Siddaramaiah: ಬಾಲ್ಯದಲ್ಲಿ ಸಿದ್ದರಾಮಯ್ಯ '₹ 5' ಗೆ ಕುರಿ ಖರೀದಿಸಿ, ಎಷ್ಟು ಲಾಭ ಗಳಿಸಿದ್ರು ಗೊತ್ತಾ?

ನನ್ನ ಮತ ಕ್ಷೇತ್ರ ಸುತ್ತೂರು. ಈಗ ನನ್ನ ಮಗ ಎಂ.ಎಲ್.ಎ ಆಗಿದ್ರೂ ಕೂಡ ಇದು ನನ್ನ ಕ್ಷೇತ್ರ. ನನ್ನ ಬಾಲ್ಯದ ದಿನಗಳನ್ನು ಕಳೆದಿದ್ದೂ ಇಲ್ಲ. ನಾನು ವೀರ ಮಕ್ಕಳ ಕುಣಿತದಲ್ಲಿ ನಂಬರ್ ಒನ್

Last Updated : Feb 9, 2021, 03:20 PM IST
  • ನನ್ನ ಮತ ಕ್ಷೇತ್ರ ಸುತ್ತೂರು. ಈಗ ನನ್ನ ಮಗ ಎಂ.ಎಲ್.ಎ ಆಗಿದ್ರೂ ಕೂಡ ಇದು ನನ್ನ ಕ್ಷೇತ್ರ. ನನ್ನ ಬಾಲ್ಯದ ದಿನಗಳನ್ನು ಕಳೆದಿದ್ದೂ ಇಲ್ಲ. ನಾನು ವೀರ ಮಕ್ಕಳ ಕುಣಿತದಲ್ಲಿ ನಂಬರ್ ಒನ್
  • ಸುತ್ತೂರು ಪಕ್ಕದ ಬೆಳಗುಂದ ಗ್ರಾಮದಲ್ಲಿ ವೀರ ಮಕ್ಕಳ ಕುಣಿತ ಕುಣಿಯಲು ಬಂದಿದ್ದೆ ಎಂಬ ಬಾಲ್ಯದ ನೆನಪು ಮಾಡಿಕೊಂಡ್ರು
  • ಇಂದು ಸುತ್ತೂರು ಮಠದಲ್ಲಿನ ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಮಾಜಿ ಸಿಎಂ ಸಿದ್ದರಾಮಯ್ಯ
Siddaramaiah: ಬಾಲ್ಯದಲ್ಲಿ ಸಿದ್ದರಾಮಯ್ಯ '₹ 5' ಗೆ ಕುರಿ ಖರೀದಿಸಿ, ಎಷ್ಟು ಲಾಭ ಗಳಿಸಿದ್ರು ಗೊತ್ತಾ? title=

ಮೈಸೂರು: ನನ್ನ ಮತ ಕ್ಷೇತ್ರ ಸುತ್ತೂರು. ಈಗ ನನ್ನ ಮಗ ಎಂ.ಎಲ್.ಎ ಆಗಿದ್ರೂ ಕೂಡ ಇದು ನನ್ನ ಕ್ಷೇತ್ರ. ನನ್ನ ಬಾಲ್ಯದ ದಿನಗಳನ್ನು ಕಳೆದಿದ್ದೂ ಇಲ್ಲ. ನಾನು ವೀರ ಮಕ್ಕಳ ಕುಣಿತದಲ್ಲಿ ನಂಬರ್ ಒನ್. ಸುತ್ತೂರು ಪಕ್ಕದ ಬೆಳಗುಂದ ಗ್ರಾಮದಲ್ಲಿ ವೀರ ಮಕ್ಕಳ ಕುಣಿತ ಕುಣಿಯಲು ಬಂದಿದ್ದೆ ಎಂಬ ಬಾಲ್ಯದ ನೆನಪು ಮಾಡಿಕೊಂಡ್ರು. ಅಲ್ಲದೇ ಅಂದು ಸ್ವಾಮೀಜಿ ಕೊಟ್ಟ 5 ರೂನಿಂದ ಕುರಿ ಕೊಂಡು ಸಾಕಷ್ಟು ಲಾಭ ಗಳಿಸಿದ್ದನ್ನು ಮೆಲುಕು ಹಾಕಿದ್ರು.

ಇಂದು ಸುತ್ತೂರು ಮಠದಲ್ಲಿನ ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತೇನೆ. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯುತ್ತಿದೆ. ಜನರ ಆರೋಗ್ಯದ ದೃಷ್ಠಿಯಿಂದ ಶ್ರೀಗಳು ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.

HD Devegowda: 'ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ್ರು ಸೋತಿದ್ದು ತೃಪ್ತಿ ತಂದಿದೆ'

ಸುತ್ತೂರು ಮಠ(Suttur Math) ನನಗೆ ಆತ್ಮೀಯವಾದ ಮಠಗಳಲ್ಲಿ ಒಂದು. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪಾಂಡಿತ್ಯ ಹೊಂದಿರುವವರು, ಅಪಾರ ಜ್ಞಾನಿಗಳು. ಅವರೂ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರ ಹಿತವಚನ ಕೇಳಲು ನಾನೂ ಕೂಡ ಬಂದಿದ್ದೇನೆ ಎಂದು ಹೇಳಿದರು.

School: ಶಾಲಾ ಮಕ್ಕಳ ಬೇಸಿಗೆ ರಜೆ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್

ಇದೇ ಸಂದರ್ಭದಲ್ಲಿ ತಮ್ಮ ಹಳೆಯ ಬಾಲ್ಯದ ನೆನಪು ಮೆಲುಕು ಹಾಕಿದಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ನಾನು ಚಿಕ್ಕ ವಯಸ್ಸಿನಲ್ಲಿ ವೀರ ಮಕ್ಕಳ ಕುಣಿತ ಕುಣಿಯುತ್ತಿದ್ದೆ. ನಾನು ವೀರ ಮಕ್ಕಳ ಕುಣಿತದಲ್ಲಿ ನಂಬರ್ ಒನ್ ಎಂದರು.

ಫೆ.14ರಂದು ಕನಕಪುರ ರಾಜಕುಮಾರಿಯ ಕಲ್ಯಾಣ.! ದಿಬ್ಬಣಕ್ಕೆ ಬರುವ ದೊಡ್ಡವರು ಯಾರು ಗೊತ್ತಾ..?

ಮುಂದುವರೆದು ಮಾತನಾಡಿದ ಅವರು, ಸುತ್ತೂರು ಪಕ್ಕದ ಬೆಳಗುಂದ ಗ್ರಾಮದಲ್ಲಿ ವೀರ ಮಕ್ಕಳ ಕುಣಿತ ಕುಣಿಯಲು ಬಂದಿದ್ದೆ. ವಾಪಸ್ ಬರುವಾಗ ಸುತ್ತೂರಿನ ಕಡೆಯಿಂದ ಹೊಗುತ್ತಿದ್ದೆವು. ಆಗ ರಾಜೇಂದ್ರ ಸ್ವಾಮಿಗಳ ಭೇಟಿ ಮಾಡಿದ್ದೆವು. ಮೊದಲ ಭೇಟಿಯಲ್ಲಿ ಅವರ ಮುಂದೆ ವೀರ ಮಕ್ಕಳ ಕುಣಿತ ಕುಣಿದೆವು. ಅದಕ್ಕೆ ಮೆಚ್ಚಿ ಅವರು ನನಗೆ 5 ರೂಪಾಯಿ ಹಣ ಕೊಟ್ಟಿದ್ದರು, ಅದರಲ್ಲಿ ನಾನು ಒಂದು ಕುರಿ ಕೊಂಡು ಸಾಕಿದ್ದೆ. ಅದರಲ್ಲಿ ಸಾಕಷ್ಟು ಲಾಭ ಗಳಿಸಿದ್ದೆ ಎಂದರು.

BJP-JDS: ಸಭಾಪತಿ ಸ್ಥಾನಕ್ಕೆ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿಗೆ ಭರ್ಜರಿ ಗೆಲವು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News