ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ನಾನು ಮಂತ್ರಿಯಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಿಧಾನಪರಿಷತ್‍ನಲ್ಲಿ ತಿಳಿಸಿದರು.


COMMERCIAL BREAK
SCROLL TO CONTINUE READING

ನೂತನ ಸಭಾಪತಿ ಬಸವರಾಜ್ ಹೊರಟ್ಟಿ(Basavaraj Horatti) ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದ ಅವರು, ನಾವಿಬ್ಬರು ಮಂತ್ರಿಯಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ ಎಂದಾಗ ಸದನದಲ್ಲಿ ನಗೆಯ ಅಲೆ ತೇಲಿ ಬಂದಿತು.


Valmiki Seer: ಸತ್ತರೇ ಇಲ್ಲೇ ಸಾಯ್ತೇನೆ ಎಂದು ಸಿಎಂ ಮುಂದೆಯೇ ಹೇಳಿದ ವಾಲ್ಮೀಕಿ ಶ್ರೀ..!


ಕಾಂಗ್ರೆಸ್(Congress) ಸದಸ್ಯರ ಸಹಕಾರದಿಂದ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೀರಿ. ಹೊರಟ್ಟಿ ಎಂಬ ಶಬರಿ ಶಾಪವನ್ನು ಬಿಜೆಪಿಯ ಶ್ರೀರಾಮ ವಿಮೋಚನೆ ಮಾಡಿದ್ದಾರೆ ಎಂದಾಗ ಮತ್ತೆ ಸದನದಲ್ಲಿ ನಗೆಯ ಅಲೆ ಎದ್ದಿತು.


Siddaramaiah: ಬಾಲ್ಯದಲ್ಲಿ ಸಿದ್ದರಾಮಯ್ಯ '₹ 5' ಗೆ ಕುರಿ ಖರೀದಿಸಿ, ಎಷ್ಟು ಲಾಭ ಗಳಿಸಿದ್ರು ಗೊತ್ತಾ?


ಸಭಾಪತಿ ಹೊರಟ್ಟಿ ಹಾಗೂ ನಾನು ಜೆಡಿಎಸ್‍ನ(JDS)ಲ್ಲಿದ್ದವರೇ. ಮರಿತಿಬ್ಬೇಗೌಡ ಅವರು ಮಾತನಾಡುವಾಗ, ಹೊರಟ್ಟಿಯವರು ಮಂತ್ರಿಯಾಗಬೇಕಿತ್ತು ಎಂದಿದ್ದರು. ಆದರೆ ಅದು ಆಗಲಿಲ್ಲ. ಕಾಂಗ್ರೆಸ್ ನನ್ನ ಪೂರ್ವಾಶ್ರಮ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಸಚಿವನಾಗಿದ್ದೆ. ಆಗ ನೀವು ಎಲ್ಲ ರೀತಿಯ ಸಹಕಾರವನ್ನು ಕೊಟ್ಟಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದರು.


HD Devegowda: 'ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ್ರು ಸೋತಿದ್ದು ತೃಪ್ತಿ ತಂದಿದೆ'


ಶಿಕ್ಷಕ ವೃತ್ತಿಯಿಂದ ಬಂದವರು ಏಳು ಬಾರಿ ಸೋಲಿಲ್ಲದ ಸರದಾರರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದು, ನಿಮ್ಮನ್ನು ಮೇಲ್ಪಂಕ್ತಿಗೆ ಹಾಕುವ ಮೂಲಕ ಮೌಲ್ಯಗಳನ್ನು ಕಾಪಾಡುವ ದೊಡ್ಡ ಜವಾಬ್ದಾರಿಯಿದೆ ನಿಮ್ಮ ಮೇಲಿದೆ ಎಂದು ಹೇಳಿದರು.


School: ಶಾಲಾ ಮಕ್ಕಳ ಬೇಸಿಗೆ ರಜೆ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ