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ದೂರು ನೀಡಿದ್ದರು. ಎಂಜಿನಿಯರ್‌ಗಳು ಬಂದು ಬಸ್‌ಗಳನ್ನು ತಪಾಸಣೆ ಮಾಡಿ ಸಮಸ್ಯೆ ಬಗೆಹರಿಸಿದ್ದರು. ಇದಾದ ಬಳಿಕ ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿತ್ತು. 

ಇದನ್ನು ಓದಿ: Gang Rape : ಬೆಚ್ಚಿಬಿದ್ದ ಸಿಲಿಕಾನ್‌ ಸಿಟಿ : 16 ವರ್ಷದ ಬಾಲಕಿ ಮೇಲೆ 8 ಜನರಿಂದ ಗ್ಯಾಂಗ್‌ರೇಪ್

ಆದರೆ ಇದೀಗ ಮತ್ತೊಂದು ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News