ಶಿವಮೊಗ್ಗ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣವನ್ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲುಶಿತ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಗಳಿಗೆ ಪ್ರತಿಯಾಗಿ ಆರಂಭಿಕ ಹಂತದಲ್ಲಿಯೇ ಬಿಗಿಯಾದ ನಿಲುವು ತೆಗೆದುಕೊಳ್ಳಬೇಕಿತ್ತು. ಈ ಸಂಬಂಧ ಆರಂಭದಲ್ಲಿಯೇ ಸಲಹೆಗಳನ್ನ ಕೊಟ್ಟಿದ್ದೇನೆ.ಸರ್ಕಾರದ ನಿರ್ಲಕ್ಷ್ಯದ ಮನೋಭಾವಗಳು ಹಾಗೂ ಘಟನೆಗಳ ಹಿನ್ನೆಲೆಯಲ್ಲಿರುವ ಕಾಣದ ಕೈಗಳು, ಸಮಾಜದಲ್ಲಿ ವಿಶ್ವಾಸದ ಕೊರತೆಯನ್ನು ಸೃಷ್ಟಿಸಿ, ಇಂತಹ ಸನ್ನಿವೇಶಗಳಿಗೆ ಕಾರಣವಾಗುತ್ತಿವೆ.


ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗಿರಬೇಕು ಎಂಬ ಕಲ್ಪನೆಯನ್ನು ಹಾಳುಮಾಡುವಂತಹ ವಾತಾವರಣ ಕಳೆದ ಮೂರು ನಾಲ್ಕು ತಿಂಗಳಿಂದ ನಡೆಯುತ್ತಿದೆ. ಇಂತಹ ಘಟನೆ ಇನ್ನೂ ಒಂದು ವರ್ಷ ನಡೆಯುತ್ತದೆ. ಹುಬ್ಬಳ್ಳಿಯ ಘಟನೆ ಸಂಬಂಧ ಜೀಪ್​ ಮೇಲೆ ಹತ್ತಿ ಪ್ರಚೋದಿಸಿದವರನ್ನ ಬಂಧಿಸಿ ಎಂದಿದ್ದೆ. ಸದ್ಯ ಆತನನ್ನ ಬಂಧಿಸಿದ್ದಾರೆ.


ಆದರೆ, ಬಿಜೆಪಿ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುತ್ತಿದೆ. ಈ ಕೆಲಸಕ್ಕೆ ಕಾಂಗ್ರೆಸ್‌ನ ಕೆಲವು ಗುಂಪು ಪೆಟ್ರೋಲ್​ ಸುರಿಯುತ್ತಿದೆ. ಈ ನಿಟ್ಟಿನಲ್ಲಿ ಜನತೆಯು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ರು. ಸರ್ಕಾರ ಈ ಘಟನೆಗೆ ಯಾರೇ ಕಾರಣಕರ್ತರಾಗಿದ್ರು ಅದರ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕಿದೆ.


ಇದನ್ನೂ ಓದಿ : ಹುಬ್ಬಳ್ಳಿ ಗಲಭೆ: ‘ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ?’


ಕುಮಾರಸ್ವಾಮಿ, ಕಾಂಗ್ರೆಸ್‌ನವರೇನು ಅಪ್ಪಟ ಚಿನ್ನವೇ ಎಂದು ಕುಟುಕಿದ್ರು.


ಇದನ್ನೂ ಓದಿ : ಹುಬ್ಬಳ್ಳಿ ಗಲಭೆಗೂ ಕೆಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆಗೂ ಸಾಮ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ


ಜನತೆ ಈ ಸಂಬಂಧ ಯಾವ ಪಕ್ಷ ಪರ್ಸೆಂಟೇಜ್​ ವಿಚಾರದಲ್ಲಿ ಒಂದಿಷ್ಟು ಸಮಂಜಸವಾಗಿ ನಡೆದುಕೊಂಡಿದೆ ಅಂತವರಿಗೆ ಮಣೆ ಹಾಕಬೇಕು ಎಂ ಕುಮಾರಸ್ವಾಮಿ, ನನ್ನ ಕಾಲಾವಧಿಯಲ್ಲಿ ಕಂಟ್ರಾಕ್ಟರ್‌ಗಳ ಮನೆ ಬಾಗಿಲಿಗೆ ಎನ್​ಒಸಿಗಳು ಹೋಗುತ್ತಿದ್ದವು ಎಂದರು.


ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಚಾರದ ವಿರುದ್ಧ ಹೊರಾಟ ಮಾಡಿದವರು ನಾವು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮನೆಯಲ್ಲಿ ಕುಳಿತಿದ್ದರು. ನಮ್ಮ ಹೋರಾಟದ ಪ್ರತಿಫಲವಾಗಿ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರು ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.


ಈಶ್ವರಪ್ಪನವರ ವಿಚಾರದಲ್ಲಿ ರಾಜೀನಾಮೆಗೆ ನಾನೇ ಡಿಮ್ಯಾಂಡ್ ಮೊದಲು ಮಾಡಿದ್ದೆ. ಬಿಜೆಪಿ ಪರವಾಗಿ ನಾನಿಲ್ಲ. ಸತ್ಯಾಸತ್ಯತೆ ಹೊರಕ್ಕೆ ಬರಬೇಕು. ಈ ಹಿನ್ನೆಲೆಯಲ್ಲಿ ಈಶ್ವರಪ್ಪನವರು ರಾಜೀನಾಮೆ ಕೊಡಬೇಕಿತ್ತು. ಈಗವರ ಬಂಧನ ವಿಚಾರ ಅಗತ್ಯವಿಲ್ಲ ಎಂದಿದ್ದೇನೆ ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.