ಹುಬ್ಬಳ್ಳಿ ಗಲಭೆ: ‘ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ?’

ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಬಂಧನವಾಗಿದೆ. ಆದರೆ ರಿಂಗ್ ಮಾಸ್ಟರ್ ಯಾರೆಂದು ತಿಳಿಯಬೇಕಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Apr 22, 2022, 01:29 PM IST
  • ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಸೇರಿ 126 ಸಮಾಜ ಘಾತುಕರ ಬಂಧನವಾಗಿದೆ
  • ಕಾಂಗ್ರೆಸ್ ರಣಹದ್ದುಗಳಿಗೆ ಹುಬ್ಬಳ್ಳಿ ಘಟನೆ ನಿರೀಕ್ಷಿತ ಪ್ರಮಾಣದಲ್ಲಿ ಸಂತೋಷ ನೀಡಿಲ್ಲ
  • ಹುಬ್ಬಳ್ಳಿ ಗಲಭೆ ಮಾಸ್ಟರ್ ಮೈಂಡ್ ಬಂಧನವಾಗಿದ್ದು, ರಿಂಗ್ ಮಾಸ್ಟರ್ ಯಾರೆಂದು ತಿಳಿಯಬೇಕಲ್ಲವೇ?
ಹುಬ್ಬಳ್ಳಿ ಗಲಭೆ: ‘ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ?’ title=
ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಕಿಡಿಕಾರಿದೆ

ಬೆಂಗಳೂರು: ‘ಹುಬ್ಬಳ್ಳಿ ಗಲಭೆಯನ್ನು ರಾಜ್ಯ ಸರ್ಕಾರ ಕೇವಲ 3 ಗಂಟೆಯಲ್ಲಿ ತಹಬದಿಗೆ ತಂದಿದೆ, ಮತಾಂಧ ಅಲ್ಪಮತೀಯ‌ ಆರೋಪಿಗಳ ಬಂಧನವಾಗಿದೆ. ಆದರೆ, ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಕಾಂಗ್ರೆಸ್ ಹುಯಿಲೆಬ್ಬಿಸುತ್ತಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ. ‘ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಸಂಪತ್ ರಾಜ್ ಸೇರಿ  110 ಕ್ಕೂ ಹೆಚ್ಚು ಮತಾಂಧರ ಬಂಧನ. ಪಾದರಾಯನಪುರ ಗಲಭೆಯಲ್ಲಿ 116 ದಂಗೆಕೋರರ ಬಂಧನ. ಉಪ್ಪಿನಂಗಡಿಯ ಠಾಣೆಯ ಮುಂದೆ ಗಲಭೆ ಮಾಡಿದವರ ಬಂಧನ. ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಸೇರಿ 126 ಸಮಾಜ ಘಾತುಕರ ಬಂಧನವಾಗಿದೆ’ ಎಂದು ಹೇಳಿದೆ.

ಇದನ್ನೂ ಓದಿ: Dingaleshwar Swamiji : ಸಚಿವ ಸಿಸಿ ಪಾಟೀಲ್ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರ ಶ್ರೀಗಳು

‘ಕಾಂಗ್ರೆಸ್ ರಣಹದ್ದುಗಳಿಗೆ ಹುಬ್ಬಳ್ಳಿ ಘಟನೆ ನಿರೀಕ್ಷಿತ ಪ್ರಮಾಣದಲ್ಲಿ ಸಂತೋಷ ನೀಡಿಲ್ಲ. ಸಮಾಜದ ಶಾಂತಿ ಸರ್ವನಾಶವಾಗುವಂಥ ಫಲಿತಾಂಶವನ್ನು ಕಾಂಗ್ರೆಸ್ಸಿಗರು ಬಯಸಿದ್ದರು. ಆದರೆ ರಾಜ್ಯ ಬಿಜೆಪಿ ಸರ್ಕಾರ ಮಿಂಚಿನ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿ ನಿಭಾಯಿಸಿದ್ದು ಹರಳೆಣ್ಣೆ ಕುಡಿಸಿದ ಅನುಭವ ನೀಡಿದೆ’ ಎಂದು ಬಿಜೆಪಿ ಟೀಕಿಸಿದೆ.

‘ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಬಂಧನವಾಗಿದೆ. ಆದರೆ ರಿಂಗ್ ಮಾಸ್ಟರ್ ಯಾರೆಂದು ತಿಳಿಯಬೇಕಲ್ಲವೇ? ಆ ರಿಂಗ್‌ ಮಾಸ್ಟರ್‌ #ಮಹಾನಾಯಕ ಆಗಿರಬಹುದೇ ಅಥವಾ #ಮೀರ್‌ಸಾದಿಕ್ ಆಗಿರಬಹುದೇ?’ ಎಂದು ಬಿಜೆಪಿ ವ್ಯಂಗ್ಯವಾಗಿ ಪ್ರಶ್ನಿಸಿದೆ.

ಇದನ್ನೂ ಓದಿ: ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News