ಕೊಪ್ಪಳ: ಬಸವಕಲ್ಯಾಣ ಮತ್ತು ಮಸ್ಕಿಯ ಕ್ಷೇತ್ರದದಲ್ಲಿ ಬ್ಯಾಲೆಟ್ ಪೇಪರಿನಲ್ಲಿ ಉಪಚುನಾವಣೆ ನಡೆಸಿ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿಗೆ ಬಹಿರಂಗ ಸವಾಲು ಎಸೆದಿದ್ದಾರೆ.


COMMERCIAL BREAK
SCROLL TO CONTINUE READING

ಜಿಲ್ಲೆಯ ಕಾರಟಗಿಯ ಸ್ವಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಶಿವರಾಜ್ ತಂಗಡಗಿ, ತಾಕತ್ತಿದ್ದರೆ ಇವಿಎಂ(EVM) ಯಂತ್ರ ಇಲ್ಲದೆ ಗೆದ್ದು ತೋರಿಸಲಿ ಎಂದು ಬಿಜೆಪಿಯವರಿಗೆ ಸವಾಲು ಹಾಕಿದರು. ರಾಜ್ಯದಲ್ಲಿ ಗ್ರಾಮ ಪಂಚಾಯತ್  ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆದರೆ ಎಂಪಿ ಎಂಎಲ್‍ಎ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.


ಸಚಿವಾಕಾಂಕ್ಷಿಗಳಿಗೆ 'ಶಾಕ್' ನೀಡಿದ ಹೈಕಮಾಂಡ್..!


ನನಗೆ ಇವಿಎಂ ಮಷೀನ್ ಮೇಲೆ ನನಗೆ ವಿಶ್ವಾಸವಿಲ್ಲ. ಚುನಾವಣೆಗಳು ಜನರ ತೀರ್ಪಾಗಬೇಕೇ ಹೊರತು ಯಂತ್ರಗಳ ತೀರ್ಪಾಗಬಾರದು ಎಂದರು. ಜೊತೆಗೆ ಬಿಜೆಪಿ ಮತ್ತು ವಿಜಯೇಂದ್ರ ಬಳಿ ಹಣ ಅಧಿಕಾರ ಇದೆ ಹೀಗಾಗಿ ಗೆಲ್ಲುತ್ತಾರೆ. ನಾನೊಬ್ಬ ದೇಶದ ಪ್ರಜೆಯಾಗಿ ಇವಿಎಂ ಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದರು.


ಸಚಿವಾಕಾಂಕ್ಷಿಗಳಿಗೆ 'ಶಾಕ್' ನೀಡಿದ ಹೈಕಮಾಂಡ್..!