KS Eshwarappa : ಬಿ ರಿಪೋರ್ಟ್ ಹೇಳಿಕೆ ವಿಚಾರ : ಡಿಕೆ ಶಿವಕುಮಾರ್ಗೆ ಸವಾಲೆಸೆದ ಈಶ್ವರಪ್ಪ!
ತಾಕತ್ತಿದ್ದರೆ ಹೈಕೋರ್ಟ್, ಸುಪ್ರಿಂಕೋರ್ಟ್ ಗೆ ಹೋಗಿ ಯಶಸ್ವಿಯಾಗಿ ಬರಲಿ. ಗೆದ್ದು ಬಂದ್ರೆ ಅವರು ಹೇಳಿದ ಹಾಗೆ ಮಾಡ್ತೀನಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಬಿ ರಿಪೋರ್ಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗ : ತಾಕತ್ತಿದ್ದರೆ ಹೈಕೋರ್ಟ್, ಸುಪ್ರಿಂಕೋರ್ಟ್ ಗೆ ಹೋಗಿ ಯಶಸ್ವಿಯಾಗಿ ಬರಲಿ. ಗೆದ್ದು ಬಂದ್ರೆ ಅವರು ಹೇಳಿದ ಹಾಗೆ ಮಾಡ್ತೀನಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಬಿ ರಿಪೋರ್ಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಕೆಎಸ್ ಈಶ್ವರಪ್ಪ, ಸಂತೋಷ್ ಪಾಟೀಲ್ ನನ್ನು ನೋಡಿಯೇ ಇರಲಿಲ್ಲ ಎಂದು ಹಿಂದೆ ಕೂಡ ಹೇಳಿದ್ದೇನೆ. ಟೈಪ್ ಮಾಡಿದ ಕಾಪಿ ನಂಬಲು ಸಾಧ್ಯವೇ? ನಾಳೆ ಯಾರೋ ಆತ್ಮಹತ್ಯೆ ಮಾಡಿಕೊಂಡಾಗ ಡಿಕೆ ಶಿವಕುಮಾರ್ ವಿರುದ್ಧ ಟೈಪ್ಡ್ ಕಾಪಿ ಸಿಕ್ಕರೆ ಅವರು ನಂಬರಾ? ತನಿಖಾಧಿಕಾರಿಗಳು ಸಂಪೂರ್ಣ ದಾಖಲೆ ಇಟ್ಟು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : KCET exam result: ಕೆಸಿಇಟಿ ಫಲಿತಾಂಶ ಪರಿಶೀಲಿಸಲು ಈ ನೇರ ಲಿಂಕ್ ಬಳಸಿ
ಇಡಿ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ವಿರೋಧ ಪಕ್ಷದ ಅಸ್ತಿತ್ವ ತೋರಿಸಲು ಕಾಂಗ್ರೆಸ್ ಹೋರಾಟ ಮಾಡುತ್ತಿದೆ, ಮಾಡಲಿ. ನಾವು ಕೂಡ ಹೋರಾಟ ಮಾಡಿಯೇ ಅಧಿಕಾರಕ್ಕೆ ಬಂದಿದ್ದೇವೆ. ಏನೆ ಮಾಡಿಕೊಳ್ಳಲಿ ಅವರಿಗೆ ಬಿಟ್ಟದ್ದು. ಆದರೆ ಕುತಂತ್ರದ ರಾಜಕಾರಣ ರಾಜ್ಯದಲ್ಲಿ ನಡೆಯೊಲ್ಲ ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.