ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಹೆಚ್.ಕೆ.ಪಾಟೀಲರಿಗೆ ಮಾತೃವಿಯೋಗ
ಮಾಜಿ ಸಚಿವ, ದಿವಂಗತ ಕೆ.ಹೆಚ್.ಪಾಟೀಲ್ ಅವರ ಧರ್ಮ ಪತ್ನಿಯಾಗಿದ್ದ ಪದ್ಮಾವತಿಯವರು ರಾಜಕೀಯ ಚಟುವಟಿಕೆಯಿಂದ ದೂರವೇ ಇದ್ದರು.
ಗದಗ: ಮಾಜಿ ಸಚಿವ, ಕಾಂಗ್ರೆಸ್ (Congress) ಹಿರಿಯ ನಾಯಕ ಹೆಚ್.ಕೆ.ಪಾಟೀಲರ (HK Patil) ತಾಯಿ ಪದ್ಮಾವತಿ ಪಾಟೀಲ್ (Padmavati Patil) ಅವರು ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮಾವತಿ ಕೃಷ್ಣಗೌಡ ಪಾಟೀಲ್ (88) ಅವರನ್ನು ಕಳೆದ ಕೆಲ ದಿನಗಳ ಹಿಂದೆ ಹುಲಕೋಟಿ(Hulkoti)ಯ RMS ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ: Electricity Bill: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ, ಜನರ ಜೇಬಿಗೆ ಮತ್ತಷ್ಟು ಹೊರೆ
ಕಳೆದ ಒಂದು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರು ನೈಸರ್ಗಿಕ ಚಿಕಿತ್ಸೆ(Natural Treatment)ಗೆ ಒಳಗಾಗಿದ್ದರು. ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದ ಹೆಚ್.ಕೆ.ಪಾಟೀಲರ ತಾಯಿಯನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಸೋಮವಾರ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.
ಮಾಜಿ ಸಚಿವ, ದಿವಂಗತ ಕೆ.ಹೆಚ್.ಪಾಟೀಲ್(KH Patil) ಅವರ ಧರ್ಮ ಪತ್ನಿಯಾಗಿದ್ದ ಪದ್ಮಾವತಿಯವರು ರಾಜಕೀಯ ಚಟುವಟಿಕೆಯಿಂದ ದೂರವೇ ಇದ್ದರು. ಧಾರ್ಮಿಕ ವಿಧಿವಿಧಾನದಂತೆ ಮಂಗಳವಾರ(ಏ.4) ಹುಲಕೋಟಿ ಗ್ರಾಮದ ರುದ್ರ ಭೂಮಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯ & ಕೇಂದ್ರ ರಾಜಕೀಯದಲ್ಲಿ ಬದಲಾವಣೆ ಇಲ್ಲ: ಭವಿಷ್ಯ ನುಡಿದ ಗೊಂಬೆಗಳು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.