ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಕೆಯಿಂದ ಪಾವಿತ್ರ್ಯತೆಗೆ ಧಕ್ಕೆ : ಬೆಂಗಳೂರು ಟಿಟಿಡಿಯಲ್ಲಿ ಇಂದಿನಿಂದ ಪವಿತ್ರೋತ್ಸವ
ತಿರುಪತಿ ತಿಮ್ಮಪ್ಪನ ಸನ್ನಿಧಾನದ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿಯಲ್ಲಿ ಇಂದು ಸಂಜೆಯಿಂದ ಮೂರು ದಿನಗಳವರೆಗೆ ಪವಿತ್ರೋತ್ಸವ ನಡೆಯಲಿದೆ.
ಬೆಂಗಳೂರು : ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನೆಲೆಯಲ್ಲಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಟಿಟಿಡಿಯಲ್ಲಿ ಇಂದಿನಿಂದ ನಡೆಯಲಿದೆ ಪವಿತ್ರೋತ್ಸವ ನಡೆಯಲಿದೆ.
ಸಂಜೆ 6 ಗಂಟೆಯಿಂದ ಸೋಮವಾರದವರೆಗೆ ಶುದ್ದಿಕಾರ್ಯ ಜರುಗಲಿದೆ. ಈ ಪವಿತ್ರೋತ್ಸವ ಕಾರ್ಯ ಮೂರು ದಿನಗಳ ಕಾಲ ನಡೆಯಲಿದೆ.
ತಿರುಪತಿ ತಿಮ್ಮಪ್ಪನ ಸನ್ನಿಧಾನದ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ಇದೀಗ ಸಂಚಲನ ಉಂಟು ಮಾಡಿದೆ. ಭಕ್ತರ ಧಾರ್ಮಿಕ ಭಾವನೆಗೆ ಇದು ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿಯಲ್ಲಿ ಇಂದು ಸಂಜೆಯಿಂದ
ಮೂರು ದಿನಗಳವರೆಗೆ ಪವಿತ್ರೋತ್ಸವ ನಡೆಯಲಿದೆ.
ಇದನ್ನೂ ಓದಿ : ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಮೀಟಿಂಗ್
ಪವಿತ್ರೋತ್ಸವದ ಅಂಗವಾಗಿ ಮೊದಲ ದಿನ ಆಚಾರ್ಯವರನಮ್, ಎರಡನೇ ದಿನ ಹೋಮ, ಮೂರನೇ ದಿನ ಪವಿತ್ರ ಸಮರ್ಪಣ ಹೋಮ ನಡೆಯಲಿದೆ.
ಮೂರು ದಿನ ಪವಿತ್ರೋತ್ಸವ ಏನೆಲ್ಲ ನಡೆಯಲಿದೆ..?
ಮೊದಲ ದಿನ ಅಂದರೆ ಇಂದು ಸಂಜೆ 6:30 - ಆಚಾರ್ಯವರನಮ್
- ಸಂಜೆ 7:30 - ಅಂಕುಣಾರ್ಪಣಮ್
- ರಾತ್ರಿ 8:30 - ಏಕಾಂತ ಸೇವೆ
ಸೆಪ್ಟಂಬರ್ 28 ಶನಿವಾರ (ಎರಡನೇ ದಿನ )
- ಬೆಳಗ್ಗೆ 8:30- ಯಾಗಶಾಲ ವೈದಿಕ
- ಬೆಳಗ್ಗೆ 10:30-11:30 - ಸ್ನಾಪನ ತಿರುವಂಜನಮ್
- ಸಂಜೆ 6:30 - ಯಾಗಶಾಲ ವೈದಿಕ , ಪವಿತ್ರ ಪ್ರತಿಷ್ಟ
- ರಾತ್ರಿ 8:30 - ಏಕಾಂತ ಸೇವೆ
ಸೆಪ್ಟಂಬರ್ 29 ಭಾನುವಾರ (ಮೂರನೇ ದಿನ )
- ಬೆಳಗ್ಗೆ 8:30 - ಯಾಗಶಾಲ ವೈದಿಕ
- ಬೆಳಗ್ಗೆ 10:30-11:30 - ಸ್ನಾಪನ ತಿರುವಂಜನಮ್
- ಮಧ್ಯಾಹ್ನ 2:30-01:30 - ಪವಿತ್ರ ಸಮರ್ಪಣ
- ಸಂಜೆ 6:30 - ಯಾಗಶಾಲ ವೈದಿಕ
ಇದನ್ನೂ ಓದಿ : ಭವಿಷ್ಯದಲ್ಲಿ ಎದುರಾಗೋ ಕಾನೂನು ಸಂಕಷ್ಟದಿಂದ ರಕ್ಷಣೆ
ಈ ಪವಿತ್ರೋತ್ಸವಕ್ಕೆ ತಿರುಪತಿಯಿಂದ 10 ಅರ್ಚಕರ ತಂದ ಆಗಮಿಸಲಿದೆ. ಈ ಅರ್ಚಕರಿಂದ ಮೂರು ದಿನದ ಪೂಜೆ,ಹೋಮ,ಹವನ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಮಂಗಳವಾರ ದೇಗುಲದ ಶುದ್ಧಿಕಾರ್ಯ ನಡೆಸಲಾಗಿದೆ. ಪವಿತ್ರೋತ್ಸವ ಶುದ್ದಿಕಾರ್ಯದಲ್ಲಿ ಭಾಗಿಯಾಗಲು ಭಕ್ತರಿಗೂ ಅವಕಾಶ ಕಲ್ಪಿಸಲಾಗಿದೆ. ಇಬ್ಬರು 1 ಸಾವಿರ ರೂಪಾಯಿ ರಶೀದಿ ಪಡೆದು ಪೂಜೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.