ಹಾಸನ : ರಂಜಾನ್ ಹಿನ್ನೆಲೆ ನಗರದಲ್ಲಿ ಇಫ್ತಿಯಾರ್ ಕೂಟ ಆಯೋಜನೆ ಮಾಡಲಾಗಿತ್ತು. ಈ ಇಫ್ತಿಯಾರ್ ಕೂಟದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಮಾಜಿ ಸಚಿವ  ರೋಷನ್ ಬೇಗ್, ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಂಸದ ಪ್ರಜ್ವಲ್ ರೇವಣ್ಣ ಇನ್ನಿತರ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು. ನಗರದ ಹೊಸ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 


COMMERCIAL BREAK
SCROLL TO CONTINUE READING

ಈ ವೇಳೆ ಸುದ್ದಿಗಾರರ ಜೊತೆ ಮತನಾಡಿದ ಮಾಜಿ ಪಿಎಂ ದೇವೇಗೌಡ, ನಾನು ಲೋಕೋಪಯೋಗಿ ಮಂತ್ರಿ ಆಗಿದ್ದಾಗಿನಿಂದ ಈ ಪದ್ದತಿ ನಡೆಸಿಕೊಂಡು ಬಂದಿದ್ದೇನೆ. ಇಂದು ಇಬ್ರಾಹಿಂ ರವರು ರೋಷನ್ ಬೇಗ್ ರವರು ಭಾಗವಹಿಸಿದ್ದಾರೆ. ನಾನು ಇತ್ತೀಚೆಗೆ ಆರೋಗ್ಯ ಪರಿಸ್ಥಿತಿ ಕಷ್ಟಕರವಾಗಿದೆ. ಆದರೂ ನಾನು ರಾಜ್ಯಾದ್ಯಂತ ಜನತಾ ಜಲಧಾರೆ ಕಾರ್ಯಕ್ರಮ ಆಯೋಜಿಸಿ ಭಾಗಿಯಾಗುತ್ತಿದ್ದೇನೆ. ಈ ಹಬ್ಬದಲ್ಲಿ ಎಲ್ಲರೂ ಸೇರಿ ಒಟ್ಟುಗೂಡಿ ಪರಸ್ಪರ ಆತ್ಮೀಯತೆಯಿಂದ ಒಂದಾಗಿ ಶುಭಾಶಯ ಹಂಚಿಕೊಳ್ಳುತ್ತೇವೆ. ಯಾವುದೇ ಧರ್ಮದಲ್ಲಿ ಬಡವ, ಶ್ರೀಮಂತ ಒಂದೇ ಟೇಬಲ್‌ನಲ್ಲಿ ಕೂತು ಊಟ ಮಾಡುವಂತದ್ದನ್ನ ಈ ಧರ್ಮದಲ್ಲಿ ನೋಡಿದ್ದೇನೆ. ಈ ಧರ್ಮದಲ್ಲಿ ನಮ್ಮನ್ನ ಕಣ್ತೆರೆಸುವ ಸಂಪ್ರದಾಯ ರೂಡಿಯಲ್ಲಿದೆ. ಪರಸ್ಪತ ಹಂಚಿಕೊಂಡು ಊಟ ಮಾಡುವ ಶ್ರೇಷ್ಠ ಸಂಪ್ರದಾಯ ಇದೆ ಎಂದರು.


ಇದನ್ನೂ ಓದಿ : HD Kumaraswamy : ಸಿದ್ದರಾಮಯ್ಯಗೆ ಭರ್ಜರಿ ಟಾಂಗ್ ಕೊಟ್ಟ ಕುಮಾರಸ್ವಾಮಿ!


ಬೆಂಗಳೂರಿನಲ್ಲಿ ಕೂಟ ಮಾಡುವಾಗ ರೋಷನ್ ಬೇಗ, ಇಬ್ರಾಹಿಂ, ಷರೀಫ್ ಸಾಹೇಬ್ರು ಉತ್ತೇಜನ ಕೊಡುತ್ತಿದ್ರು. ನಮ್ಮ ಪಕ್ಷದಲ್ಲಿ ಇದ್ದ ಜಫ್ರುಲ್ಲಾ ಮತ್ತು ಫಾರೂಕ್ ಒಂದೆರಡು ಬಾರಿ ಕೂಟ ಆಯೋಜಿಸಿದ್ರು. ವಿಶೇಷವಾಗಿ ಇಂದು ರೋಷನ್ ಬೇಗ್ ಬಂದಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಪಕ್ಷ ಉಳಿಯುತ್ತೋ ಇಲ್ಲವೋ ಎಂಬುವರಿಗೆ ಶೆಡ್ ಹೊಡೆದು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹಲವಾರು ಹಿಂಸೆಗಳಿದೆ ಎಂದು  ಹೇಳಿದರು.


ಇದನ್ನೂ ಓದಿ : ಜೇನಿಗೆ ಇರುವೆಗಳು ಸಾಮಾನ್ಯ: ಆಕಾಂಕ್ಷಿಗಳಿಗೆ ಮುನೇಗೌಡ ಟಾಂಗ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.