ಸಚಿವಾಕಾಂಕ್ಷಿಗಳಿಗೆ 'ಶಾಕ್' ನೀಡಿದ ಹೈಕಮಾಂಡ್..!

ಸಚಿವಾಕಾಂಕ್ಷಿಗಳಿಗೆ ಮತ್ತೆ ಕೊಂಚ ನಿರಾಸೆ

Last Updated : Nov 18, 2020, 06:39 PM IST
  • ಸಚಿವಾಕಾಂಕ್ಷಿಗಳಿಗೆ ಮತ್ತೆ ಕೊಂಚ ನಿರಾಸೆ
  • ಜೆ.ಪಿ.ನಡ್ಡಾ ಭೇಟಿಯಾದ ಸಿಎಂ ಯಡಿಯೂರಪ್ಪ
  • ಇನ್ನು ಎರಡು ಮೂರು ದಿನಗಳಲ್ಲಿ ವರಿಷ್ಠರು ತಮ್ಮ ನಿರ್ಧಾರ
ಸಚಿವಾಕಾಂಕ್ಷಿಗಳಿಗೆ 'ಶಾಕ್' ನೀಡಿದ ಹೈಕಮಾಂಡ್..! title=

ನವದೆಹಲಿ: ಇಂದು ಸಂಜೆ ವೇಳೆಗೆ ಹೈಕಮಾಂಡ್ ನಿಂದ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಪ್ರಕಟವಾಗುವ ನಿರೀಕ್ಷೆಯಲ್ಲಿದ್ದ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ.

ಜೆ.ಪಿ.ನಡ್ಡಾ ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಯಡಿಯೂರಪ್ಪ(B.S.Yediyurappa), ವರಿಷ್ಠರು ಚರ್ಚೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಜೆ.ಪಿ.ನಡ್ಡಾ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಗ್ರಾ.ಪಂ. ಚುನಾವಣೆ ಮುಂದೂಡಿಕೆಯ ಸುಳಿವು ನೀಡಿದ ಸಚಿವ ಈಶ್ವರಪ್ಪ

ಇನ್ನು ಎರಡು ಮೂರು ದಿನಗಳಲ್ಲಿ ವರಿಷ್ಠರು ತಮ್ಮ ನಿರ್ಧಾರ ತಿಳಿಸುತ್ತಾರೆ. ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದನ್ನು ವರಿಷ್ಠರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು. ಈ ಮೂಲಕ ಸಚಿವಾಕಾಂಕ್ಷಿಗಳ ಎದೆಯಲ್ಲಿ ಮತ್ತೆ ಢವಧವ ಶುರುವಾಗಿದೆ.

ಕಂಗನಾ v/s IPS ಡಿ.ರೂಪಾ : ಇಬ್ಬರ ನಡುವೆ ಹೊತ್ತಿ ಉರಿತಿದೆ ಪಟಾಕಿ ಕಿಡಿ..!

Trending News