ಬೆಂಗಳೂರು: ಪುಟ್ಟ ಪುಟ್ಟ ಮಕ್ಕಳು ಬೆನ್ನಮೇಲೆ ಬ್ಯಾಗು ಹಾಕೊಂಡು  ಶಾಲೆ ಕಡೆ ಬೆಳಗ್ಗೆ ಮುಖ ಮಾಡಿದ್ರೆ, ವಾಪಸ್ ಬರೋದು ಮಧ್ಯಾಹ್ನ ಇಲ್ಲ ಸಂಜೆ. ತನ್ನ ಅರ್ಧ ದಿನವನ್ನ ಶಾಲೆಯಲ್ಲಿ ಕಳೆದುಕೊಂಡು ಬರೋ ಮಕ್ಕಳು ಉಳಿದ ಸ್ವಲ್ಪ ಸಮಯದಲ್ಲಿ ಕೂಡ ಮನೆಯವರ ಜೊತೆ ಕಳೆಯೋದಕ್ಕೆ ಆಗಲ್ಲ ಅಷ್ಟೊಂದು ತಲೆ ಭಾರವಾದಂತ ಹೋಂ ವರ್ಕ್​ಗಳ ರಾಶಿಯನ್ನು ಶಾಲೆಗಳು ಕೊಡುತ್ತಿವೆ. ಪೋಷಕರು ಕೂಡ ನೈತಿಕ ಶಿಕ್ಷಣ ಹೇಳಿಕೊಡುವ ಬದಲು ಮಕ್ಕಳ ಜೊತೆ ಕೂತು ಹೋಂ ವರ್ಕ್ ಹೇಳಿ ಕೊಡೋದೇ ದೊಡ್ಡ ಕೆಲಸವಾಗಿಬಿಡುತ್ತೆ. ಹೀಗಾಗಿ ಚಿಕ್ಕ ಮಕ್ಕಳಿಗೆ ಆದಷ್ಟು ಹೋಂ ವರ್ಕ್ ಪದ್ದತಿಯನ್ನ ತೆರವುಮಾಡಬೇಕೆಂದು ಪೋಷಕರು, ಸೇರಿ ಮಕ್ಕಳ ತಜ್ಞರು ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಸರ್ಕಾರ ಕೂಡ ಮಕ್ಕಳ ಮನಸ್ಥಿತಿ ತಕ್ಕಹಾಗೆ ಚಿಂತಿಸಿದೆ.


COMMERCIAL BREAK
SCROLL TO CONTINUE READING

ಈ ಹೋಂ ವರ್ಕ್ ವಿಚಾರದ ಬಗ್ಗೆ ಶಿಕ್ಷಣ ಇಲಾಖೆ ಕೂಡ ದಿಟ್ಟ ನಿರ್ಣಯ ಕೈಗೊಂಡಿದ್ದು ಇನ್ಮುಂದೆ "ಎರಡನೇ ತರಗತಿ"ಯವರೆಗಿನ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ ಎಂಬ ಬಗ್ಗೆ ಆಲೋಚಿಸಿದೆ. 


ಇದನ್ನೂ ಓದಿ- ನರ್ಸ್‌ಗಳಿಗೆ ಸರ್ಟಿಫಿಕೇಟ್ ಕೊಡೋದರಲ್ಲಿ ಅಶ್ವತ್ಥ ನಾರಾಯಣ ಅವರಿಗೆ ದೊಡ್ಡ ಇತಿಹಾಸವಿದೆ: ಹೆಚ್‌ಡಿಕೆ ಹೊಸ ಬಾಂಬ್


ಸರ್ಕಾರಿ ಶಾಲೆ ಮಕ್ಕಳಿಗೆ ಈಗಾಗಲೇ ನಲಿ-ಕಲಿ ರೀತಿ ಶಿಕ್ಷಣ ಒದಗಿಸಲು ಚಿಂತನೆ ನಡೆಸಿದೆ. ಈ ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಶಾಲೆ ಮಕ್ಕಳಿಗೆ ನಲಿ-ಕಲಿ ಪದ್ದತಿಯನ್ನು ಜಾರಿ ಮಾಡಲು ಅಂತಿಮವಾದ ಅದೇಶಕ್ಕಾಗಿ ಶಿಕ್ಷಣ ಇಲಾಖೆ ಕಾಯುತ್ತಿದೆ. 


ಇದನ್ನೂ ಓದಿ- ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ಯುವಕ ಆತ್ಮಹತ್ಯೆಗೆ ಶರಣು...


2ನೇ ತರಗತಿವರೆಗೆ ಮಕ್ಕಳಿಗೆ ಹೋಂ ವರ್ಕ್ ನೀಡುವಂತಿಲ್ಲ-ಎನ್ಇಪಿ
ರಾಜ್ಯದಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಯಾವುದೇ ರೀತಿಯಾದಂತಹ ಹೋಂ ವರ್ಕ್​ಗಳನ್ನು ನೀಡುವಂತಿಲ್ಲ ಎಂಬ ಉಲ್ಲೇಖವಿದೆ. ಆದ್ದರಿಂದ  ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‌ ವರ್ಕ್ ನೀಡುವಂತಿಲ್ಲ. 


ಆದ್ರೆ ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ. ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಹೇರಬಾರದು. ಅನ್ನೋ ಕಾರಣಕ್ಕೆ ಖಾಸಗಿ ಶಾಲೆಯಲ್ಲಿ  ಕೂಡ ಹೋಂ ವರ್ಷ ನಿಷೇಧದ ಬಗ್ಗೆ ಶಿಕ್ಷಣ ಇಲಾಖೆ ಒಲವು ತೋರಿದೆ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಸಹ ಸ್ಪಷ್ಟಪಡಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.