ಬೆಂಗಳೂರು: ಶಾಸಕ ಪ್ರಿಯಾಂಕ್ ಖರ್ಗೆ(Priyank Kharge) ಪತ್ನಿ ಶ್ರುತಿ ಖರ್ಗೆ(Shruthi Kharge) ಮೊಬೈಲ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಖತರ್ನಾಕ್ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸದಾಶಿವನಗರ ಪೊಲೀಸರು ವಿಚಾರಣೆ ವೇಳೆ ಆರೋಪಿಗಳ  ಸಾಲು ಸಾಲು ಸುಲಿಗೆ ಕಹಾನಿಯನ್ನು ಬಯಲು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಮೋಯಿನ್ @ ಕಾಜಾ ಮೋಯಿನ್, ತೋಹಿದ್, ಜಬೀ ಅಲಿಯಾಸ್ ಕಾಲಾ ಹಾಗೂ ಇಲಿಯಾಸ್ ಬಂಧಿತ ಆರೋಪಿಗಳು(Four Accused Arrested). 180ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಈ ಖತರ್ನಾಕ್ ಸುಲಿಗೆಕೋರರು ಭಾಗಿಯಾಗಿದ್ದರೆಂದು ತಿಳಿದುಬಂದಿದೆ. ಖದೀಮರ ಟೀಂ ದಿನಕ್ಕೆ ಎರಡು ಟೈಮಿಂಗ್ನಲ್ಲೇ ಸುಲಿಗೆ ಮಾಡುತ್ತಿದ್ದರು ಅಂತಾ ಪೊಲೀಸರು ತಿಳಿಸಿದ್ದಾರೆ.


ಸಿದ್ದರಾಮಯ್ಯ ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚಿತ: ಬಿಜೆಪಿ


ಬೆಳಗ್ಗೆ 5 ರಿಂದ 8 ಮತ್ತು ರಾತ್ರಿ 8 ರಿಂದ 10 ಗಂಟೆಯೊಳಗೆ ಈ ಸುಲಿಗೆಕೋರರು(Mobile Phone Snatcher) ಸುಲಿಗೆ ಮಅಡುತ್ತಿದ್ದರು. ಅದರಲ್ಲೂ ಶನಿವಾರ-ಭಾನುವಾರವೇ ಈ ಗ್ಯಾಂಗ್ ಫುಲ್ ಆಕ್ಟಿವ್ ಆಗಿರುತ್ತಿದ್ದರಂತೆ. ಈ ಗ್ಯಾಂಗ್ ಮೊದಲು ಬೈಕ್ ಕಳ್ಳತನ ಮಾಡಿ ಆ ಬೈಕುಗಳಿಂದಲೇ ಸುಲಿಗೆ ಮಾಡುತ್ತಿದ್ದರಂತೆ.


ರಾಜ್ಯದ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದ ಕೃತ್ಯವೆಸಗಿದ್ದ ಈ ಗ್ಯಾಂಗ್ ಖಾಕಿಪಡೆಗೆ ಮೋಸ್ಟ್ ವಾಂಟೆಡ್ ಆಗಿತ್ತು. ಹೈಗ್ರೌಂಡ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಸರ್ಜಾಪುರ, ಮಂಡ್ಯ, ಹೊಸಕೋಟೆ, ನೆಲಮಂಗಲ ಸೇರಿ ಹಲವು ಠಾಣೆಗಳ ವಾಂಟೆಡ್ ಲಿಸ್ಟ್​ ನಲ್ಲಿ ಈ ಸುಲಿಗೆ ಟೀಂ ಇತ್ತು ಎಂದು ತಿಳಿದುಬಂದಿದೆ. HSR ಲೇಔಟ್ ನಲ್ಲಿ ಹಣ ಕೊಡದ ಕ್ಯಾಬ್ ಚಾಲಕನಿಗೂ ಚಾಕು ಇರಿದಿದ್ದರು. ಸದ್ಯ ಸದಾಶಿವನಗರ ಪೊಲೀಸರಿಂದ(Sadashivanagar Police) ಆರೋಪಿಗಳ ಬಂಧನವಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.


ಇದನ್ನೂ ಓದಿ: ಕಾಂಗ್ರೆಸನ್ನು ಶಾಶ್ವತ ನಿದ್ರೆಗೆ ಕಳುಹಿಸಲು ಜನರು ಸಜ್ಜಾಗಿದ್ದಾರೆ: ನಳೀನ್ ಕುಮಾರ್ ಕಟೀಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.