ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ 43 ಜನರು ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ.ಇದರಲ್ಲಿ ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರದ ರಾಜ್ಯ ಖಾತೆ ಸಚಿವ ಸ್ಥಾನ ಲಭಿಸಿದೆ.


COMMERCIAL BREAK
SCROLL TO CONTINUE READING

ಇನ್ನೊಂದೆಡೆಗೆ ಈ ಬಾರಿ ಕೇಂದ್ರ ಸಚಿವ ಸಂಪುಟದಿಂದ ಡಿ.ವಿ.ಸದಾನಂದ್ ಗೌಡ ಅವರನ್ನು ಕೈಬಿಡಲಾಗಿದೆ,ಈ ಹಿನ್ನಲೆಯಲ್ಲಿ ರಾಜ್ಯಕ್ಕೆ ನೂತನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗಲಿದೆ ಎನ್ನುವ ಭರವಸೆ ಇತ್ತು. ಆದರೆ ಈಗ ಅದರ ಬದಲಾಗಿ ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರದ ರಾಜ್ಯ ಖಾತೆ ಸ್ಥಾನವನ್ನು ನೀಡಲಾಗಿದೆ.


ಇದನ್ನೂ ಓದಿ: Big News: ಪ್ರಧಾನಿ ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಒಲಿದ ಮಂತ್ರಿ ಭಾಗ್ಯ


Rajeev Chandrasekhar) ಅವರಿಗೆ ಕರಕುಶಲ ಮತ್ತು ಮಾಹಿತಿ ತಂತ್ರಜ್ಞಾನದದ ಖಾತೆ, ಉಡುಪಿ ಮತ್ತು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಕೃಷಿ ಮತ್ತು ರೈತರ ಕಲ್ಯಾಣ, ಇನ್ನೂ ಚಿತ್ರದುರ್ಗದಿಂದ ಇದೆ ಮೊದಲ ಬಾರಿಗೆ ಸಂಸದರಾಗಿರುವ ಎ ನಾರಾಯಣ ಸ್ವಾಮೀ ಅವರಿಗೆ  ಸಮಾಜಕಲ್ಯಾಣ ಇಲಾಖೆ,ಮತ್ತು ಬೀದರ್ ಸಂಸದ ಭಗವಂತ್ ಖೂಭಾ ಅವರಿಗೆ ರಸಗೊಬ್ಬರ ಮತ್ತು ನವಿಕರಿಸಲಾಗುವ ಇಂಧನದ ಖಾತೆಗಳನ್ನು ನೀಡಲಾಗಿದೆ.


ಸದ್ಯ ಈಗ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯಲ್ಲಿ ಇಬ್ಬರು ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.ಪ್ರಹ್ಲಾದ್ ಜೋಷಿ ಸಂಸದೀಯ ವ್ಯವಹಾರ ಮತ್ತು ಗಣಿ ಕಲ್ಲಿದ್ದಲು ಸಚಿವಾಲಯವನ್ನು ನಿರ್ವಹಿಸುತ್ತಿದ್ದರೆ, ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವಾಲಯವನ್ನು ನಿರ್ವಹಿಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.