ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ಯುವಕ ಆತ್ಮಹತ್ಯೆಗೆ ಶರಣು...

ಎಸ್ಸೆಸ್ಸೆಲ್ಸಿ ಓದಿದ್ದ ತಿಮ್ಮಣ್ಣ ಕನ್ನಡದ ಕೋಟ್ಯಧಿಪತಿಯಲ್ಲಿ 6.40 ಲಕ್ಷ ರೂ. ಗೆದ್ದಿದ್ದರು. ಟಿಕ್ ಟಾಕ್, ಹಾಸ್ಯ, ಸಂಗೀತದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ತಿಮ್ಮಣ್ಣ, ಖೋ ಖೋ ಕ್ರೀಡಾಪಟು ಸಹ ಆಗಿದ್ದು ಮಕ್ಕಳಿಗೆ ತರಬೇತಿ ನೀಡುತ್ತಿದ್ದರು.

Written by - Yashaswini V | Last Updated : May 5, 2022, 01:20 PM IST
  • ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗಿಯಾಗಿ ಖ್ಯಾತಿ ಪಡೆದಿದ್ದ ತಿಮ್ಮಣ್ಣ
  • ಎಸ್ಸೆಸ್ಸೆಲ್ಸಿ ಓದಿದ್ದ ತಿಮ್ಮಣ್ಣ ಗುರಡ್ಡಿ ಹೆಸ್ಕಾಂ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು.
  • ಹೊಸದಾಗಿ ಮನೆ ಕಟ್ಟಿಸಲು ದುಡಿದ ಹಣದ ಜೊತೆ ಸಾಲ ಮಾಡಿದ್ದರು.
ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ಯುವಕ ಆತ್ಮಹತ್ಯೆಗೆ ಶರಣು... title=
Kannadada kotyadipati Timmanna guraddi committed suicide in bagalakote

ಬಾಗಲಕೋಟೆ: ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ 6.40 ಲಕ್ಷ ರೂ. ಗೆದ್ದಿದ್ದ ತಿಮ್ಮಣ್ಣ ಗುರಡ್ಡಿ  ( 27)  ಬಾಗಲಕೋಟೆ ಜಿಲ್ಲೆ ಅಮಲಝರಿ ಗ್ರಾಮದ ಹೊರವಲಯದ ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಎಸ್ಸೆಸ್ಸೆಲ್ಸಿ ಓದಿದ್ದ ತಿಮ್ಮಣ್ಣ ಗುರಡ್ಡಿ  ಹೆಸ್ಕಾಂ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಹೊಸದಾಗಿ ಮನೆ ಕಟ್ಟಿಸಲು ದುಡಿದ ಹಣದ ಜೊತೆ ಸಾಲ ಮಾಡಿದ್ದರು. ಸಾಲ ತೀರಿಸಲಾಗದೇ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ- 'ಪೂನಾದಲ್ಲಿ ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್ ನವರೇ'

ಕನ್ನಡದ ಕೋಟ್ಯಧಿಪತಿಯಲ್ಲಿ  ಭಾಗಿಯಾಗಿ ಖ್ಯಾತಿ ಪಡೆದಿದ್ದ ತಿಮ್ಮಣ್ಣ, ಟಿಕ್ ಟಾಕ್, ಹಾಸ್ಯ, ಸಂಗೀತದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಖೋ ಖೋ ಕ್ರೀಡಾಪಟು ಸಹ ಆಗಿದ್ದ ಇವರು ಮಕ್ಕಳಿಗೆ ತರಬೇತಿ ನೀಡುತ್ತಿದ್ದರು.

ಇಂದು ಹೊಸಮನೆ ಗೃಹಪ್ರವೇಶ ಮಾಡಬೇಕಿದ್ದ ತಿಮ್ಮಣ್ಣ:
ತಿಮ್ಮಣ್ಣ ಗುರಡ್ಡಿ ತಾವು ದುಡಿದು ಸಂಪಾದಿಸಿದ್ದ ಹಣದ ಜೊತೆಗೆ ಸಾಲ ಮಾಡಿ 18 ಲಕ್ಷ ರೂ. ಖರ್ಚು ಮಾಡಿ ಮನೆ ಕಟ್ಟಿಸಿದ್ದರು. ಇಂದು (ಮೇ 05) ರಂದು ಅವರ ಹೊಸ ಮನೆ ಗೃಹಪ್ರವೇಶಕ್ಕಾಗಿ ಸಮಯ ನಿಗದಿ ಆಗಿತ್ತು. ಅದಕ್ಕಾಗಿ ತಿಮ್ಮಣ್ಣ ಸ್ವಾಮೀಜಿಗೂ ಕೂಡ ಆಹ್ವಾನ ನೀಡಿದ್ದರು. ಆದರೆ, ಅವರ ಕನಸಿನ ಮನೆ ಗೃಹಪ್ರವೇಶಕ್ಕೂ ಮುನ್ನವೇ ಆತ್ಮಹತ್ಯೆಗೆ ಶರಣಾಗಿರುವುದು ಆಘಾತವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ- Siddaramaiah : 'PSI 5ನೇ ರ‍್ಯಾಂಕ್ ದರ್ಶನ್, ನಾಗೇಶ್ ಗೌಡ ಅಶ್ವತ್ಥ ನಾರಾಯಣ್ ಸಂಬಂಧಿಕರು'

ತಿಮ್ಮಣ್ಣ ಗುರಡ್ಡಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರ ಸ್ನೇಹಿತರು, ತಿಮ್ಮಣ್ಣನಿಗೆ  ದುಡ್ಡಿನ ಸಮಸ್ಯೆ ಇರಲಿಲ್ಲ. ಅವರಿಗೆ ಒಳ್ಳೆ ಸಂಬಳ ಬರುತ್ತಿತ್ತು. ಅವರ ಸ್ಯಾಲರಿ ಮೇಲೆ 16 ಲಕ್ಷ ರೂ. ಬ್ಯಾಂಕ್ ಸಾಲ ತೆಗೆದುಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ದಿನ ರಾತ್ರಿ 10 ಗಂಟೆಗೆ ಅಮಲಝರಿ ಗ್ರಾಮದ ಸ್ನೇಹಿತನ ಪಾನ್ ಶಾಪ್ ಗೆ ಕೂಡ ಹೊದಿದ್ದರು. ಈ ವೇಳೆ ಮನೆ ಗೃಹ ಪ್ರವೇಶದ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡಿದ್ದರು. ಆದರೆ, ಇಂದು ಬೆಳಿಗ್ಗೆ 7 ಗಂಟೆಗೆ ಆತ್ಮಹತ್ಯೆ ಸುದ್ದಿ ಕೇಳಿ ಆಶ್ಚರ್ಯವಾಗಿದೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News