ಬೆಂಗಳೂರು : ಇಂದಿನಿಂದ ರಾಜ್ಯ ರಾಜಧಾನಿಯಲ್ಲಿ ಓಲಾ ಊಬರ್ ಆಟೋ ಓಡಾಡುವಂತಿಲ್ಲ. ಬೆಂಗಳೂರಿನಲ್ಲಿ ಓಲಾ ಊಬರ್ ಆಟೋ ಸಂಚಾರವನ್ನು ಸಾರಿಗೆ ಇಲಾಖೆ ಬ್ಯಾನ್ ಮಾಡಿದೆ. ಓಲಾ, ಊಬರ್ ಹೆಸರಿನಲ್ಲಿ ಆಟೋ ಸಂಚಾರವನ್ನು  ಕಾನೂನು ಬಾಹಿರ ಎಂದು ಇಲಾಖೆ ತಿಳಿಸಿದೆ. ಈ ಸಂಸ್ಥೆಗಳಿಗೆ ಆರ್ ಟಿಒ ನೀಡಿದ್ದ ಪರವಾನಿಗೆ 2021ರಲ್ಲೇ  ಮುಗಿದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 


COMMERCIAL BREAK
SCROLL TO CONTINUE READING

ಓಲಾ ಊಬರ್ ಸಂಸ್ಥೆಗಳಿಗೆ ಆಟೋ ಸಂಚಾರಕ್ಕೆ ಆರ್ ಟಿಒ ನೀಡಿದ್ದ  ಲೈಸೆನ್ಸ್ 2021ರಲ್ಲೇ  ಮುಕ್ತಾಯವಾಗಿದೆ. ಹಾಗಿದ್ದರೂ, ನಗರದಲ್ಲಿ ಅನಧಿಕೃತವಾಗಿ ಆಟೋ  ಸಂಚಾರ ಮಾಡುತ್ತಿತ್ತು. ಇನ್ನು ಆ್ಯಪ್ ಆಧಾರಿತ ಆಟೋಗಳು  ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ ಎನ್ನುವ ಆರೋಪ ಕೂಡಾ ಕೇಳಿ ಬಂದಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. 


ಇದನ್ನೂ ಓದಿ : Invest Karnataka: ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಿಂದ ಸಾವಿರಾರು ಉದ್ಯೋಗ ಸೃಷ್ಟಿ


ಈ ಬಗ್ಗೆ ನಿನ್ನೆ ಅಂದರೆ ಮಂಗಳವಾರ ಆರ್ ಟಿ ಓ ಅಧಿಕಾರಿಗಳು ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಓಲಾ-ಊಬರ್ ಮುಖ್ಯಸ್ಥರು ಕೂಡಾ ಭಾಗಿಯಾಗಿದ್ದರು. ಈ ಸಭೆಯಲ್ಲಿ ಆ್ಯಪ್ ಆಧಾರಿತ ಆಟೋ ಗಳ ಸೇವೆ ನಿಲ್ಲಿಸುವಂತೆ ಸೂಚನೆ ನೀಡಲಾಯಿತು. ಓಲಾ ಊಬರ್ ಸೇವೆ ಸ್ಥಗಿತಗೊಳಿಸುವಂತೆ ಸೂಚನೆ ನೀಡುತ್ತಿದ್ದಂತೆಯೇ, ಸಂಸ್ಥೆಯ ಅಧಿಕಾರಿಗಳು ಹೆಚ್ಚಿನ ಸಮಯಾವಕಾಶ  ನೀಡುವಂತೆ ಕೋರಿದ್ದರು. ಆದರೆ, ಇದಕ್ಕೆ ಒಪ್ಪದ ಆರ್ ಟಿಒ ಅಧಿಕಾರಿಗಳು ಕೂಡಲೇ ಆಟೋ ಸೇವೆ ಮೊಟಕು ಗೊಳಿಸುವಂತೆ ಸೂಚನೆ ನೀಡಿದ್ದಾರೆ.


ಇನ್ನು ಓಲಾ ಉಬರ್ ಆಟೋ ಸೇವೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಆರ್ ಟಿಒ  ಅಧಿಕಾರಿಗಳು ರಸ್ತೆಗಿಳಿದು, ಅನಧಿಕೃತ ಓಲಾ ಊಬರ್ ಆಟೋ ಗಳ ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ಆ್ಯಪ್ ಆಧಾರಿತ ಹೆಸರಿನಲ್ಲಿ ಆಟೋ ಸಂಚಾರ ಕಂಡು ಬಂದರೆ ಸ್ಥಳದಲ್ಲಿಯೇ ಐದು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. 


ಇದನ್ನೂ ಓದಿ : ಸ್ಪೂರ್ತಿದಾಯಕ ನಾಯಕರಿಗೆ ಸ್ಪಿರಿಟ್ ಆಫ್ ಟೈ ಟ್ರೈಲ್ ಬ್ಲೇಜರ್ಸ್ ಪ್ರಶಸ್ತಿ ಪ್ರದಾನ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.