KCET exam result: ಕೆಸಿಇಟಿ ಫಲಿತಾಂಶ ಪರಿಶೀಲಿಸಲು ಈ ನೇರ ಲಿಂಕ್‌ ಬಳಸಿ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜೂನ್‌ ತಿಂಗಳ ಮಧ್ಯಭಾಗದಲ್ಲಿ ನಡೆಸಲಾಗಿತ್ತು. ಇದರ ಫಲಿತಾಂಶ ಜುಲೈ 30 ರಂದು ಹೊರಬೀಳಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇನ್ನು ಫಲಿತಾಂಶ ಪರಿಶೀಲಿಸಲು ಈ ರೀತಿ ಮಾಡಿ.  

Written by - Bhavishya Shetty | Last Updated : Jul 26, 2022, 09:54 AM IST
  • ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2022ರ ಫಲಿತಾಂಶ
  • ಜುಲೈ 30ರಂದು ಹೊರಬೀಳಲಿದೆ ಕೆಸಿಇಟಿ ರಿಸಲ್ಟ್‌
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ತಿಳಿಯಿರಿ
KCET exam result: ಕೆಸಿಇಟಿ ಫಲಿತಾಂಶ ಪರಿಶೀಲಿಸಲು ಈ ನೇರ ಲಿಂಕ್‌ ಬಳಸಿ  title=
KCET exam result

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022ರ ಫಲಿತಾಂಶವನ್ನು ಜುಲೈ 30ರಂದು ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್‌ ಅಶ್ವತ್ಥ್‌ ನಾರಾಯಣ್‌ ಮಾಹಿತಿ ನೀಡಿದ್ದರು. 

ಈ ಮಧ್ಯೆ ಅಧಿಕೃತ ಅಧಿಸೂಚನೆಯೊಂದು ಹೊರಬಿದ್ದಿದ್ದು, ಇದರ ಪ್ರಕಾರ, 12 ನೇ ತರಗತಿಯ ಅಂಕಗಳನ್ನು ಅಪ್‌ಲೋಡ್ ಮಾಡಲು ಇಂದು ಕೊನೆಯ ದಿನಾಂಕವಾಗಿದೆ. ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ UGCET 2022ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ 12 ನೇ ತರಗತಿಯ ಅಂಕಗಳನ್ನು KEA ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಲಿಂಕ್‌ನಲ್ಲಿ ಜುಲೈ 25ರ ಸಂಜೆಯೊಳಗೆ ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: Alien life in space: ಬಾಹ್ಯಾಕಾಶದಲ್ಲಿ ಏಲಿಯನ್‌ಗಳ ಅಸ್ತಿತ್ವ ಹುಡುಕಲು ಹೊರಟ ನಾಸಾ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜೂನ್‌ ತಿಂಗಳ ಮಧ್ಯಭಾಗದಲ್ಲಿ ನಡೆಸಲಾಗಿತ್ತು. ಇದರ ಫಲಿತಾಂಶ ಜುಲೈ 30 ರಂದು ಹೊರಬೀಳಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇನ್ನು ಫಲಿತಾಂಶ ಪರಿಶೀಲಿಸಲು ಈ ರೀತಿ ಮಾಡಿ.  

KCET ಫಲಿತಾಂಶ 2022: ಪರಿಶೀಲಿಸಲು ಸಲಹೆ

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ-kea.kar.nic.in
ಮುಖಪುಟದಲ್ಲಿ, "KCET ಫಲಿತಾಂಶ 2022" ಲಿಂಕ್ ಅನ್ನು ಕ್ಲಿಕ್ ಮಾಡಿ
ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ ಮತ್ತುʼsubmitʼನ್ನು ಕ್ಲಿಕ್ ಮಾಡಿ
ನಿಮ್ಮ KCET ಫಲಿತಾಂಶ ಫಲಿತಾಂಶ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುತ್ತದೆ. 
ಅದನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ: Vegetable Price: ಬೆಳೆಗಳ ಮೇಲೆ ಮಾನ್ಸೂನ್‌ ಪ್ರಭಾವ: ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ

KCET ಅಂಕಪಟ್ಟಿಯು ಅಭ್ಯರ್ಥಿಯ ವೈಯಕ್ತಿಕ ವಿವರಗಳು, ರೋಲ್ ಸಂಖ್ಯೆ, ವಿಷಯವಾರು ಅಂಕಗಳು ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು ಸೇರಿದಂತೆ ವಿವರಗಳನ್ನು ಒಳಗೊಂಡಿರುತ್ತದೆ. ಕರ್ನಾಟಕ ಕೆಸಿಇಟಿ 2022 ಪರೀಕ್ಷೆಯು ಜೂನ್ 16 ಮತ್ತು 18 ರ ನಡುವೆ ನಡೆದಿತ್ತು. ಕರ್ನಾಟಕದ ಕಾಲೇಜುಗಳಲ್ಲಿ ಎಂಜಿನಿಯರಿಂಗ್, ಫಾರ್ಮಸಿ ಕೃಷಿ, ಪಶು ವೈದ್ಯಕೀಯ ಮತ್ತು ಇತರ ತಾಂತ್ರಿಕ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ಈಪರೀಕ್ಷೆಯನ್ನು ನಡೆಸಲಾಯಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News