ನವ ದೆಹಲಿ : ದೇಶಾದ್ಯಂತ ಅಗ್ಗದ ಬೆಲೆಗೆ 4ಜಿ ಸೇವೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿದ್ದ ರಿಲಯನ್ಸ್ ಸಂಸ್ಥೆ ಮುಂಬರುವ ವರ್ಷದಲ್ಲಿ ತನ್ನ ಜಿಯೋ ಗ್ರಾಹಕರಿಗೆ ನಿರಾಶೆ ಉಂಟುಮಾಡಲಿದೆ. 


COMMERCIAL BREAK
SCROLL TO CONTINUE READING

ನಿಮಗೆ ತಿಳಿದಂತೆ ಕಳೆದ ದೀಪಾವಳಿ ಸಂದರ್ಭದಲ್ಲಿ ಜಿಯೋ ತನ್ನ ಕರೆಗಳ ದರವನ್ನು ಹೆಚ್ಚಿಸಿತ್ತು. ಆದರೆ ಈ ಕರೆ ದರಗಳು ಮುಂದಿನ ವರ್ಷ ಮತ್ತಷ್ಟು ಹೆಚ್ಚಲಿದೆ. ಇದರಿಂದ ಇದುವರೆಗೂ ಟೆಲಿಕಾಂ ಸೇವಾ ಕಂಪನಿಗಳ ನಡುವಿನ ದರ ಸಮರಕ್ಕೆ ತೆರೆ ಬೀಳಲಿದೆ ಎಂದು ವರದಿಯೊಂದು ಹೇಳಿದೆ. 


ಜಿಯೋ ಮಾರುಕಟ್ಟೆಗೆ ಬಂದ ಮೊದಲ ವರ್ಷದಲ್ಲಿ ಕರೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಟ್ಯಾರಿಫ್ ನೀಡಿತ್ತು. ಹೀಗಾಗಿ ಇತರ ಟೆಲಿಕಾಂ ಕಂಪನಿಗಳೂ ಸಹ ಕರೆ ದರಗಳನ್ನು ಕಡಿಮೆಗೊಳಿಸಿದ್ದವು.


ಆದರೆ ಮುಂದಿನ ವರ್ಷದಿಂದ ರಿಲಯನ್ಸ್ ಸಂಸ್ಥೆ ತನ್ನ 4 ಜಿ ಸೇವೆ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಮೂಲಗಳು ಸುಳಿವು ನೀಡಿವೆ. ಹೀಗಾದರೆ, ಈಗಾಗಲೇ ರಿಲಯನ್ಸ್ ಜಿಯೋ ಸೇವೆ ಒಗ್ಗಿಕೊಂಡಿರುವ ಗ್ರಾಹಕರಿಗೆ ನಿಜಕ್ಕೂ ನಿರಾಶೆಯಾಗಲಿದೆ.